ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ಯಾಚಾರ ಎಂಬುದೇ ನಾಚಿಕೆಗೇಡಿನ ಸಂಗತಿ : ಎಚ್ಡಿಡಿ

By Mahesh
|
Google Oneindia Kannada News

ಬೆಂಗಳೂರು, ಏ.11: ರೇಪ್ ಹುಡುಗರು ಮಾಡುವ ಮಿಸ್ಟೇಕ್ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನಿರಾಕರಿಸಿದ್ದಾರೆ.

ಮುಲಾಯಂ ಸಿಂಗ್ ಅವರು ಅತ್ಯಾಚಾರಿಗಳ ಪರ ನೀಡಿದ ಹೇಳಿಕೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಚುನಾವಣಾ ಆಯೋಗ ಏಕೆ ಮುಲಾಯಂ ಅವರ ಮೇಲೆ ಸ್ವಯಂ ದೂರು ದಾಖಲಿಸಿಕೊಳ್ಳಬಾರದು ಎಂದು ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆಯೋಗ ಈಗ ಮುಲಾಯಂಗೆ ಈ ಬಗ್ಗೆ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದೆ. ಆದರೆ, ದೇವೇಗೌಡರು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

Why should I condemn it, asks Gowda on Mulayam's

ಪ್ರತಿ ರಾಜಕೀಯ ಪಕ್ಷ ತನ್ನದೇ ಆದ ನಿಲುವು ಹೊಂದಿರುತ್ತದೆ. ಅವರು(ಮುಲಾಯಂ) ವೈಯಕ್ತಿಕ ನಿಲುವು ಪ್ರಕಟಿಸುವ ಹಕ್ಕು ಹೊಂದಿದ್ದಾರೆ. ನಾನು ಏಕೆ ಬೇರೆಯವರನ್ನು ಖಂಡಿಸಬೇಕು? ಅಂತಿಮವಾಗಿ ಸುಪ್ರೀಂಕೋರ್ಟ್ , ರಾಷ್ಟ್ರಪತಿಗಳು ಈ ಬಗ್ಗೆ ನಿರ್ಣಯ ಕೈಗೊಳ್ಳಲಿದೆ ಎಂದು ದೇವೇಗೌಡರು ಹೇಳಿದ್ದಾರೆ. ಜೆಡಿಎಸ್ ಲೋಕಸಭೆ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ದೇವೇಗೌಡರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದರು.

ಅತ್ಯಾಚಾರ ಎಂಬುದೇ ನಾಚಿಕೆಗೇಡಿನ ಸಂಗತಿ. ಇದರ ಬಗ್ಗೆ ಮಾತನಾಡಲು ನಾನು ಬಯಸುವುದಿಲ್ಲ ಎಂದರು. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವ ಸ್ವತಂತ್ರ್ಯ ಒಬ್ಬ ಪಕ್ಷದ ನಾಯಕನಿಗೆ ಇರುತ್ತದೆ ಇದು ಮುಲಾಯಂ ಅವರ ವೈಯಕ್ತಿಕ ಹೇಳಿಕೆ ಇದನ್ನು ನಾನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

ಯಾವುದೋ ಕಾರಣಕ್ಕೆ ಸಂಬಂಧ ಮುರಿದು ಬಿದ್ದಾಗ ಹುಡುಗಿಯರು ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ದೂರು ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನನ್ನು ಬದಲಾಯಿಸುವ ಅಗತ್ಯ ಇದೆ. ಈ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವವರನ್ನು ಶಿಕ್ಷಿಸುವ ಅಗತ್ಯ ಇದೆ. ಅತ್ಯಾಚಾರಕ್ಕೆ ಸಂಬಂಧಿಸಿ ಸುಳ್ಳು ಪ್ರಕರಣ ದಾಖಲಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಿದೆ ಎಂದು ಮುಲಾಯಂ ಮೊರಾದಾಬಾದಿನಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಹೇಳಿದ್ದರು.

English summary
Former Prime Minister and JDS Chief H D Deve Gowda today refused to condemn the controversial statement of SP supremo Mulayam Singh Yadav questioning the death penalty for rape.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X