ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಬ್‌ಗಯಾರ್‌ ಶಾಲೆ ಆರಂಭ: ಆತಂಕದಲ್ಲಿ ಪೋಷಕರು

By Ashwath
|
Google Oneindia Kannada News

ಬೆಂಗಳೂರು, ಜು.28: ವಿಬ್‌ಗಯಾರ್‌ ಶಾಲೆ ಸೋಮವಾರದಿಂದ ಮತ್ತೆ ಆರಂಭಗೊಂಡಿದ್ದರೂ ಪೋಷಕರ ಆತಂಕ ಇನ್ನೂ ಕಡಿಮೆಯಾಗಿಲ್ಲ.

ವಿಬ್‌ಗಯಾರ್‍ ಶಾಲೆಯ 5ರಿಂದ 10ನೇ ತರಗತಿಗಳು ಸೋಮವಾರ ಆರಂಭಗೊಂಡಿದೆ. ನರ್ಸರಿಯಿಂದ 5ನೇ ತರಗತಿವರೆಗಿನ ತರಗತಿಗಳು ಬುಧವಾರದಿಂದ ಆರಂಭಗೊಳ್ಳಲಿದೆ.

ಒಂದನೇ ತರಗತಿ ವಿದ್ಯಾರ್ಥಿನಿ‌ ಮೇಲಿನ ಅತ್ಯಾಚಾರ ಪ್ರಕರಣದಿಂದಾಗಿ ಎಚ್ಚೆತ್ತ ವಿಬ್‌ಗಯಾರ್‌ ಶಾಲೆಯ ಆಡಳಿತ ಮಂಡಳಿ ಪೋಷಕರ 11 ಬೇಡಿಕೆಗಳಿಗೆ ಒಪ್ಪಿಗೆ ನೀಡಿದೆ. ಶಾಲೆಯಲ್ಲಿ ಹೊಸದಾಗಿ 117 ಸಿಸಿ ಕ್ಯಾಮೆರಾವನ್ನು ಅಳವಡಿಸಿಕೊಂಡಿದೆ.

ಶಾಲೆ ಆರಂಭಗೊಂಡಿದ್ದರೂ ಕೆಲ ಪೋಷಕರು ಮತ್ತೆ ಮಕ್ಕಳನ್ನು ಅದೇ ಶಾಲೆಗೆ ಕಳಹಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಒಬ್ಬರು ಪೋಷಕರು ಮಗಳನ್ನು ಬೇರೆ ಶಾಲೆಗೆ ಸೇರಿಸುವುದಾಗಿ ಹೇಳಿದ್ದಾರೆ.

vibgyor

"ನನ್ನ ಮಗಳನ್ನು ಮತ್ತೆ ಅದೇ ಶಾಲೆಗೆ ಕಳುಹಿಸಲು ಮನಸ್ಸು ಒಪ್ಪುತ್ತಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ" ಎಂದು ಪೋಷಕರು ಹೇಳುತ್ತಾರೆ.[ವಿಬ್‌ಗಯಾರ್ ಶಾಲೆ ಆರಂಭ, ಕುಣಿಯುತ ಬಂದ ಮಕ್ಕಳು]

"ರೇಪ್‌ ಪ್ರಕರಣದಲ್ಲಿ ಶಾಮೀಲಾಗಿರುವ ಜನರು ಇನ್ನು ಶಾಲೆಯಲ್ಲೇ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ. ಈ ಕೃತ್ಯದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎನ್ನುವ ವಿಚಾರ ಇನ್ನೂ ಹೊರ ಬಂದಿಲ್ಲ. ಒಬ್ಬನ ಹೆಸರು ಮಾತ್ರ ಬಹಿರಂಗವಾಗಿದೆ. ಉಳಿದವರೆಲ್ಲಾ ಒಳಗಡೆ ಇರುವಾಗ ಶಾಲೆಗೆ ಮಗಳನ್ನು ಕಳುಹಿಸುವುದು ಹೇಗೆ" ಎಂದು ಅವರು ಪ್ರಶ್ನಿಸಿದ್ದಾರೆ.

ಈ ಘಟನೆಯಿಂದಾಗಿ ಪೋಷಕರು ಶಾಲೆಯ ಬಗ್ಗೆ ಚರ್ಚೆ ನಡೆಸಲು ಪ್ರತ್ಯೇಕ ಪ್ರೈವೆಟ್‌ ಫೇಸ್‌ಬುಕ್‌ ಪುಟವನ್ನು ತೆರೆದಿದ್ದಾರೆ. ಈ ಪುಟದಲ್ಲಿ ಬಹಳಷ್ಟು ಪೋಷಕರು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವುದಾಗಿ ತಿಳಿಸಿದ್ದಾರೆ.

ಹಲವರು ಪೋಷಕರು ಈಗಾಗಲೇ ವಿವಿಧ ಶಾಲೆಗಳಲ್ಲಿ ಪ್ರವೇಶದ ಬಗ್ಗೆ ವಿಚಾರಣೆ ನಡೆಸಲು ಆರಂಭಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪೋಷಕರ ಅಭಿಪ್ರಾಯದಂತೆ, ಈ ವರ್ಷ ವಿಬ್‌ಗಯಾರ್‌ ಶಾಲೆಯನ್ನು ತೊರೆದು ಬೇರೆ ಶಾಲೆಗೆ ಮಕ್ಕಳನ್ನು ಸೇರಿಸುವುದು ಕಷ್ಟದ ಕೆಲಸವಾದರೂ, ಮುಂದಿನ ವರ್ಷ ಬಹಳಷ್ಟು ವಿದ್ಯಾರ್ಥಿ‌‌ಗಳು ಬಿಬ್‌ಗಯಾರ್‌ನ್ನು ತೊರೆಯುವ ಸಾಧ್ಯತೆಯಿದೆ.

English summary
As Bangalore School Reopens After Child Rape Horror, a Parent Exits, Others Hopeful. The changes have failed to reassure at least one parent who told that she was pulling her daughter out of the school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X