ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಗೀತಕ್ಕಾಗಿ ಯಮನ ಕರೆಯನ್ನು ಕಡೆಗಣಿಸಿದ!

By Ashwath
|
Google Oneindia Kannada News

train
ಬೆಂಗಳೂರು,ಜು.10: ಇಯರ್‌ಫೋನ್‌ ಹಾಕಿ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಟೆಕ್ಕಿಯೊಬ್ಬರು ಮೃತಪಟ್ಟ ಘಟನೆ ಫ್ರೇಜರ್ ಟೌನ್ ರೈಲ್ವೆ ನಿಲ್ದಾಣ ಬಳಿ ಸಂಭವಿಸಿದೆ

ಆಂಧ್ರಪ್ರದೇಶ ಕಡಪ ಮೂಲದ ಕಲ್ಯಾಣ ನಗರ ನಿವಾಸಿ ಅಶೋಕ ಕುಮಾರ್ ರೆಡ್ಡಿ(29) ಮೃತಪಟ್ಟ ಟೆಕ್ಕಿ. ಅಶೋಕ ಅವರು ಪ್ರತಿದಿನ ಈಸ್ಟ್ ರೈಲು ನಿಲ್ದಾಣ ಬಳಿ ಇರುವ ಮೈದಾನಕ್ಕೆ ಬ್ಯಾಡ್ಮಿಂಟನ್ ಆಡಲು ಬರುತ್ತಿದ್ದರು.

ಬುಧವಾರ ಬೆಳಗ್ಗೆ ಬ್ಯಾಡ್ಮಿಂಟನ್ ಆಡಲು ಬಂದಿದ್ದ ಅಶೋಕ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಾರ್ವಜನಿಕರು ಶವ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಪರಿಶೀಲಿಸಿದಾಗ ಮೃತನ ಶವದ ಮೇಲೆ ಇಯರ್‌ಫೋನ್ ಇರುವುದು ಪತ್ತೆಯಾಗಿದೆ.

ಸಂಗೀತ ಕೇಳಿಸಿಕೊಂಡು ಹಳಿ ದಾಟುತ್ತಿದ್ದಾಗ ರೈಲಿನ ಸದ್ದು ಕೇಳಿಸದೆ ಡಿಕ್ಕಿ ಹೊಡೆದು ಮೃತಪಟಿಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
The body of a techie, who was run over by a train, was found Frazer town railway station wednesday morning. Railway Police have yet to recover a mobile phone or earphones from the spot of the accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X