ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿ ಬಸ್ ಮೇಲೆ ಕಣ್ಣಿಡಲಿವೆ ವಿಶೇಷ ದಳಗಳು

|
Google Oneindia Kannada News

ಬೆಂಗಳೂರು, ನ.11 : ಆಂಧ್ರಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಸಂಭವಿಸಿದ ಬಸ್ ದುರಂತದಿಂದ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ, ಸಂಚಾರಿ ನಿಯಮ ಉಲ್ಲಂಘಿಸುವ ಖಾಸಗಿ ಬಸ್ಸುಗಳ ಮೇಲೆ ಕಣ್ಣಿಡಲು ಹತ್ತು ವಿಶೇಷ ತನಿಖಾದಳಗಳನ್ನು ರಚಿಸಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕಾರ್ಯನಿರ್ವಹಿಸುವ ಈ ತನಿಖಾದಳ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ, ಕಠಿಣ ಕ್ರಮ ಕೈಗೊಳ್ಳುತ್ತದೆ.

ವಿಶೇಷ ತನಿಖಾದಳಗಳ ಕುರಿತು ಮಾಹಿತಿ ನೀಡಿರುವ ಸಾರಿಗೆ ಇಲಾಖೆ ಆಯುಕ್ತ ಕೆ.ಅಮರನಾರಾಯಣ, ಇಲಾಖೆಯ ಜಂಟಿ ಆಯುಕ್ತರ ನೇತೃತ್ವದಲ್ಲಿ ಈ ತನಿಖಾ ದಳಗಳನ್ನು ರಚಿಸಲಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೇರಿದಂತೆ ಪ್ರತಿ ದಳದಲ್ಲಿ ಇಪ್ಪತ್ತು ಸಿಬ್ಬಂದಿ ಇರುತ್ತಾರೆ ಎಂದು ಮಾಹಿತಿ ನೀಡಿದರು. ನಗರದ ಹತ್ತು ಪ್ರವೇಶ ದ್ವಾರಗಳಲ್ಲೂ ಈ ದಳಗಳು ಕಾರ್ಯಾಚರಣೆ ನಡೆಸುತ್ತವೆ ಎಂದು ಅವರು ಮಾಹಿತಿ ನೀಡಿದರು.

private bus

ವಿಶೇಷ ತನಿಖಾ ತಂಡಗಳು ತಪಾಸಣೆ ವೇಳೆ ಬಸ್‌ಗಳ ಸುಸ್ಥಿತಿ, ವಾಹನ ಮತ್ತು ಚಾಲಕನಿಗೆ ಸಂಬಂಧಿ­ಸಿದಂತೆ ದಾಖಲಾತಿಗಳನ್ನು ಪರಿಶೀಲಿಸುತ್ತಾರೆ. ಬಸ್ಸುಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ವಾಣಿಜ್ಯ ಸರಕು ತುಂಬಿಕೊಂಡಿದ್ದರೆ ಅವನ್ನು ಅಲ್ಲಿಯೇ ಅನ್‌ಲೋಡ್‌ ಮಾಡಿಸುತ್ತಾರೆ. ಸಾರ್ವಜನಿಕರು ತಮ್ಮ ಗಮನಕ್ಕೆ ಬರುವ ನಿಯಮ ಉಲ್ಲಂಘನೆ ಪ್ರಕರ­ಣ­ಗಳನ್ನು ಇಲಾಖೆಗೆ ತಿಳಿಸಲು ಸದ್ಯ­ದಲ್ಲೇ ಸಹಾಯ ವಾಣಿಯೊಂದನ್ನು ಸ್ಥಾಪಿಸಲು ಇಲಾಖೆ ಚಿಂತನೆ ನಡೆಸಿದೆ.

ಪ್ರಯಾಣಿಕರು, ಖಾಸಗಿ ಬಸ್ ಮಾಲೀಕರು, ಸಿಬ್ಬಂದಿಗಳು ತಪಾಸಣಾ ಸಮಯದಲ್ಲಿ ತಂಡಕ್ಕೆ ಅಗತ್ಯ ಸಹಕಾರ ನೀಡಬೇಕೆಂದು ಅಮರನಾರಾಯಣ ಮನವಿ ಮಾಡಿದರು. ಬಸ್ಸುಗಳಲ್ಲಿ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳು ಕಂಡುಬಂದರೆ ಅವುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸಿಕ್ಕಿಬಿದ್ದ ಜಬ್ಬಾರ್ : ಕೆಲವು ದಿನಗಳ ಹಿಂದೆ ಆಂಧ್ರಪ್ರದೇಶದಲ್ಲಿ ಸಂಭವಿಸಿದ ಜಬ್ಬಾರ್ ಬಸ್ ದುರಂತದ ಬಳಿಕ ಸಾರಿಗೆ ಇಲಾಖೆ ಖಾಸಗಿ ಬಸ್ಸುಗಳ ಸಂಚಾರಿ ನಿಯಮ ಉಲ್ಲಂಘನೆ ಕುರಿತು ತನಿಖೆ ನಡೆಸಲು ತಂಡ ರಚಿಸಿದೆ. ಇದೇ ತಂಡದ ಕೈಗೆ ಶನಿವಾರ ಎಲೆಕ್ಟ್ರಾನಿಕ್ ಸಿಟಿ ಬಳಿ ಜಬ್ಬಾರ್ ಬಸ್ ಸಿಕ್ಕಿಬಿದ್ದಿದೆ.

ಚೆನ್ನೈನಿಂದ ಬೆಂಗಳೂರಿನಗೆ ಆಗಮಿಸುತ್ತಿದ್ದ ಜಬ್ಬಾರ್ ಟ್ರಾವೆಲ್ಸ್ ಬಸ್ ತಪಾಸಣೆ ನಡೆಸಿದ ಎಲೆಕ್ಟ್ರಾನಿಕ್ ಸಿಟಿ ಆರ್ ಟಿಓ ಅದರಲ್ಲಿ ಅಗತ್ಯಕ್ಕಿಂತ ಹೆಚ್ಚಿನ ವಾಣಿಜ್ಯ ಸರಕುಗಳನ್ನು ಸಾಗಿತುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದರು. ಸರಕನ್ನು ತಮ್ಮ ವಶಕ್ಕೆ ಪಡೆದ ಅಧಿಕಾರಿಗಳು ನಂತರ ಕಠಿಣ ಎಚ್ಚರಿಕೆ ನೀಡಿ, ಟ್ರಾವೆಲ್ಸ್ ಗೆ ಅದನ್ನು ಮರಳಿಸಿದರು. (ಹೈದರಾಬಾದಿನ ಬಸ್ ದುರಂತದ ಚಿತ್ರಗಳು)

English summary
The State Transport Department issued a set of guidelines for private bus operators on Friday, November 8 and warned them against violating permits. A statement from the department said drives would continue in order to catch violators who endanger the safety of passengers. Department also formed committee to ensure following of guidelines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X