ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಇಎಸ್ ಪುಂಡಾಟ ಖಂಡಿಸಿ ವಿಧಾನಸೌಧ ಚಲೋ

|
Google Oneindia Kannada News

ಬೆಂಗಳೂರು, ಜು. 28 : ಬೆಳಗಾವಿ ತಾಲೂಕಿನ ಯಳ್ಳೂರಿನಲ್ಲಿ ಎಂಇಎಸ್ ಪುಂಡಾಟಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರ ವಿಧಾನಸೌಧ ಚಲೋ ಹಮ್ಮಿಕೊಂಡಿದೆ. ಅತ್ತ ಬೆಳಗಾವಿ ಬಂದ್ ಗೆ ಎಂಇಎಸ್ ಕರೆ ನೀಡಿದೆ. ಎಂಇಎಸ್ ಪುಂಡಾಟಿಕೆ ಖಂಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.

ಸೋಮವಾರ ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್ ಮುಂಭಾಗದಿಂದ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಮರೆವಣಿಗೆ ಆರಂಭಿಸಲಿದ್ದು, ವಿಧಾನಸೌಧಕ್ಕೆ ತೆರಳಲಿದ್ದಾರೆ. ಅತ್ತ ಬೆಳಗಾವಿ ಬಂದ್ ಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ಕರೆ ನೀಡಿದ್ದಾರೆ.

MES

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ವಿಧಾನಸೌಧ ಚಲೋ ಕುರಿತು ಮಾಹಿತಿ ನೀಡಿದ್ದು, ಎಂಇಎಸ್ ಕಾರ್ಯಕರ್ತರು ಕನ್ನಡಿಗರನ್ನು ಆಗಾಗ್ಗೆ ಕೆಣಕುತ್ತಿದ್ದು, ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ಎಂಇಎಸ್ ಶಾಸಕರು ಮತ್ತು ಕಾರ್ಯರ್ತರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಮತ್ತು ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. [ನಿಲ್ಲದ ಮರಾಠಿ ಪುಂಡಾಟಿಕೆ, ಪ್ರದೇಶ ಪ್ರಕ್ಷುಬ್ಧ]

ಪರಿಸ್ಥಿತಿ ಹೇಗಿದೆ : ಯಳ್ಳೂರು ಗ್ರಾಮದಲ್ಲೀಗ ದ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಶಾಂತಿಪಾಲನೆಗೆ ಸರ್ಕಾರ ವಿಶೇಷ ಪ್ರತಿನಿಧಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಅವರನ್ನು ಕಳುಹಿಸಿಕೊಟ್ಟಿದೆ. [ಬೆಳಗಾವಿಯಲ್ಲಿ ಏನಾಗುತ್ತಿದೆ?]

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಒಳಗೊಂಡಂತೆ ಹಿರಿಯ ಅಧಿಕಾರಿಗಳು ಹೆಚ್ಚಿನ ಬಲ, ವಾಹನಗಳೊಂದಿಗೆ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಜತೆಗೆ ಮರಾಠಿ ಭಾಷಿಕ ಬಾಹುಳ್ಯದ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. [ನಾರಾಯಣ ಗೌಡರ ಸಂದರ್ಶನ ಓದಿ]

English summary
Karnataka Rakshana Vedike organized Vidhana Soudha Chalo Rally on Monday, July 28 against protesting Maharashtra Ekikaran Samithi (MES)MES activists in Belgaum district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X