ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮದ್ಯರಾತ್ರಿ ವಿಸ್ತರಣೆ ಆಗುತ್ತಾ?

|
Google Oneindia Kannada News

ಬೆಂಗಳೂರು, ಏ. 23 : ಪರ ವಿರೋಧ ಚರ್ಚೆಯ ನಡುವೆಯೇ ರಾಜಧಾನಿ ಬೆಂಗಳೂರಿನಲ್ಲಿ ಮೂರು ತಿಂಗಳು ನೈಟ್ ಲೈಫ್ ಗೆ ಸರ್ಕಾರ ಅವಕಾಶ ನೀಡಿತ್ತು. ಸದ್ಯ ಅವಧಿ ಪೂರ್ಣಗೊಳ್ಳುತ್ತ ಬಂದಿದ್ದು, ಈ ಅವಧಿಯನ್ನು ಸರ್ಕಾರ ಕಾಯಂಗೊಳಿಸುವ ಸಾಧ್ಯತೆ ಇದೆ.

ಸದ್ಯ ಉದ್ಯಾನಗರಿ ಬೆಂಗಳೂರಿನಲ್ಲಿ ಸೋಮವಾರದಿಂದ ಗುರುವಾರದ ವರೆಗೆ ರಾತ್ರಿ 11ಗಂಟೆಯವರೆಗೆ ಹೋಟೆಲ್ ಮತ್ತು ಬಾರ್ ತೆರೆದಿರುತ್ತವೆ. ಶುಕ್ರವಾರ ಮತ್ತು ಶನಿವಾರ ರಾತ್ರಿ 1 ಗಂಟೆಯವರೆಗೆ ನಗರದಲ್ಲಿ ಬಾರ್, ರೆಸ್ಟೋರೆಂಟ್ ತೆರೆದಿರಲು ಅನುಮತಿ ನೀಡಲಾಗಿದೆ. ಮಾರ್ಚ್ ನಿಂದ ಈ ವ್ಯವಸ್ಥೆ ಮೂರು ತಿಂಗಳು ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ.

Karnataka

ಮೂರು ತಿಂಗಳ ನಂತರ ನೈಟ್ ಲೈಫ್ ಅವಧಿ ವಿಸ್ತರಣೆಯ ಸಾಧಕ ಬಾಧಕಗಳನ್ನು ಅಧ್ಯಯನ ನಡೆಸಿ ಅದನ್ನು ವಿಸ್ತರಿಸುವ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಗೃಹ ಸಚಿವ ಕೆಜೆ ಜಾರ್ಜ್ ಹೇಳಿದ್ದರು. ಸದ್ಯ ನೈಟ್ ಲೈಫ್ ಮೂರು ತಿಂಗಳ ಅವಧಿ ಮೇ 4ರಂದು ಅಂತ್ಯಗೊಳ್ಳಲಿದೆ. [ನೈಟ್ ಲೈಫ್ ವಿಸ್ತರಣೆಗೆ ಬಿಜೆಪಿ ವಿರೋಧ]

ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಗೃಹ ಸಚಿವ ಕೆಜೆ ಜಾರ್ಜ್, ನೈಟ್‌ ಲೈಫ್ ಜಾರಿಯಾಗಿ ಎರಡು ತಿಂಗಳು ಕಳೆದಿದೆ. ಮೂರು ತಿಂಗಳು ಕಳೆದ ಬಳಿಕ ಪ್ರಗತಿ ಪರಿಶೀಲನೆ ನಡೆಸಲಾಗುವುದು. ನೈಟ್‌ಲೈಫ್‌ಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ. ಮೂರು ತಿಂಗಳು ಪ್ರಾಯೋಗಿಕ ಅವಧಿ ಮುಗಿದ ಬಳಿಕ ಬಂದ ದೂರು-ಬೇಡಿಕೆ ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. [ಮದ್ಯರಾತ್ರಿ ವಿಸ್ತರಣೆಗೆ ಸಲಹೆ ನೀಡಿದ್ದು ಯಾರು?]

ಗೃಹ ಸಚಿವರ ಹೇಳಿಕೆಯಂತೆ ಕಳೆದ ಮಾ.4ರಂದು ನೈಟ್ ಲೈಫ್ ವಿಸ್ತರಣೆ ಅವಕಾಶ ನೀಡಿದ ನಂತರ ಬೆಂಗಳೂರಿನಲ್ಲಿ ಅವಘಡಗಳು, ತೊಂದರೆಗಳು ಕಾಣಿಸಿಕೊಂಡಿಲ್ಲ. ಆದ್ದರಿಂದ ಮೇ 4ರ ನಂತರ ಇದನ್ನು ಕಾಯಂಗೊಳಿಸುವ ಸಾಧ್ಯತೆ ಇದೆ. ಮದ್ಯರಾತ್ರಿ ವಿಸ್ತರಣೆ ಮಾಡಿದ ನಂತರ ವಿರೋಧ ವ್ಯಕ್ತಪಡಿಸಿದ್ದ ಪ್ರತಿಪಕ್ಷ ಬಿಜೆಪಿ ಮತ್ತು ವಿವಿಧ ಸಂಘಟನೆಗಳು ಇದಕ್ಕೆ ಅವಕಾಶ ನೀಡುತ್ತವೆಯೇ ಎಂದು ಕಾದು ನೋಡಬೇಕು.

ಹೊಸ ಪ್ರವಾಸೋದ್ಯಮ ನೀತಿಯನ್ನು ರಚಿಸಲು ರಾಜ್ಯ ಸರಕಾರ ಐಟಿ ಉದ್ಯಮಿ ಟಿ ವಿ ಮೋಹನದಾಸ್ ಪೈ ನೇತೃತ್ವದಲ್ಲಿ ರಚಿಸಿದ್ದ ಸಮಿತಿ, ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾದರೆ ರಾಜಧಾನಿಯಲ್ಲಿ ಪ್ರವಾಸಿಗರಿಗೆ ತಡರಾತ್ರಿಯವರೆಗೂ ಊಟೋಪಚಾರ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಲಾಗಿತ್ತು.

ಸಿಎಂ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮದ್ಯ ರಾತ್ರಿ ವಿಸ್ತರಣೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಮಾ.4ರಿಂದ ಮೂರು ತಿಂಗಳ ಅವಧಿಗೆ ಬೆಂಗಳೂರಿನ ನೈಟ್ ಲೈಫ್ ಅನ್ನು ವಿಸ್ತರಣೆ ಮಾಡಲಾಗಿತ್ತು.

English summary
Extended deadline from 11 pm till 1 am for bars and restaurants on Fridays and Saturdays in Bangalore come to end on May 4. will Karnataka government Extended this after May?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X