ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡಕ್ಕೆ ಥ್ಯಾಂಕ್ಸ್, ಬೆಂಗಳೂರಿಗೆ ಥಂಬ್ಸ್ ಡೌನ್

By Prasad
|
Google Oneindia Kannada News

ಬೆಂಗಳೂರು, ಏ. 18 : ಕರ್ನಾಟಕದಲ್ಲಿ ಗುರುವಾರ ಏ.17ರಂದು ನಡೆದ 16ನೇ ಲೋಕಸಭೆ ಚುನಾವಣೆಯಲ್ಲಿ ದಾಖಲೆಯ ಮತದಾನ ಆಗಿದೆ. ಈ ಬಾರಿ ಅಧಿಕೃತವಾಗಿ ಶೇ.67.28ರಷ್ಟು ಮತದಾನವಾಗಿದ್ದರೆ, 2009ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಶೇ.58.8ರಷ್ಟು ಮಾತ್ರ ಆಗಿತ್ತು. ಅತ್ಯಧಿಕ ಮತದಾನ ದಕ್ಷಿಣ ಕನ್ನಡದಲ್ಲಿ (ಶೇ.77.18) ಆಗಿದ್ದರೆ, ಕನಿಷ್ಠ ಮತದಾನ ಬೆಂಗಳೂರು ದಕ್ಷಿಣದಲ್ಲಿ ಕನಿಷ್ಠ ಮತದಾನ(ಶೇ.55.69) ಆಗಿದೆ. ದಕ್ಷಿಣ ಕನ್ನಡದ ಜನತೆಗೆ ಥ್ಯಾಂಕ್ಸ್, ಮತ ಹಾಕದ ಬೆಂಗಳೂರು ದಕ್ಷಿಣದ ಜನತೆಗೆ ಥಂಬ್ಸ್ ಡೌನ್.

ಕೊನೆಯ ಸ್ಥಾನದಲ್ಲಿರುವ ಬೆಂಗಳೂರು ದಕ್ಷಿಣದಲ್ಲಿ ಕೇವಲ ಶೇ.55ರಷ್ಟು ಮಾತ್ರ ಮತದಾನವಾಗಿದ್ದು, ಆ ಕ್ಷೇತ್ರದ ಶೇ.50ರಷ್ಟು ನಾಗರಿಕರು ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಸಾಬೀತಾಗಿದೆ. ಬೆಂಗಳೂರು ಉತ್ತರ ಮತ್ತು ಕೇಂದ್ರದಲ್ಲಿಯೂ ಅಂತಹ ಭಾರೀ ಮತದಾನವಾಗಿಲ್ಲ. ಅಲ್ಲಿ ಶೇ.55 ಮತ್ತು ಶೇ.56ರಷ್ಟು ಮತದಾನವಾಗಿದ್ದರೆ, ಬೆಂಗಳೂರು ಗ್ರಾಮೀಣದಲ್ಲಿ ಶೇ.68ರಷ್ಟು ಜನ ಮತ ಚಲಾಯಿಸಿದ್ದಾರೆ. ಗ್ರಾಮೀಣ ಜನತೆ ಮುಂದೆ ಎಂದು ಮತ್ತೆ ಸಾಬೀತು ಪಡಿಸಿದ್ದಾರೆ.

Thumbs up to Dakshina Kannada, thumbs down to Bangalore

ಮತದಾನದ ದಿನದಂದು ಬಹುತೇಕ ಕಚೇರಿಗಳು, ಅಂಗಡಿ ಮುಂಗಟ್ಟುಗಳು ರಜಾ ಘೋಷಿಸಿದ್ದರೂ, ರಾಜ್ಯದ ಇತರೆಡೆಗಳಲ್ಲಿ ಮತದಾನ ಮಾಡಿ ಜನರು ಸದುಪಯೋಗಪಡಿಸಿಕೊಂಡಿದ್ದರೆ, ಬೆಂಗಳೂರಿನ ಜನತೆ ರಜಾದಿನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ರಸ್ತೆ ಸರಿಯಿಲ್ಲ, ನೀರಿಲ್ಲ, ಕಸ ವಿಲೇವಾರಿಯಿಲ್ಲ, ಕರೆಂಟಿಲ್ಲ ಎಂದು ದೂರುವ ಈ ಜನರು ಮತ ಚಲಾಯಿಸಿ ಕರ್ತವ್ಯ ಏಕೆ ನಿಭಾಯಿಸಲಿಲ್ಲ? ಅಂಥವ ಮೇಲೆ ಧಿಕ್ಕಾರವಿಲಿ. [ಕರ್ನಾಟಕ ಮತದಾನದ ಚಿತ್ರಗಳು]

ಗುರುವಾರ ಸಂಜೆ, ಮತದಾನದ ನಂತರ ನಡೆದ ಗೂಗಲ್ ಹ್ಯಾಂಗೌಟ್ ನಲ್ಲಿ ಕೂಡ ಇದೇ ವಿಷಯ ಚರ್ಚೆಯಾಯಿತು. ಬೆಂಗಳೂರಿನ ಜನತೆ ರಜಾದಿನಗಳನ್ನು ತಿನ್ನುವುದಕ್ಕೆ, ಕುಡಿಯುವುದಕ್ಕೆ, ಟ್ರೆಕ್ಕಿಂಗ್ ಹೋಗುವುದಕ್ಕೆ, ಪ್ರವಾಸ ಹೊರಡುವುದಕ್ಕೆ, ವೃಥಾ ಕಾಲಕಳೆಯುವುದಕ್ಕೆ, ಮಜಾ ಉಡಾಯಿಸುವುದಕ್ಕೆ, ಮಲಗುವುದಕ್ಕೆ, ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ತೆಗಳುವುದಕ್ಕೆ ವ್ಯಯಿಸುತ್ತಾರೆ ಎಂದು ಚರ್ಚೆಯಲ್ಲಿ ಭಾಗವಹಿಸಿದವರೊಬ್ಬರು ಕಿಡಿ ಕಾರಿದರು. ಅದು ನಿಜ ಕೂಡ. [ಮತದಾನದ ಟ್ವೀಟ್ಸ್ ಫೋಟೋಸ್]

ಮತ ಹಾಕಲು ಬೆಂಗಳೂರಿನ ಜನತೆಗೆ (ಮತ ಹಾಕದವರಿಗೆ) ಏಕಿಷ್ಟು ಹಿಂಜರಿಕೆ? ಮತದಾರರು ಸ್ವಯಂಪ್ರೇರಿತರಾಗಿ ಬರಬೇಕೆ ಹೊರತು ಅವರನ್ನು ಎಳೆದು ತರಲಾಗುವುದು ಸಲ್ಲ ಎಂದು ಬ್ರಾಂಡ್ ಬಿಲ್ಡರ್ ಹರೀಶ್ ಬಿಜೂರ್ ಅವರು ಹ್ಯಾಂಗೌಟಲ್ಲಿ ಪ್ರತಿಕ್ರಿಯಿಸಿದ್ದರು. ಕರ್ನಾಟಕದಲ್ಲಿ ಸ್ಥಳೀಯರಿಗಿಂತ ಹೊರಗಿನವರೇ ಜಾಸ್ತಿ ಇದ್ದು, ಅವರಿಗೆ ಬೆಂಗಳೂರು ಮತ್ತು ಕರ್ನಾಟಕದ ಬಗ್ಗೆ ಕಾಳಜಿ ಇದ್ದರೆ ತಾನೆ ಮತ ಹಾಕುವುದು ಎಂಬ ಮಾತೂ ಕೇಳಿಬಂತು. ಈ ಸಮಸ್ಯೆಗೆ ಪರಿಹಾರವೇನು? ಸರಕಾರ ಚಿಂತಿಸಿದರೆ ಸಾಲದು, ಕೂಡಲೆ ಕಾರ್ಯತತ್ಪರವಾಗಬೇಕು. [ಗೂಗಲ್ ಹ್ಯಾಂಗೌಟ್ ಸಂವಾದ]

ಅಧಿಕೃತವಾಗಿ ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಯಿತು ನೋಡೋಣ.

ಕ್ರ.ಸಂ. ಕ್ಷೇತ್ರಗಳು 2014ರಲ್ಲಿ ಶೇ.ವಾರು ಮತದಾನ 2009ರಲ್ಲಿ ಶೇ.ವಾರು ಮತದಾನ
1 ಚಿಕ್ಕೋಡಿ 74.58 67.56
2 ಬೆಳಗಾವಿ 68.43 54.75
3 ಬಾಗಲಕೋಟ 68.88 63.07
4 ಬಿಜಾಪುರ 59.71 47.29
5 ಗುಲಬರ್ಗ 57.90 49.19
6 ರಾಯಚೂರು 58.27 45.90
7 ಬೀದರ್ 60.15 52.99
8 ಕೊಪ್ಪಳ 65.59 55.35
9 ಬಳ್ಳಾರಿ 70.28 61.44
10 ಹಾವೇರಿ 71.60 63.59
11 ಧಾರವಾಡ 65.95 56.55
12 ಉತ್ತರ ಕನ್ನಡ 69.20 59.09
13 ದಾವಣಗೆರೆ 73.20 67.49
14 ಶಿವಮೊಗ್ಗ 72.31 66.47
15 ಉಡುಪಿ-ಚಿಕ್ಕಮಗಳೂರು 74.46 68.18
16 ಹಾಸನ 73.50 69.17
17 ಚಿತ್ರದುರ್ಗ 66.07 54.49
18 ದಕ್ಷಿಣ ಕನ್ನಡ 77.18 74.45
19 ತುಮಕೂರು 72.50 64.79
20 ಮಂಡ್ಯ 71.42 68.79
21 ಮೈಸೂರು 66.53 58.88
22 ಚಾಮರಾಜನಗರ 72.81 67.91
23 ಬೆಂಗಳೂರು ಗ್ರಾಮಾಂತರ 68.80 57.92
24 ಬೆಂಗಳೂರು ಉತ್ತರ 56.47 46.72
25 ಬೆಂಗಳೂರು ಕೇಂದ್ರ 55.70 44.55
26 ಬೆಂಗಳೂರು ದಕ್ಷಿಣ 55.69 44.74
27 ಚಿಕ್ಕಬಳ್ಳಾಪುರ 76.06 68.09
28 ಕೋಲಾರ 75.50 69.15
English summary
Karnataka has recorded 65% voting on 17th April in 16th Lok Sabhe Election held in a single phase. Dakshina Kannada has registered 75% voting and Gulbarga has registered lowest voting. Bangalore people again failed to come out in big numbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X