ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆಕ್‌ ಮಹೀಂದ್ರಾದಿಂದ ಪಾಲಿಕೆಯ 6 ಶಾಲೆ ದತ್ತು ಸ್ವೀಕಾರ

By Ashwath
|
Google Oneindia Kannada News

ಬೆಂಗಳೂರು, ಜು.17: ಬಿಬಿಎಂಪಿಯ 'ನಮ್ಮ ಬೆಂಗಳೂರು ನನ್ನ ಕೊಡುಗೆ ಯೋಜನೆ'ಯಡಿ ಪಾಲಿಕೆಯ ವ್ಯಾಪ್ತಿಗೆ ಸೇರಿದ 3 ಪ್ರಾಥಮಿಕ ಶಾಲೆ ಮತ್ತು 3 ಮಾಧ್ಯಮಿಕ ಶಾಲೆಯನ್ನು ಟೆಕ್‌‌ ಮಹೀಂದ್ರಾ ದತ್ತು ಸ್ವೀಕರಿಸಿದೆ.

ಈ ಸಂಬಂಧ ಟೆಕ್‌‌ ಮಹೀಂದ್ರಾ ಬಿಬಿಎಂಪಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ನಗರದ ಲಕ್ಕಸಂದ್ರ ವಾರ್ಡ್‌ನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಕಾರ್ಯ‌ಕ್ರಮದಲ್ಲಿ ಆಯುಕ್ತ ಲಕ್ಷ್ಮೀನಾರಾಯಣ ಹಾಗೂ ಟೆಕ್‌ ಮಹೀಂದ್ರ ಫೌಂಡೇಶನ್‌ ಮುಖ್ಯ ಕಾರ್ಯ‌‌ ನಿರ್ವ‌ಹಣಾಧಿಕಾರಿ ಒಪ್ಪಂದಕ್ಕೆ ಸಹಿ ಹಾಕಿದರು.[2 ಲಕ್ಷ ಖರ್ಚು ಮಾಡಿ ಬಿಬಿಎಂಪಿ ಹಿಡಿದದ್ದು 20 ಇಲಿ!]

 Tech Mahindra bbmp

ಪಾಲಿಕೆಗೆ ಸೇರಿದ ಲಕ್ಕಸಂದ್ರ,ಫ್ರೇಜರ್‌ ಟೌನ್‌, ಆಸ್ಟಿನ್‌ ಟೌನ್‌, ಜೌಗು ಪಾಳ್ಯದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳನ್ನು ಟೆಕ್‌ ಮಹೀಂದ್ರಾ ದತ್ತು ಸ್ವೀಕರಿಸಿದೆ.

ಮುಂದಿನ ಮೂರು ವರ್ಷ‌‌‌ಗಳಿಗೆ ಬೇಕಾಗಿರುವ ಕಂಪ್ಯೂಟರ್‌‌‌, ಪೀಠೋಪಕರಣ ಸೇರಿದಂತೆ ಮಕ್ಕಳ ಶಿಕ್ಷಣಕ್ಕೆ ಬೇಕಾಗಿರುವ ಎಲ್ಲಾ ಸೌಕರ್ಯ‌ಗಳನ್ನು ಟೆಕ್‌ ಮಹೀಂದ್ರಾ ತನ್ನ ನಿಧಿಯಿಂದ ನೀಡಲಿದೆ.

ನಮ್ಮ ಬೆಂಗಳೂರು ನನ್ನ ಕೊಡುಗೆ ಯೋಜನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಪಾಲಿಕೆ ಶಾಲೆ, ಆಸ್ಪತ್ರೆ, ಕೆರೆಗಳ ನಿರ್ವ‌ಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ 250ರಿಂದ 300 ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಯೋಜನೆ ಇದಾಗಿದೆ.

English summary
Namma Bangalore- Nanna Koduge' (My contribution to our Bangalore) project Tech Mahindra Foundation has adopted 6 BBMP schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X