ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಪ್ರತಿಭಟನೆ : ಫ್ರೀಡಂ ಪಾರ್ಕ್ ಬಳಿ ಸಂಚಾರ ಬೇಡ

|
Google Oneindia Kannada News

ಬೆಂಗಳೂರು, ಜು. 22 : ಬೆಂಗಳೂರು ಮತ್ತು ರಾಜ್ಯದ ವಿವಿಧ ಪ್ರದೇಶಗಳಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಇಂದು ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಮಂಗಳವಾರ ಬೆಳಗ್ಗೆ ಬೃಹತ್ ಪ್ರತಿಭಟನೆ ನಡೆಸಲಿರುವ ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ.

ಮಂಗಳವಾರ ಬೆಳಗ್ಗೆ 11 ಗಂಟೆಗೆ ನಗರದ ಫ್ರೀಡಂ ಪಾರ್ಕ್ ನಿಂದ ಆರಂಭವಾಗಲಿರುವ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ವಿಧಾನಸೌಧ ತಲುಪಲಿದೆ. ಸವಿತಾ ಸಮಾಜ ಸಹ ಇಂದು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಫ್ರೀಂಡಂ ಪಾರ್ಕ್ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

Vidhana Soudha

ಮಂಗಳೂರು ಬಂದ್ : ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ದಕ್ಷಿಣ ಕನ್ನಡದಲ್ಲಿ ಕಾಲೇಜು ಬಂದ್ ಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರೆ ನೀಡಿದೆ. [ಅತ್ಯಾಚಾರ ಪ್ರೇರಿಪಿಸುವ ಚಿತ್ರ ಬೇಡ]

ಸಂಚಾರ ಬದಲಾವಣೆ : ವಿವಿಧ ಪ್ರತಿಭಟನೆ ಹಿನ್ನಲೆಯಲ್ಲಿ ಫ್ರೀಡಂ ಪಾರ್ಕ್ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆ ಮಾಡಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ.

* ರಾಜಾಜಿನಗರ, ವಿಜಯನಗರ, ಮಲ್ಲೇಶ್ವರ ಕಡೆಯಿಂದ ಆನಂದರಾವ್‌ ವೃತ್ತದ ಮೇಲ್ಸೇತುವೆ ಮೂಲಕ ನಗರದ ವಿವಿಧ ಸ್ಥಳಗಳಿಗೆ ಹೋಗುವ ವಾಹನ ಸವಾರರು ಮಲ್ಲೇಶ್ವರ ಲಿಂಕ್ ರಸ್ತೆ, ಶೇಷಾದ್ರಿಪುರ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಬಂದು ಮುಂದೆ ಸಾಗಬೇಕು.

* ಮಾಗಡಿ ರಸ್ತೆ, ಓಕಳಿಪುರ ಜಂಕ್ಷನ್‌ ಕಡೆಯಿಂದ ಬರುವ ವಾಹನಗಳು ಹುಣಸೇಮರ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಬಿನ್ನಿಮಿಲ್‌, ಸಿರ್ಸಿ ವೃತ್ತ, ಸಿಟಿ ಮಾರುಕಟ್ಟೆ, ಪುರಭವನ ಮಾರ್ಗವಾಗಿ ಹೋಗಬೇಕು.

* ಬಸವೇಶ್ವರ ವೃತ್ತದಿಂದ ರೇಸ್‌ ಕೋರ್ಸ್‌ ರಸ್ತೆ ಮೂಲಕ ಆನಂದರಾವ್‌ ವೃತ್ತಕ್ಕೆ ಬರುವ ವಾಹನಗಳು ಅರಮನೆ ರಸ್ತೆ, ಕೆ.ಆರ್‌.ವೃತ್ತ ಮಾರ್ಗವಾಗಿ ಸಾಗಬೇಕು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

English summary
Karnataka bjp organized Vidhana Soudha Chalo Rally against protesting several cases of rape came to light in Bangalore and other parts of the Karnataka. Rally begins in Freedom Park on 11 am on Tuesday, July 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X