ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೆಡೆ ದರೋಡೆ, ಮತ್ತೊಂದೆಡೆ ಅತ್ಯಾಚಾರ

|
Google Oneindia Kannada News

ಬೆಂಗಳೂರು, ಸೆ. 4 : ಮತ್ತೊಮ್ಮೆ ಉದ್ಯಾನನಗರಿ ದೇಶದ ಜನರೆದುರು ನಾಚಿಕೆ ಪಟ್ಟಿಕೊಳ್ಳುವಂತಾಗಿದೆ. ಗುರುವಾರ ಮತ್ತೆ ಎರಡು ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

ಹಾಡಹಗಲೇ ಕೋರಮಂಗಲದ ಬಳಿ ಮಹಿಳೆಯರನ್ನು ತಡೆದು ದರೋಡೆ ಮಾಡಲಾಗಿದೆ. ವಿಲ್ಸನ್‌ ಗಾರ್ಡ್ ನ್‌ ಠಾಣಾ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಯುವತಿ ಮೇಲೆ ಅತ್ಯಾಚಾರವೆಸಗಲಾಗಿದೆ.

rape
ಇಬ್ಬರು ಮಹಿಳೆಯರು ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಮೊದಲು ಬೇಕಂತಲೇ ಡಿಕ್ಕಿ ಹೊಡೆದ ದುಷ್ಕರ್ಮಿಗಳು ನಂತರ ಮಹಿಳೆಯರನ್ನು ಅಡ್ಡಗಟ್ಟಿ ಅವರ ಬಳಿಯಿದ್ದ ಹಣ, ಪಾಸ್‌ಪೋರ್ಟ್‌ ಮುಂತಾದ ವಸ್ತುಗಳನ್ನು ದೋಚಿದ್ದಾರೆ.

ಹತ್ತಿರದಲ್ಲೇ ಜನರು ತಿರುಗಾಡುತ್ತಿದ್ದರೂ ಯಾರು ಸಹಾಯಕ್ಕೆ ಬಂದಿಲ್ಲ ಎಂದು ದರೋಡೆಗೊಳಗಾದ ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಗಾರ್ಮೆಂಟ್ಸ್‌ ಕೆಲಸಗಾರಳ ಮೇಲೆ ಅತ್ಯಾಚಾರ
ಹೊಲಿಗೆ ಹೇಳಿಕೊಡುವ ನೆಪದಲ್ಲಿ ಗಾರ್ಮೆಂಟ್ಸ್‌ ಮ್ಯಾನೇಜರ್ ಒಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ 17 ವರ್ಷದ ಯುವತಿಯನ್ನು ಸೆ. 2ರಂದು ಅಲ್ಲಿಯ ಮ್ಯಾನೇಜರ್ ರವಿ(26) ಹೊಲಿಗೆ ಹಾಕುವುದು ಹೇಳಿಕೊಡುತ್ತೇನೆ ಎಂದು ಹೇಳಿ ಕೊಠಡಿಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ತಾಯಿ ವಿಲ್ಸನ್‌ ಗಾರ್ಡ್ ನ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಐಪಿಸಿ 376, ಮತ್ತು ಪೊಕ್ಸೋ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ರವಿ (26)ಯನ್ನು ಬಂಧಿಸಲಾಗಿದೆ. ಆರೋಪಿ ಹಾಗೂ ದೌರ್ಜನ್ಯಕ್ಕೊಳಗಾದ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

English summary
The IT capital of the country was shamed again on Thursday when two women were attacked in the busy Koramangla area of the city in broad daylight. The victims said although witnessed the incident, nobody came forward to help them. In another incident, the manager of a garment factory in the city's Wilson Garden was accused of molesting a minor for over a month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X