ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಬ್‌ಗಯಾರ್‍ ಶಾಲೆಯಲ್ಲಿ ನಡೆದದ್ದು ಗ್ಯಾಂಗ್‌ರೇಪ್‌

By Ashwath
|
Google Oneindia Kannada News

ಬೆಂಗಳೂರು, ಜು. 30: ವಿಬ್‌ಗಯಾರ್‌ ಶಾಲೆಯಯಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದದ್ದು ಸಾಮೂಹಿಕ ಅತ್ಯಾಚಾರ ಎಂಬ ಆತಂಕಕಾರಿ ವಿಚಾರ ಪೊಲೀಸ್‌ ತನಿಖೆಯಿಂದ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರು ಜಿಮ್ನಾಸ್ಟಿಕ್ ಶಿಕ್ಷಕರನ್ನು ಬಂಧಿಸಿದ್ದಾರೆ. ಈ ಮಧ್ಯೆ ಈಗಾಗಲೇ ಬಂಧಿತನಾಗಿರುವ ಮುಸ್ತಫಾ ಆರೋಪಿಯಲ್ಲ ಎಂಬ ಅನುಮಾನವೂ ವ್ಯಕ್ತವಾಗಿದೆ.

ನಗರದ ಬೊಮ್ಮನಹಳ್ಳಿಯಲ್ಲಿ ವಾಸವಿದ್ದ ನೇಪಾಳ ಮೂಲದ ಲಾಲ್ ಗಿರಿ (21) ಮತ್ತು ಗುಲ್ಬರ್ಗ ಮೂಲದ ಬೆಂಗಳೂರಿನ ಬಸವನಗರ ನಿವಾಸಿ ವಸೀಂ ಪಾಷ (28) ಬಂಧಿತರು. ಈ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದಂತಾಗಿದೆ.[ವಿಬ್ ಗಯಾರ್ ಶಾಲೆಯ ಸಂಸ್ಥಾಪಕನ ಬಂಧನ]

vibgyor

ಆರೋಪಿಗಳು ಶಾಲೆಯ ಜಿಮ್ನಾಸ್ಟಿಕ್ ಕೊಠಡಿಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಎಲ್ಲ ಮಕ್ಕಳು ಕೊಠಡಿಯಿಂದ ಹೊರ ಹೋದ ಬಳಿಕ ಬಾಲಕಿಯನ್ನು ಕೂಡಿ ಹಾಕಿ ದೌರ್ಜನ್ಯ ನಡೆಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಾಲಕಿಯ ಹೇಳಿಕೆ, ಸಿಸಿ ಟಿವಿ ಪರಿಶೀಲಿಸಿದಾಗ ಇವರೇ ಈ ಕೃತ್ಯ ನಡೆಸಿರುವುದು ಖಚಿತವಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಎಂಎನ್‌ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.[ಪೋಷಕರಿಗೆ ಸುಳ್ಳು ಮಾಹಿತಿ ನೀಡಿದ ವಿಬ್‌ಗಯಾರ್‌ ಶಾಲೆ]

ಒಂದು ವರ್ಷದ ಹಿಂದೆ ಶಾಲೆಗೆ ಸೇರಿದ್ದ ಬಾಲಕಿ ಹೆಚ್ಚು ತುಂಟಿಯಾಗಿದ್ದಳು. ಸಾಮಾನ್ಯ ಮಕ್ಕಳಿಗಿಂತ ಹೆಚ್ಚು ಚಟುವಟಿಕೆಯಿಂದಿರುವ ಆಕೆ ತರಗತಿಯಲ್ಲಿ ರಗಳೆ ಮಾಡುತ್ತಿದ್ದಳು. ಅವಳನ್ನು ಶಾಲೆಯಲ್ಲಿ ಸಂಭಾಳಿಸುವುದೇ ಶಿಕ್ಷಕರಿಗೆ ಸಮಸ್ಯೆಯಾಗಿತ್ತು. ಜು.3ರಂದು ಶಾಲೆಗೆ ಬಂದಿದ್ದ ವಿದ್ಯಾರ್ಥಿನಿ, ಬೆಳಿಗ್ಗೆ 11 ಗಂಟೆ ಸಹಪಾಠಿಗಳೊಂದಿಗೆ ಶಾಲೆ ಜಿಮ್ನಾಸ್ಟಿಕ್‌ ಕೊಠಡಿಗೆ ಹೋಗಿದ್ದಳು. ನಂತರ ಆಕೆಯ ಸಹಪಾಠಿಗಳು ಜಿಮ್ನಾಸ್ಟಿಕ್‌ ತರಬೇತಿ ಮುಗಿಸಿಕೊಂಡು ತರಗತಿಗೆ ಹಿಂದಿರುಗಿದ್ದರು. ಆದರೆ, ತರಗತಿಗೆ ಹಿಂದಿರುಗಲು ನಿರಾಕರಿಸಿ ಜಿಮ್ನಾಸ್ಟಿಕ್‌ ಕೊಠಡಿಯಲ್ಲೇ ಉಳಿಯುದಾಗಿ ಹಠ ಹಿಡಿದಿದ್ದಳು. ಈ ಸಂದರ್ಭದಲ್ಲಿ ನಾವು ಅತ್ಯಾಚಾರ ಮಾಡಿದ್ದೇವೆ ಎಂದು ಲಾಲ್‌ಗಿರಿ ಮತ್ತು ವಸೀಂ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

ಘಟನೆ ನಡೆದ ಬಳಿಕವೂ ಮೂರು ನಾಲ್ಕು ದಿನ ಬಾಲಕಿ ಶಾಲೆಗೆ ಬಂದಿದ್ದಳು. ಬಾಲಕಿಯ ತಾಯಿ ಸ್ನಾನ ಮಾಡಿಸುವಾಗ ಅತ್ಯಾಚಾರದ ಕುರುಹು ಗೋಚರಿಸಿತ್ತು. ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಎಂದು ಆಯುಕ್ತರು ಮಾಹಿತಿ ನೀಡಿದರು.[ವಿಬ್‌ಗಯಾರ್‌ ತೊರೆಯಲಿರುವ ವಿದ್ಯಾರ್ಥಿ‌ಗಳು]

ಮುಸ್ತಾಫ ಆರೋಪಿಯಲ್ಲ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಶಾಲೆಯ ಸ್ಕೇಟಿಂಗ್ ಶಿಕ್ಷಕ ಮುಸ್ತಾಫ ಎಂಬಾತನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಆತನಿಗೂ ಈ ರೇಪ್‌ ಪ್ರಕರಣಕ್ಕೆ ಸಂಬಂಧವಿಲ್ಲ ಎನ್ನುವ ಅಂಶ ಪೊಲೀಸ್‌ ತನಿಖೆಯಿಂದ ಬೆಳಕಿಗೆ ಬಂದಿದೆ.

ಮುಸ್ತಾಫನ ಬಂಧಿಸಿದ್ದು ಯಾಕೆ? ಮುಸ್ತಾಫ ಈ ಹಿಂದೆ ಕೆಲಸ ಮಾಡುತ್ತಿದ್ದ ಡೀನ್ಸ್ ಅಕಾಡೆಮಿಯಲ್ಲಿಯೂ ಶಾಲಾ ಬಾಲಕಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ದೂರು ದಾಖಲಾಗಿತ್ತು. ಹಿಂದೆ ಇದ್ದ ಶಾಲೆಯಲ್ಲಿ ಬಾಲಕಿಯೊಬ್ಬಳಿಗೆ ದೌರ್ಜನ್ಯ ಎಸಗಿದ್ದ ಹಿನ್ನೆಲೆ ಇದ್ದ ಕಾರಣ ಆತನನ್ನೇ ಸಂಶಯದ ಮೇಲೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರಿಗೆ 1 ಲಕ್ಷ ಬಹುಮಾನ: ಬಾಲಕಿ ಸಣ್ಣವಯಸ್ಸಿನವಳಾದ ಕಾರಣ ಆಕೆಯನ್ನು ಪದೇ ಪದೇ ವಿಚಾರಣೆಗೆ ಒಳಪಡಿಸುವುದು ಕಷ್ಟವಿತ್ತು. ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಈ ಪ್ರಕರಣದ ಆರೋಪಿಗಳನ್ನು ಬಂಧಿಸುವುದು ಪೊಲೀಸ್‌ ಸಿಬ್ಬಂದಿಗಳಿಗೆ ಸವಾಲಾಗಿತ್ತು. ಸಿಬ್ಬಂದಿಗಳು ನಿಮ್ಹಾನ್ಸ್‌ ತಜ್ಞರ ನೆರವು ಪಡೆದು ಸೂಕ್ಷ್ಮ ತನಿಖಾ ವಿಧಾನದ ಮೂಲಕ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಭೇದಿಸಿದ ಸಿಬ್ಬಂದಿಗಳಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಆಯುಕ್ತರು ಪ್ರಕಟಿಸಿದ್ದಾರೆ.

English summary
In a new twist, two gymnastics instructors have been arrested for the alleged gangrape of a six-year old girl at a public school here with the police ruling out the "direct" role of the skating instructor who was booked as the main accused in the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X