ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ವೋಟರ್ಸ್ ಲಿಸ್ಟ್ ನೋಂದಣಿ ಯಾವಾಗ?

By Srinath
|
Google Oneindia Kannada News

ಬೆಂಗಳೂರು, ಏ. 21:ಇನ್ನೇನು ರಾಜ್ಯದಲ್ಲಿ ಹಾಲಿ ಲೋಕಸಭಾ ಚುನಾವಣೆಯ ಕಾವು ಮುಗಿಯುತ್ತಿದೆ. ರಾಜ್ಯದ ಮಟ್ಟಿಗೆ 28 ಸಂಸದರನ್ನು ವಿಜಯೀಭವ ಎಂದು ಅನಿಲ್ ಕುಮಾರ್ ಝಾ ನೇತೃತ್ವದ ರಾಜ್ಯ ಚುನಾವಣಾ ಆಯೋಗದ ಘೋಷಿಸಿಬಿಟ್ಟರೆ ಆಯೋಗದ ಕೆಲಸ ಮುಗಿದಂತೆ.

ಆದರೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರದು ಸುಮ್ಮನೆ ಕೂಡುವ ಮನಸ್ಸಲ್ಲ. ಹಾಗಾಗಿಯೇ, ಮೊನ್ನೆ ಮುಗಿದ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗದೆ ಕೈಕೈ ಹೊಸುಕಿಕೊಂಡವರಿಗೆ ಅವಕಾಶ ಕಲ್ಪಿಸಲು ಝಾ ಈಗಿಂದಲೇ ಕಾರ್ಯೋನ್ಮುಖರಾಗಿದ್ದಾರೆ. ಮತ್ತೆ ವೋಟರ್ಸ್ ಲಿಸ್ಟಿಗೆ ಹೆಸರು ಸೇರ್ಪಡ್ಸೋದು ಯಾವಾಗ? ಎಂದು ಕೇಳುವವರಿಗಾಗಿ

voters-registration-again-from-june-karnataka-election-commission
ಪ್ರಸಕ್ತ ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಜೂನ್‌ ತಿಂಗಳಿಂದ ಮತ್ತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯಲಿದೆ ಎಂದು ಆಯೋಗ ಅಭಯ ನೀಡಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಸಣ್ಣ ಪುಟ್ಟ ಲೋಪ ದೋಷಗಳ ನಿವಾರಣೆಗೆ ಸಾಕಷ್ಟು ಪ್ರಚಾರ ನೀಡಿದರೂ ಪೂರ್ಣ ಪ್ರಮಾಣದಲ್ಲಿ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ. ಮತದಾನ ಮುಗಿದರೂ ಮತದಾರರ ಪಟ್ಟಿಯ ಬಗ್ಗೆ ದೂರುಗಳು ನಿಂತಿಲ್ಲ. ಹೀಗಾಗಿ ಚುನಾವಣಾ ಆಯೋಗ ಜೂನ್‌ ತಿಂಗಳಿಂದ ಮತದಾರರ ಪರಿಷ್ಕರಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ ಎಂದು ಆಯೋಗದ ಮೂಲಗಳು ಹೇಳಿವೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಲು ಮತ್ತೊಮ್ಮೆ ಕಾಲಾವಕಾಶ ನೀಡಲಾಗುವುದು. ಪ್ರಸಕ್ತ ಲೋಕಸಭೆ ಚುನಾವಣೆಗೆ ಹೆಸರು ನೋಂದಾಯಿಸಿಕೊಳ್ಳಲು ಮಾರ್ಚ್ 16 ರವರೆಗೆ ಗಡುವು ನೀಡಲಾಗಿತ್ತು. ಆದರೂ ಎಲ್ಲಾ ಅರ್ಹ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲದೆ ಕೊನೆ ಘಳಿಗೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ನೋಂದಾಯಿಸಿಕೊಂಡಿದ್ದಾರೆ.
ನೋಂದಾಯಿಸಿಕೊಂಡ ಎಲ್ಲರಿಗೂ ಈ ಬಾರಿ ಮತದಾನ ಮಾಡುವ ಭಾಗ್ಯ ದೊರೆತಿಲ್ಲ. ಚುನಾವಣೆ ಪ್ರಕ್ರಿಯೆ ಇಲ್ಲದಿರುವುದರಿಂದ ಜೂನ್‌ ತಿಂಗಳಿಂದ ಮತದಾರರ ಪರಿಷ್ಕರಣೆ ವ್ಯವಸ್ಥಿತವಾಗಿ ನಡೆಯಲಿದೆ

ಈ ಚುನಾವಣೆಯಲ್ಲಿ ಹೆಸರು ಬಿಟ್ಟು ಹೋಗಿರುವವರು ನೋಂದಾಯಿಸಿಕೊಳ್ಳಬಹುದಾಗಿದೆ. ಅಲ್ಲದೆ ಈಗಾಗಲೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ವಯಸ್ಸು, ಹೆಸರು, ಲಿಂಗ, ಪತಿ, ಪತ್ನಿ, ತಂದೆ ಹೆಸರಿನಲ್ಲಿ ವ್ಯತ್ಯಾಸ, ಕಾಗುಣಿತದ ದೋಷಗಳು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗುವುದು. ಈ ಸದವಕಾಶವನ್ನು ಜನರು ಬಳಸಿಕೊಂಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಚುನಾವಣಾ ಆಯೋಗ ಮತ್ತೊಂದು ಅವಕಾಶವನ್ನು ನೀಡಲಿದೆ.

English summary
Lok Sabha polls 2014 - Voters registration again will be taken up from June in Karnataka informs Chief Election Commission Anil Kumar Jha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X