ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ವ್ಯಾಸಂಗದಲ್ಲಿ ಶಿವಮೊಗ್ಗ ಯುವಕನ ಚಿನ್ನದ ಕೊಳ್ಳೆ

By Srinath
|
Google Oneindia Kannada News

ಶಿವಮೊಗ್ಗ, ಏಪ್ರಿಲ್ 21: ಈತನದು ಅಪ್ಪಟ ಸ್ವಯಂಕೃಷಿ. ಅದೂ ಕೃಷಿ ಕ್ಷೇತ್ರದಲ್ಲೇ.. ಅದಕ್ಕೆ ಈಗ ಬಂಗಾರದ ಲೇಪನವೂ ಆಗಿದೆ. ಏನಪ್ಪಾ ಅಂದರೆ ನಗರದ ಯುವಕನೊಬ್ಬ ಈ ಹಿಂದೆ ಪದವಿಯಲ್ಲಿ (BSc) 10 ಚಿನ್ನ ಪದಕ ಪಡೆದಿದ್ದು ಸಾಲದು ಅಂತ ಈಗ ಸ್ನಾತಕೋತ್ತರ ಪದವಿಯಲ್ಲೂ 7 ಚಿನ್ನದ ಪದಕಗಳನ್ನು ಬಾಚಿ, ಮಹತ್ಸಾಧನೆ ಮಾಡಿದ್ದಾನೆ.

ಈ ಸಾಹಸಿ ನವತರುಣನ ಹೆಸರು ಆದಿತ್ಯ ಅಂತ. ಇವರ ತಂದೆಯೋ (ಶ್ರೀನಿವಾಸ ರಾವ್) ನಗರದ ರವೀಂದ್ರನಗರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಅಡುಗೆ ಕಾಯಕ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಹೇಳಬೇಕು ಅಂದರೆ ಆದಿತ್ಯನಿಗೆ ಅವರ ತಂದೆಯ ಬಡತನವೇ ವರವಾಗಿದೆ. ಹಾಗಾಗಿ ಪಟ್ಟು ಹಿಡಿದು ವಿದ್ಯೆಯನ್ನು ಕರಗತಮಾಡಿಕೊಂಡಿದ್ದಾನೆ.

shimoga-youth-aditya-bags-7-gold-medals-in-msc-agri-in-bangalore-uas
ಕಳೆದ ವಾರ ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 48ನೇ ಘಟಿಕೋತ್ಸವದಲ್ಲಿ MScಯಲ್ಲಿ 7 ಚಿನ್ನದ ಪದಕಗಳನ್ನು ಕೊರಳಮಾಲೆಯಾಗಿ ಧರಿಸಿದ ಆದಿತ್ಯ ಕೃಷಿಯಲ್ಲೇ ಕೃಷಿ ಮಾಡುವೆ ಅನ್ನುತ್ತಾನೆ. ಕೃಷಿ ವಿಜ್ಞಾನಿಯಾಗಿ ಮಹತ್ತರವಾದುದ್ದನ್ನು ಸಾಧಿಬೇಕು ಎಂಬ ಹಂಬಲ ಆತನದ್ದಾಗಿದೆ.

ನಮ್ಮ ರೈತರು ಹಳೆಯ ಬೇಸಾಯ ಪದ್ದತಿಯನ್ನೇ ಅಳವಡಿಸಿಕೊಂದು ಬಂದಿದ್ದಾರೆ. ಹಾಗಾಗಿ ಅವರಿಗೆ ಒಳ್ಳೆಯ ಮಾದರಿ ಬೇಸಾಯ ಪದ್ಧತಿ ನೀಡಬೇಕು ಎಂಬ ಉದ್ದೇಶದಿಂದ ತಾನು ಕೃಷಿ ವಿಜ್ಞಾನಿಯಾಗಬೇಕು ಎಂದು ಹಂಬಲಿಸುತ್ತಿರುವ ಆದಿತ್ಯ ಭವಿಷ್ಯದಲ್ಲಿ ಖಂಡಿತ ನಾಡಿನ ಕೃಷಿ ಕ್ಷೇತ್ರದಲ್ಲಿ ಏನಾದರೂ ಸಾಧಿಸುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ.

ಮಮತಾ ಮುಡಿಗೆ 11 ಚಿನ್ನದ ಪದಕ:
ಶಿವಮೊಗ್ಗದ ಮತ್ತೊಂದು ಪ್ರತಿಭೆ ಮಮತಾ ಕುಮಾರಿ ಸಹ ಒಳ್ಳೆಯ ಸಾಧನೆ ಮಾಡಿದ್ದಾರೆ. ಶಿವಮೊಗ್ಗದ ಕೃಷಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಮತಾ ಕುಮಾರಿ BSc ಕೃಷಿಯಲ್ಲಿ 11 ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಮುಂದ!? ಅಲಹಾಬಾದಿನ ಸ್ಯಾಮ್ ಹಿಗ್ಗಿನ್ ಬೋಥಾಂ ಕೃಷಿ, ತಂತ್ರಜ್ಞಾನ ಮತ್ತು ವಿಜ್ಞಾನ ವಿದ್ಯಾಲಯದಲ್ಲಿ (Sam Higginbotom Institute of Agriculture, Technology & Sciences- Allahabad) ಎಂಎಸ್ಸಿ ಮಾಡುವ ಇರಾದೆ ಹೊಂದಿರುವ ಮಮತಾ ಕುಮಾರಿ ಅದಾದ ನಂತರ PhD ಮಾಡಿ ಜೀವನವನ್ನು ಕೃಷಿ ಸಂಶೋಧನೆಗೆ ಸಮರ್ಪಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಆಶಾ, ಅಕ್ಷತಾ ಮತ್ತು ಲೇಪಾಕ್ಷಿ ಸಾಧನೆ

Akshatha, Asha and Lepakshi -UASB
ಆಶಾ ಐಎಸ್ ಸಹ BSc in Agricultureನಲ್ಲಿ 9 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ. ಅಂದಹಾಗೆ ಆಶಾರ ತಂದೆ ಚಿಕ್ಕಮಗಳೂರಿನ ಹಾಂಡಿಯಲ್ಲಿ ಕೃಷಿಕರಾಗಿದ್ದು, 1 ಎಕರೆ ಜಮೀನು ಹೊಂದಿದ್ದಾರೆ. ಮನೆಯಲ್ಲಿನ ಕಡುಬಡತನ ಮುಂದಿನ ವ್ಯಾಸಂಗಕ್ಕೆ ಅಡ್ಡಿಯಾಗಬಹುದು ಎಂಬ ಆಶಾ ಆತಂಕದಲ್ಲಿದ್ದಾರೆ.

ಅಕ್ಷತಾ ಎಚ್: 9 ಚಿನ್ನದ ಪದಕಗಳನ್ನು ಮಡಿಲಿಗೆ ಹಾಕಿಕೊಂಡಿರುವ ಅಕ್ಷತಾ, ಬೆಂಗಳೂರಿನವರೇ ಆದರೂ ಕೃಷಿ ಕುಟುಂಬದವರು. ಈಗಾಗಲೇ ಐಎಎಸ್ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದಾರೆ. ತಂದೆ ಕೃಷಿ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.

ಇನ್ನು ತುಮಕೂರಿನ ನಿಡಸಾಲೆಯವರಾದ ಲೇಪಾಕ್ಷಿ ಸಹ 9 ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ರೈತ ಕುಟುಂಬದ ಹಿನ್ನೆಲೆಯವರು. ನಾನೂ ಐಎಎಸ್ ಪಾಸು ಮಾಡುವೆ. ನಮ್ಮ ತುಮಕೂರಿಗೇ ಜಿಲ್ಲಾಧಿಕಾರಿಯಾಗಿ ಬರುವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

English summary
Gold rush at Bangalore UAS: Shimoga youth Aditya bags 7 gold medals in Msc Agriculture. Aditya, son of chef in Shimoga completed his MSc in agriculture from the University of Agriculture Sciences- Bangalore, stole the thunder during the graduation ceremony. His feat of winning 7 gold medals left the chief guest - Director-general of TERI, RK Pachauri and Governor Hans Raj Bhardwaj impressed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X