ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲುಗಳ ಮೇಲೆ ಸೋಲಾರ್ ಫಲಕ ಅಳವಡಿಕೆ

|
Google Oneindia Kannada News

ಬೆಂಗಳೂರು, ಜೂ. 20 : ರೈಲ್ವೆ ಇಲಾಖೆ ತನ್ನ ಕೋಚ್ ಗಳ ಮೇಲೆ ಸೋಲಾರ್ ಫಲಕಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಬಹುದು ಇದರಿಂದ ಡಿಸೇಲ್ ಉಳಿಸುವ ಜೊತೆಗೆ ರೈಲಿಗೆ ಬೇಕಾದ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಬಹುದು ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿಗಳು ಈ ಕುರಿತ ಪ್ರಸ್ತಾವನೆಯನ್ನು ಪಂಜಾಬ್ ನಲ್ಲಿರುವ ರೈಲ್ವೆ ಕೋಚ್ ಫ್ಯಾಕ್ಟರಿಗೆ ಕಳುಹಿಸಿದ್ದು, ತನ್ನ ಸಂಶೋಧನೆ ವರದಿಯನ್ನು ಪ್ರಸ್ತಾವನೆ ಜೊತೆಗೆ ಕಳುಹಿಸಿ ಕೊಟ್ಟಿದ್ದಾರೆ. ಸೋಲಾರ್ ಫಲಕ ಅಳವಡಿಸುವುದರಿಂದ ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. [ಇ.ಶ್ರೀಧರನ್‌ ನೇತೃತ್ವದಲ್ಲಿ ರೈಲ್ವೆ ಸಮಿತಿ: ಡಿವಿಎಸ್‌]

Indian Railways

ಸೋಲಾರ್ ಫಲಕ ಅಳವಡಿಸುವುದರಿಂದ ಡೀಸೆಲ್ ಉಳಿಸುವ ಜೊತೆಗೆ, ರೈಲಿಗೆ ಬೇಕಾದ ವಿದ್ಯುತ್ ಅನ್ನು ಅಲ್ಲಿಯೇ ಉತ್ಪಾದಿಸಿಕೊಳ್ಳಬಹುದು. ಫ್ಯಾನ್, ಎಸಿ, ದೀಪಗಳಿಗೆ ಸೋಲಾರ್ ವಿದ್ಯುತ್ ಅನ್ನು ಬಳಸಿಕೊಳ್ಳಬಹುದು ಎಂದು ತಮ್ಮ ವರದಿಯಲ್ಲಿ ವಿಜ್ಞಾನಿಗಳು ತಿಳಿಸಿದ್ದಾರೆ. [ರೈಲಿನಲ್ಲಿ ಸಿಗಲಿದೆ ಎಂಟಿಆರ್ ಇಡ್ಲಿ, ಸಾಂಬಾರ್]

ಸೋಲಾರ್ ಫಲಕ ಆಳವಡಿಸುವ ಖರ್ಚು ಸಹ ಕಡಿಮೆಯಾಗಲಿದ್ದು, ಈ ಪ್ರಸ್ತಾವನೆಗೆ ಒಪ್ಪಿಗೆ ದೊರೆತರೆ, ಇದರ ಆರ್ಥಿಕ ಲೆಕ್ಕಾಚಾರಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಸಲು ವಿಜ್ಞಾನಿಗಳು ನಿರ್ಧರಿಸಿದ್ದಾರೆ. ವಿಜ್ಞಾನಿಗಳು ಇಂಧನ ಮತ್ತು ರೈಲ್ವೆ ಇಲಾಖೆಯ ಜೊತೆ ಸೇರಿ, ಸಂಶೋಧನೆ ನಡೆಸಲು ತೀರ್ಮಾನಿಸಿದ್ದಾರೆ.

ವಿಜ್ಞಾನಿಗಳು ಕಳುಹಿಸಿರುವ ಈ ಪ್ರಸ್ತಾವನೆಗೆ ರೈಲ್ವೆ ಇಲಾಖೆಯ ಇಂಜಿನಿಯರ್ ಗಳ ಒಪ್ಪಿಗೆ ಬೇಕಾಗಿದೆ. ವೇಗವಾಗಿ ಚಲಿಸುವ ರೈಲಿನಲ್ಲಿ ಸೋಲಾರ್ ಫಲಕಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಬಗ್ಗೆ ಇಂಜಿನಿಯರ್ ಗಳು ಕೆಲವು ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ. 100 ಕಿ.ಮೀ.ಗಿಂತ ವೇಗವಾಗಿ ಚಲಿಸುವ ರೈಲುಗಳ ಮೇಲ್ಭಾಗದಲ್ಲಿ ಫಲಕಗಳನ್ನು ಹೇಗೆ ಅಳವಡಿಸಬೇಕು? ಎಂಬ ಬಗ್ಗೆ ಚಿಂತನೆ ನಡೆದಿದೆ.

ಸದ್ಯ ಈ ಕುರಿತ ಪ್ರಸ್ತಾವನೆ ಮಾತ್ರ ರೈಲ್ವೆ ಕೋಚ್ ಫ್ಯಾಕ್ಟರಿಗೆ ಸಲ್ಲಿಕೆಯಾಗಿದ್ದು, ಇದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದ ನಂತರ ಇದಕ್ಕೆ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ. ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದರೆ ರೈಲುಗಳಲ್ಲಿ ಸೋಲಾರ್ ವಿದ್ಯುತ್ ಬಳಕೆಯಾಗಲಿದೆ.

English summary
Scientists of Indian Institute of Science Bangalore, have asked the railways to consider installing rooftop solar power panels on train coaches to meet their electricity needs and curb the country’s diesel consumption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X