ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ಯಾಚಾರದ ವಿರುದ್ಧ ಬೀದಿಗಿಳಿದ ಸುರಾನ ವಿದ್ಯಾರ್ಥಿಗಳು

By Ashwath
|
Google Oneindia Kannada News

ಬೆಂಗಳೂರು, ಆ.1:ಬೆಂಗಳೂರು ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಅತ್ಯಾಚಾರದ ಪ್ರಕರಣಗಳನ್ನು ಖಂಡಿಸಿ ಸುರಾನ ಕಾಲೇಜಿನ ಎನ್‌ಎಸ್‌ಎಸ್‌‌ ವಿದ್ಯಾರ್ಥಿ‌ಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಎನ್‌ಎಸ್‌ಎಸ್‌ ಅಧಿಕಾರಿ ಗಿರೀಶ್‌, ಚಲನ ಚಿತ್ರ ನಟಿ, ಕಾಲೇಜಿನ ವಿದ್ಯಾರ್ಥಿ‌‌ನಿ ರೂಪಿಕಾ, ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿ‌ಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.[ಅತ್ಯಾಚಾರಿಗಳ ಶಿಕ್ಷೆ ನಿರ್ಧರಿಸಲು ತಜ್ಞರ ಸಮಿತಿ]

roopika protest

ಮಧ್ಯಾಹ್ನ ಮೂರು ಘಂಟೆಗೆ ಸುರಾನ ಕಾಲೇಜಿನಿಂದ ಆರಂಭಗೊಂಡ ವಿದ್ಯಾರ್ಥಿಗಳ ಜಾಥಾ ಸೌಂತ್‌ಎಂಡ್‌ ಸರ್ಕಲ್‌ ಮೂಲಕ ಜಯನಗರ 4ನೇ ಬ್ಲಾಕ್‌ಗೆ ತೆರಳಿ ಬಳಿಕ ಸೌಂತ್‌ ಎಂಡ್‌ ಸರ್ಕ‌ಲ್‌ಗೆ ಹಿಂದಿರುಗಿ ಸಮಾಪನಗೊಂಡಿತು.[ಬೆಂಗಳೂರು ಬಂದ್‌‌: ಕರವೇ ನಾರಾಯಣ ಗೌಡ ಏಕಿಲ್ಲ?]

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟಿ ರೂಪಿಕಾ ಮಾತನಾಡಿ" ಮಹಿಳೆಯರಿಗೆ ಇಂದು ರಕ್ಷಣೆಯೇ ಇಲ್ಲದಂತಾಗಿದೆ. ಶಾಲೆಯಲ್ಲೂ ಅತ್ಯಾಚಾರ ನಡೆಯುತ್ತಿದ್ದು, ಕಾಮುಕರು ಕಾನೂನಿನ ಯಾವುದೇ ಭಯವಿಲ್ಲದೇ ಓಡಾಡುತ್ತಿದ್ದಾರೆ. ಅತ್ಯಾಚಾರ ಪ್ರಕರಣಗಳ ವಿಚಾರಣೆ ಬೇಗವಾಗಿ ನಡೆದು ಪಾಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಕಾನೂನು ರೂಪಿಸಿ" ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು.

English summary
Students of Surana College NSS unit protest against several cases of rape came to light in Bangalore and other parts of the Karnataka. Students took out rally in Jayanagar 3rd block on August 1,Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X