ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿವೃತ್ತ ಫೋಟೊಗ್ರಾಫರ್‌ಗಳಿಗೆ ಸಿಎಂಆರ್‌ನಿಂದ ಸನ್ಮಾನ

|
Google Oneindia Kannada News

ಬೆಂಗಳೂರು, ಸೆ. 30 : ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾದ ಛಾಯಾಚಿತ್ರ ಪತ್ರಿಕೋದ್ಯಮಿಗಳನ್ನು ಸಿಎಂಆರ್‌ ಶಿಕ್ಷಣ ಸಂಸ್ಥೆಯ ಕಾನೂನು ವಿದ್ಯಾಲಯದಲ್ಲಿ ಸೋಮವಾರ ಸನ್ಮಾನಿಸಲಾಯಿತು. ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಆರು ಜನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಪಿ. ಸಾರಂಗಪಾಣಿ, ಟಿ. ಅಬ್ದುಲ್ ಹಫೀಜ್, ಡಿ,ಬಾಬುರಾಜ್, ಟಿ.ಎಲ್. ಪ್ರಭಾಕರ್, ಪಿ.ವಿಕ್ಟರ್ ಮತ್ತು ಗೋಪಿನಾಥ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.(ಸಿಎಂಆರ್ ನಲ್ಲಿ ಹೊಸ ಸಂಶೋಧನಾ ತರಗತಿ ಆರಂಭ)

cmr

ಸಿಎಂಆರ್‌ ಸಂಸ್ಥೆಯ ಅಧ್ಯಕ್ಷ ಕೆ.ಸಿ.ರಾಮಮೂರ್ತಿ, ಪಬ್ಲಿಕ್ ವಾಹಿನಿ ಮುಖ್ಯಸ್ಥ ಎಚ್‌.ಆರ್‌. ರಂಗನಾಥ, ಸಂಸ್ಥೆಯ ಛಾನ್ಸೆಲರ್‌ ಮತ್ತು ಜನಾಧಾರಾ ಟ್ರಸ್ಟ್‌ ಅಧ್ಯಕ್ಷೆ ಸಬೀತಾ ರಾಮಮೂರ್ತಿ ಸಾಧಕರನ್ನು ಸನ್ಮಾನಿಸಿದರು.

ಪಬ್ಲಿಕ್ ವಾಹಿನಿ ಮುಖ್ಯಸ್ಥ ಎಚ್‌.ಆರ್‌. ರಂಗನಾಥ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯ ಕಾಪಾಡುವಲ್ಲಿ ಪತ್ರಿಕಾರಂಗ ಶ್ರಮಿಸುತ್ತಿದೆ. 1980 ರ ನಂತರ ಛಾಯಾಚಿತ್ರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಗಳಾದವು. ಮುದ್ರಣ ಮಾಧ್ಯಯಮಕ್ಕೆ ಹೊಸ ಆಯಾಮ, ನೀಡಿದ ಕೀರ್ತಿ ಛಾಯಾಚಿತ್ರ ಗ್ರಾಹಕರಿಗೆ ಸಲ್ಲುತ್ತದೆ ಎಂದು ಹೇಳಿದರು.(ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಗುರಿ)

ಸಿಎಂಆರ್‌ ಸಂಸ್ಥೆಯ ಅಧ್ಯಕ್ಷ ಕೆ.ಸಿ.ರಾಮಮೂರ್ತಿ ಮಾತನಾಡಿ, ನಿವೃತ್ತಿ ನಂತರವೂ ಛಾಯಾಚಿತ್ರ ಪತ್ರಿಕೋದ್ಯಮಿಗಳೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಿದ್ದೇನೆ. ಇವರನ್ನು ಸನ್ಮಾನಿಸಬೇಕೆಂಬ ಬಹುದಿನದ ಕನಸು ಇಂದು ಈಡೇರಿದೆ ಎಂದು ಹೇಳಿದರು.

English summary
For the immense contribution in the field of journalism, six veteran photojournalists with more than three to four decades of experience were felicitated by the CMR University and the CMR Group of Institutions on September 29, Monday at CMR Law School.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X