ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಣಿಪಾಲ್ ಆಸ್ಪತ್ರೆಯಲ್ಲಿ ಯುಆರ್ ಎ ಕೊನೆ ಕ್ಷಣಗಳು

By Mahesh
|
Google Oneindia Kannada News

ಬೆಂಗಳೂರು, ಆ.22: ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಪ್ರೊ. ಯು.ಆರ್ ಅನಂತಮೂರ್ತಿ ಅವರನ್ನು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೀರ್ಘಕಾಲದಿಂದ ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಅನಂತಮೂರ್ತಿ(82) ಅವರು ಬಳಲುತ್ತಿದ್ದರು. ಅದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.[ವೈದ್ಯರ ಅಧಿಕೃತ ಹೇಳಿಕೆ ಇಲ್ಲಿದೆ]

ಈ ಹಿಂದಿನ ಸುದ್ದಿ ಅಪ್ದೇಟ್ ಗಳ ವಿವರ ಇಲ್ಲಿದೆ

ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ತುರ್ತು ನಿಗಾ ಘಟಕ(ಐಸಿಯು) ದಲ್ಲಿ ಅನಂತಮೂರ್ತಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಹುಕಾಲದಿಂದ ಕಿಡ್ನಿ ತೊಂದರೆ ಅನುಭವಿಸಿದ್ದು, ಕಾಲಕಾಲಕ್ಕೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು.[ಅನಂತಮೂರ್ತಿ ಬಗ್ಗೆ ಏನಿದು ಇಂಥ ಪ್ರಮಾದ?]

ಸಮಯ 6.00: ಅನಂತಮೂರ್ತಿ ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿದೆ.
* ರಕ್ತದೊತ್ತಡ ಹತೋಟಿಗೆ ಬಂದಿದ್ದು, ಇನ್ನೆರಡು ದಿನಗಳ ಕಾಲ ವೆಂಟಿಲೇಟರ್ ನಲ್ಲೇ ಇರಬೇಕಾಗುತ್ತದೆ.
* ಐಸಿಯುನಲ್ಲಿ ಡಾ.ಸುನೀಲ್ ಕಾರಂತ್ ನೇತೃತ್ವದ ತಂಡ ನಿಗಾ ವಹಿಸಿದೆ ಎಂದು ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.
ಸಮಯ 15.30: ಯು.ಆರ್ ಆನಂತಮೂರ್ತಿ ಅವರು ಪ್ರಜ್ಞಾಸ್ಥಿತಿಯಲ್ಲಿದ್ದಾಗ ನನ್ನನ್ನು ಗುರುತು ಹಿಡಿದು ವಿಶ್ ಮಾಡಿದರು ಎಂದು ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.
* ಬೆಳಗ್ಗೆ ಸುದ್ದಿ ವಾಹಿನಿಯಲ್ಲಿ ಅನಂತಮೂರ್ತಿ ಅವರ ಅನಾರೋಗ್ಯದ ಬಗ್ಗೆ ಸುದ್ದಿ ಬರುತ್ತಿದ್ದಂತೆ, ಆಪ್ತರು, ಮಿತ್ರರು ಹಾಗೂ ಅಭಿಮಾನಿಗಳು ಮಣಿಪಾಲ್ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ.
* ಸಾಹಿತಿಗಳಾದ ಜಯಂತ್ ಕಾಯ್ಕಿಣಿ, ಗಿರೀಶ್ ಕಾಸರವಳ್ಳಿ, ವಿವೇಕ್ ಶಾನುಭಾಗ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
* ಅನಂತಮೂರ್ತಿ ಅವರು ಐಸಿಯುನಲ್ಲಿರುವುದರಿಂದ ಸಾರ್ವಜನಿಕರಿಗೆ ಪ್ರವೇಶ ನೀಡಲಾಗುತ್ತಿಲ್ಲ.

Kannada Writer Prof UR Ananthamurthy Hospitalized

ಮಣಿಪಾಲ್ ವೈದ್ಯ ಸುದರ್ಶನ್ ಬಲ್ಲಾಳ್ ಅವರ ರ ಸುದಿಗೋಷ್ಠಿ ವಿವರ:
* ಕಳೆದ 2 ವರ್ಷದಿಂದ ಅನಂತಮೂರ್ತಿ ಅವರು ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದಾರೆ.
* ಅನಂತಮೂರ್ತಿ ಅವರು ನಿರಂತರವಾಗಿ ಡಯಾಲಿಸೀಸ್ ಮಾಡಿಸಿಕೊಳ್ಳುತ್ತಿದ್ದರು. ಹೀಗಾಗಿ ಕಿಡ್ನಿ ಕಾರ್ಯನಿರ್ವಹಿಸುತ್ತಿತ್ತು.
* ಅನಂತಮೂರ್ತಿ ಕಿಡ್ನಿ, ಹೃದಯ, ಶ್ವಾಸಕೋಶ ಸಮಸ್ಯೆ ಕೂಡಾ ಇದೆ.
* ಅನಂತಮೂರ್ತಿ ಅವರಿಗೆ ಕಳೆದ 15 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಎರಡು ಕಿಡ್ನಿಗಳು ವೈಫಲ್ಯವಾಗಿದೆ.
* ಎರಡು ದಿನಗಳಿಂದ ವೆಂಟಿಲೇಟರ್ ಸಪೋರ್ಟ್ ನಲ್ಲಿರುವ ಅನಂತಮೂರ್ತಿ ಅವರಿಗೆ ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ.
* ಯುಆರ್ ಎ ಅವರಿಗೆ ತಗುಲಿರುವ ಸೋಂಕು ಹರಡದಂತೆ ಎಚ್ಚರವಹಿಸಲಾಗುತ್ತಿದೆ ಎಂದರು. [ದೇವರ ಬಗ್ಗೆ ಕಲಬುರ್ಗಿ ಹೇಳಿದ್ದು]

Kannada Writer Prof UR Ananthamurthy Hospitalized

ಕಳೆದ ಎರಡು ದಿನಗಳಿಂದ ತೀವ್ರ ಸಮಸ್ಯೆ ಎದುರಿಸಿದ ಅನಂತಮೂರ್ತಿ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಅನಂತಮೂರ್ತಿ ಅವರ ಆರೋಗ್ಯ ಸುಧಾರಣೆಯಾಗಲಿದೆ ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಳಿಗೆಯಲ್ಲಿ ಜನಿಸಿದ ಯುಆರ್ ಅನಂತಮೂರ್ತಿ ಅವರು ಸಂಸ್ಕಾರ, ಘಟಶ್ರಾದ್ದ, ಬರ, ಭಾರತೀಪುರ ಮುಂತಾದ ಉತ್ತಮ ಕೃತಿಗಳನ್ನು ನೀಡಿದ್ದಾರೆ. ಅನಂತಮೂರ್ತಿ ಅವರ ಕಾದಂಬರಿಗಳು, ಅವರ ಚಿಂತನೆ ರಾಷ್ಟ್ರಮಟ್ಟದಲ್ಲಿ ಚರ್ಚಿತವಾಗಿವೆ.

English summary
Kannada Writer Prof UR Ananthamurthy(82) Hospitalized. UR Ananthamurthy is suffering from Kidney failure and admitted to Manipal Hospital, Bangalore today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X