ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಕಾರ್ಡ್

|
Google Oneindia Kannada News

ಬೆಂಗಳೂರು, ಸೆ. 16 : ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಇನ್ನು ಮುಂದೆ ಯಾರೆಂದರೆ ಯಾರು ನುಗ್ಗುವಂತಿಲ್ಲ. ಬೆಂಗಳೂರು ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ವಿವಿ ಸ್ಮಾರ್ಟ್ ಕಾರ್ಡ್ ವಿತರಿಸಲು ಮುಂದಾಗಿದೆ.

ಅನಗತ್ಯವಾಗಿ ವಿವಿ ಆವರಣದೊಳಗೆ ಪ್ರವೇಶಿಸುವ ಅಪರಿಚಿತರು ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆ ಉಂಟುಮಾಡುವುದುನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

bangalore university

ಸೋಮವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ನೀಡುವ ಕಾರ್ಡ್‌ ಹಾಜರಾತಿ ಲೆಕ್ಕಕ್ಕಲ್ಲ. ಇದು ಕೇವಲ ಗುರುತಿಗೆ ಮಾತ್ರ ಎಂದು ವಿವಿ ಸ್ಪಷ್ಟಪಡಿಸಿದೆ.(ಬೆಳಿಗ್ಗೆ ಎದ್ದು ಕಾಲೇಜಿಗೆ ಹೋದರೆ ಕೂರಲು ಜಾಗವಿಲ್ಲ!)

ಬಯೋಮೆಟ್ರಿಕ್‌ ವ್ಯವಸ್ಥೆ ಮೂಲಕ ಸ್ಮಾರ್ಟ್‌ ಕಾರ್ಡ್ ಕೆಲಸ ಮಾಡಲಿದ್ದು ವಿದ್ಯಾರ್ಥಿಗಳೆಂದು ಹೇಳಿಕೊಂಡು ಹಾಸ್ಟೆಲ್ ಸೇರಿಕೊಂಡಿರುವವರನ್ನು ಹೊರಹಾಕಲು ಇದು ನೆರವಾಗುತ್ತೆ ಎಂದು ಕುಲಪತಿ ಪ್ರೋ. ಬಿ.ತಿಮ್ಮೇಗೌಡ ತಿಳಿಸಿದ್ದಾರೆ.

ಉಪನ್ಯಾಸಕರಲ್ಲದವರು ಕೆಲವೊಮ್ಮೆ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿರುವುದು ಕಂಡುಬಂದಿದ್ದು ಸ್ಮಾರ್ಟ್‌ ಕಾರ್ಡ್ ಅದೆಲ್ಲದಕ್ಕೆ ತಡೆ ಒಡ್ಡಲಿದೆ. ಮೌಲ್ಯಮಾಪನದಿಂದ ತಪ್ಪಿಸಿಕೊಳ್ಳುತ್ತಿದ್ದ ಉಪನ್ಯಾಸಕರಿಗೂ ಇದು ಬ್ರೇಕ್ ಹಾಕಲಿದೆ ಎಂದು ವಿವಿ ಮೌಲ್ಯಮಾಪನ ವಿಭಾಗದ ಕುಲಸಚಿವ ಎನ್.ನಿಂಗೇಗೌಡ ತಿಳಿಸಿದ್ದಾರೆ.(ಬೆಂಗಳೂರು ವಿವಿಯ 12 ಕಾಲೇಜುಗಳಿಗೆ ಬೀಗ?)

ವಿವಿಯ ವಿವಿಧ ವಿಭಾಗದ ಒಟ್ಟು 117 ಪ್ರಾಧ್ಯಾಪಕರು ಮತ್ತು ಸಹ ಪ್ರಾಧ್ಯಾಪಕರಿಗೆ ಪದೋನ್ನತಿ ಬಡ್ತಿ ನೀಡಲು ಚಿಂತಿಸಲಾಗಿದೆ. ಇದಕ್ಕೆ ಸಿಂಡಿಕೇಟ್ ಸಭೆ ಒಪ್ಪಿಗೆ ಸೂಚಿಸಿದೆ ಎಂದು ತಿಮ್ಮೇಗೌಡ ತಿಳಿಸಿದ್ದಾರೆ.

English summary
The Bangalore University (BU) will soon issue smart cards or chip-based identity cards for all students and staff (including teaching and non-teaching). Interestingly, the swipe cards for students will be issued only at hostels, not for attendance purpose in classrooms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X