ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೃತೀಯ ರಂಗ ಐಡಿಯಾ ಮಾಡ್ಯಾರಾ: ವರ್ಷಕ್ಕೊಬ್ಬ ಪಿಎಂ

By Srinath
|
Google Oneindia Kannada News

ಬೆಂಗಳೂರು, ಏ.10-ಹೌದು, ಥರ್ಡ್ ಫ್ರಂಟ್ ನಾಯಕರು ಐಡಿಯಾ ಮಾಡ್ಯಾರಂತ. ಏನಪ್ಪಾ ಅಂದ್ರೆ ವರ್ಷಕ್ಕೊಬ್ರು ಪ್ರಧಾನಿಯಾಗುವುದು. ಅಂದ್ರೆ ನಮ್ಮ ಗೌಡ್ರು, ಮುಲಾಯಂ ಸಿಂಗ್ ಯಾದವ್, ಮಾಯಾವತಿ, ಮಮತಾ ಬ್ಯಾನರ್ಜಿ ಮತ್ತು ಮತ್ತೊಬ್ಬರು ಯಾರಾದರೂ ವರ್ಷಕ್ಕೆ ಒಂದು ದಪಾ ಪ್ರಧಾನ ಮಂತ್ರಿಯಾಗಿ ಆಳುವುದು ಎಂಬ ಆಲೋಚನೆ ನಡೆಸ್ಯಾರಾ.

ಏನು ಇದೆಲ್ಲಾ ಹೇಳಿದ್ದು ಯಾರು ಅಂದ್ರೆ ... ಗುಪ್ತಚರ ವರದಿ. ಇದು ದೂರ ತೀರದ ಆಸೆಯೇ ಆದರೂ ಬಿಜೆಪಿಯೇತರ/ ಕಾಂಗ್ರೆಸ್ಸೇತರ ತೃತೀಯ ರಂಗವು ಅಧಿಕಾರಕ್ಕೆ ಬರುವ ಲೆಕ್ಕಾಚಾರದಲ್ಲಿದೆ. ಡಿಎನ್ ಎ ಆಂಗ್ಲಪತ್ರಿಕೆಯಲ್ಲಿ ಪ್ರಕಟವಾಗಿರುವ ಕೇಂದ್ರ ಗುಪ್ತಚರ ಇಲಾಖೆಯ ವರದಿಗಳ ಪ್ರಕಾರ ಸರಕಾರ ರಚಿಸುವ ಪ್ರಯತ್ನದಲ್ಲಿ ಚುನಾವಣೆಯಲ್ಲಿ ಸಕ್ರಿಯವಾಗಿರುವ ಪ್ರಾದೇಶಿಕ ಪಕ್ಷಗಳ ನಾಯಕರು ಮುಂದಿನ ಸರಕಾರ ಹೇಗಿರಬೇಕು, ಯಾರು ಪಿಎಂ ಆಗಬೇಕು, ಆದ್ರೆ ಅವರ ಅವಧಿ ಎಷ್ಟು ವರ್ಷದ್ದಾಗಿರಬೇಕು ಎಂಬೆಲ್ಲಾ ಲೆಕ್ಕಾಚಾರಗಳಲ್ಲಿ ತೊಡಗಿದ್ದಾರಂತೆ.

ಕೊನೆಗೆ ತಮ್ಮದೇ ಸರಕಾರ ಸ್ಥಾಪನೆಯಾದಾಗ ಸಮಾನತೆ ಕಾಯ್ದುಕೊಳ್ಳಲು ವರ್ಷಕ್ಕೊಬ್ಬರು ಪ್ರಧಾನಿಯಾಗಲೂ ಸಿದ್ಧತೆ ನಡೆಸಿದ್ದಾರಂತೆ. ಚುನಾವಣೆ ಮುಗಿದ ನಂತರವಷ್ಟೇ ಪ್ರಧಾನಿ ಆಯ್ಕೆ ಎಂದು ತೃತೀಯ ರಂಗದ ಮಿತ್ರ ಪಕ್ಷಗಳ ನಾಯಕರು ಹೇಳುತ್ತಿದ್ದಾರಾದರು ಮುಂದೆ ತಮ್ಮ ತಮ್ಮಲ್ಲೇ ಭಿನ್ನಾಭಿಪ್ರಾಯ ತಲೆದೋರುವುದು ಬೇಡವೆಂದು ಸರದಿ ಮೇಲೆ ಪ್ರಧಾನಿಯಾಗಲು ನಿರ್ಧರಿಸಿದ್ದಾರೆ ಎಂದು ಗುಪ್ತಚರ ವರದಿ ಹೇಳುತ್ತಿದೆ.

ತೃತೀಯ ರಂಗದ ಯಾರೆಲ್ಲ ಪ್ರಧಾನಿ ಅಭ್ಯರ್ಥಿಗಳು

ತೃತೀಯ ರಂಗದ ಯಾರೆಲ್ಲ ಪ್ರಧಾನಿ ಅಭ್ಯರ್ಥಿಗಳು

ತೃತೀಯ ರಂಗದ ಪ್ರಧಾನಿ ಅಭ್ಯರ್ಥಿಗಳು ಅನುಕ್ರಮವಾಗಿ ಹೀಗಿದ್ದಾರೆ. ಜೆ. ಜಯಲಲಿತಾ, ಮುಲಾಯಂ ಸಿಂಗ್ ಯಾದವ್, ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಮಾಯಾವತಿ ಮಧ್ಯೆ ದೇವೇಗೌಡರಿಗೂ ಒಂದು ಬಾರಿ ಅನ್ನುತ್ತಿದೆ ಗುಪ್ತಚರ ವರದಿ.

ತೃತೀಯ ರಂಗ 200ರೊಳಗೆ ಗೆಲ್ಲಬಹುದಂತೆ

ತೃತೀಯ ರಂಗ 200ರೊಳಗೆ ಗೆಲ್ಲಬಹುದಂತೆ

ಅಂದಹಾಗೆ ಹಾಲಿ ಲೋಕಸಭೆಯಲ್ಲಿ ತೃತೀಯ ರಂಗ ಮಿತ್ರ ಪಕ್ಷಗಳ ಬಲಾಬಲ 126 ಸ್ಥಾನ ಇದೆ. ಅನ್ಯ ಪಕ್ಷಗಳ ನೆರವಿಲ್ಲದೆ ತೃತೀಯ ರಂಗ ಅಧಿಕಾರಕ್ಕೆ ಬರಬೇಕು ಅಂದ್ರೆ ಅದು ಕನಿಷ್ಠ ದುಪ್ಪಟ್ಟು ಸ್ಥಾನಗಳನ್ನು ಗೆಲ್ಲಬೇಕು. ಆದರೆ ಗುಪ್ತಚರ ಇಲಾಖೆ ಅಧಿಕಾರಿಗಳ ಪ್ರಕಾರ ತೃತೀಯ ರಂಗದ ಮಿತ್ರ ಪಕ್ಷಗಳ ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆ 200ರೊಳಗೆ ಇರುತ್ತದಂತೆ.

ಗೌಡರು 10 ಸ್ಥಾನಗಳನ್ನಾದರೂ ಗೆಲ್ಲುವ ಗುಂಗಿನಲ್ಲಿದ್ದಾರೆ

ಗೌಡರು 10 ಸ್ಥಾನಗಳನ್ನಾದರೂ ಗೆಲ್ಲುವ ಗುಂಗಿನಲ್ಲಿದ್ದಾರೆ

ಈ ಹಿನ್ನೆಲೆಯಲ್ಲಿ ಗೌಡರು ಕರ್ನಾಟಕದಲ್ಲಿ 13 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ಕನಿಷ್ಠ 10 ಸ್ಥಾನಗಳನ್ನಾದರೂ ಗೆಲ್ಲುವ ಗುಂಗಿನಲ್ಲಿದ್ದಾರೆ. ಆದರೆ ಗೌಡರ ಪಕ್ಷ ರಾಜ್ಯದಲ್ಲಿ ಮೂರ್ಮಾಲ್ಕು ಸ್ಥಾನಗಳನ್ನಷ್ಟೇ ಗೆಲ್ಲಬಹುದು ಎಂದು ಇದೇ ಅಧಿಕಾರಿಗಳು ಪುನರುಚ್ಚರಿಸಿದ್ದಾರೆ.

ನಾನು ಯಾರಿಗೆ ಹೇಳ್ತೇನೊ ಅವರೇ ಪ್ರಧಾನಿಯಾಗ್ತಾರೆ: ದೇವೇಗೌಡ

ನಾನು ಯಾರಿಗೆ ಹೇಳ್ತೇನೊ ಅವರೇ ಪ್ರಧಾನಿಯಾಗ್ತಾರೆ: ದೇವೇಗೌಡ

ಆದರೆ ಇತ್ತ ರಾಜ್ಯದಲ್ಲಿ ಬಿರುಸಿನ ಪ್ರಚಾರದಲ್ಲಿರುವ ಗೌಡರು ಹೇಳುವುದೇ ಬೇರೆ. ರಾಜ್ಯದಿಂದ ಕನಿಷ್ಠ 12 ರಿಂದ 16 ಲೋಕಸಭಾ ಸ್ಥಾನಗಳನ್ನು ಪ್ರಾದೇಶಿಕ ಪಕ್ಷ ಜೆಡಿಎಸ್ಸಿಗೆ ಗೆಲ್ಲಿಸಿ ಕೊಡಿ. ನಾನು ಯಾರ ಹೆಸರು ಹೇಳಿದರೆ ಅವರೇ ಪ್ರಧಾನಿಯಾಗುತ್ತಾರೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನಿನ್ನೆ ಕೂಡ ಗುಡುಗಿದ್ದಾರೆ.

ದೇವೇಗೌಡರೇ ಹೋದರೂ ಜೆಡಿಎಸ್ ಗೆ ಏನಾಗುವುದಿಲ್ಲ

ದೇವೇಗೌಡರೇ ಹೋದರೂ ಜೆಡಿಎಸ್ ಗೆ ಏನಾಗುವುದಿಲ್ಲ

ಬಾಗೇಪಲ್ಲಿ ಪಟ್ಟಣದ ಹೊರ ವಲಯದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಚಿಕ್ಕಬಳ್ಳಾಪುರ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಅವರ ಪರ ಮತಯಾಚಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಇಲ್ಲದಂತೆ ಮಾಡಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಆದರೆ, ದೇವೇಗೌಡರೇ ಹೋದರೂ ಸಹ ಜೆಡಿಎಸ್ ಗೆ ಏನಾಗುವುದಿಲ್ಲ. ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ. ಎಷ್ಟೇ ರಾಷ್ಟ್ರೀಯ ಪಕ್ಷಗಳು ಎದುರಾದರೂ ಸರಿ ಪಕ್ಷ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತದೆ. ತನ್ನ ಅಸ್ತಿತ್ವವನ್ನು ಬಿಟ್ಟು ಕೊಡುವುದಿಲ್ಲ. ಹಾಗಾಗಿ ಹೆಚ್ಚಿನ ಸ್ಥಾನಗಳೊಂದಿಗೆ ಪಕ್ಷವನ್ನು ಆಶೀರ್ವದಿಸಿ ಎಂದು ಮತಯಾಚಿಸಿದ್ದಾರೆ.

ನಾವೇನು ಹೇಡಿಗಳಲ್ಲ; ನಮ್ಮ ಹೋರಾಟ ನಿರಂತರ-ದೇವೇಗೌಡ

ನಾವೇನು ಹೇಡಿಗಳಲ್ಲ; ನಮ್ಮ ಹೋರಾಟ ನಿರಂತರ-ದೇವೇಗೌಡ

ಕುಮಾರಸ್ವಾಮಿ ಪಲಾಯನವಾದಿ, ಹೇಡಿ ಎಂದು ಕೆಲವರು ಜರಿಯುತ್ತಿದ್ದಾರೆ. ಯಾರಿಗೋ ಹೆದರಿ ಓಡಿ ಹೋಗುವ ಜಾಯಮಾನದವರು ನಾವಲ್ಲ. ನಾವೇನು ಹೇಡಿಗಳೂ ಅಲ್ಲ. ನಮ್ಮ ಹೋರಾಟ ನಿರಂತರ. ಬಿಜೆಪಿ ಮತ್ತು ಕಾಂಗ್ರೆಸ್‌ ತಂತ್ರ- ಪ್ರತಿತಂತ್ರಗಳನ್ನು ಎದುರಿಸಿ, ಮೆಟ್ಟಿ ನಿಲ್ಲುವುದು ನಮಗೂ ಗೊತ್ತು. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಕಾಂಗ್ರೆಸ್ ಮತ್ತ ಬಿಜೆಪಿಯಿಂದ ಸಾಧ್ಯವಿಲ್ಲ. ಕುಮಾರಸ್ವಾಮಿ ಮಾತ್ರ ಅವುಗಳನ್ನು ಬಗೆಹರಿಸಬಲ್ಲರು. ಅವರಿಗೆ ಹೆಚ್ಚಿನ ಮತ ಕೊಟ್ಟ ಬೆಂಬಲಿಸಬೇಕು ಎಂದು ದೊಡ್ಡಗೌಡರು ಮನವಿ ಮಾಡಿಕೊಂಡಿದ್ದಾರೆ.

English summary
Lok Sabha polls 2014 - Third Front moots a Prime Minister a year idea says Central Intelligence Bureau poll survey. According to the poll survey predictions leaders of the regional parties which are hoping to form the next govt at the center have toyed with an idea of equally sharing the Prime Ministerial term, with each getting a shot at it a year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X