ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ವಿಂಗಡಿಸಿ ಬೆಂಗಳೂರಿಗೆ ನಿಮ್ಮ ಕೊಡುಗೆ ನೀಡಿ

|
Google Oneindia Kannada News

ಬೆಂಗಳೂರು, ಜು. 20 : ಕಸವನ್ನು ವಿಂಗಡಿಸಿ ನೀಡುವ ಮೂಲಕ ಬೆಂಗಳೂರಿನ ಎಲ್ಲಾ ಜನರು ನಗರಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಒಂದು ಕೋಟಿ ಜನರಿರುವ ಬೆಂಗಳೂರು ನಗರವನ್ನು ಜನರ ಸಹಕಾರದಿಂದ ಮಾತ್ರ ಸ್ವಚ್ಚವಾಗಿಟ್ಟುಕೊಳ್ಳಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಶನಿವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯ್ದ ಸೇವೆಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳು ವಹಿಸಿಕೊಳ್ಳುವ "ನಮ್ಮ ಬೆಂಗಳೂರು-ನನ್ನ ಕೊಡುಗೆ" ಕಾರ್ಯಕ್ರಮಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

Siddaramaiah

ಬೆಂಗಳೂರು ನಗರದಲ್ಲಿ ಒಂದು ಕೋಟಿ ಜನರಿದ್ದಾರೆ. ನಗರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಜನರ ಸಹಕಾರದಿಂದ ಮಾತ್ರ ಬೆಂಗಳೂರು ಗಾರ್ಬೇಜ್ ಸಿಟಿಯಾಗುವುದನ್ನು ತಡೆಯಬಹುದಾಗಿದೆ ಎಂದು ಸಿಎಂ ತಿಳಿಸಿದರು. [ಮಹೀಂದ್ರಾದಿಂದ ಪಾಲಿಕೆಯ 6 ಶಾಲೆ ದತ್ತು ಸ್ವೀಕಾರ]

ನಗರವಾಸಿಗಳು ಕಸ ವಿಂಗಡಿಸಿ ನೀಡುವ ಮೂಲಕ ಬೆಂಗಳೂರು ನಗರಕ್ಕೆ ತಮ್ಮ ಕೊಡುಗೆ ನೀಡಬೇಕು. ಹಾಗೆಯೇ ಕಸ ಹಾಕುವವರು ದೊಡ್ಡವರು, ಕಸ ತೆಗೆಯುವವರು ಕೆಳವರ್ಗದ ಜನ ಎಂಬ ಭಾವನೆಯನ್ನು ಜನರು ಮನಸ್ಸಿನಿಂದ ತೆಗೆದು ಹಾಕಿದರೆ ನಗರವನ್ನು ಎಲ್ಲರೂ ಸೇರಿ ಸುಂದರವಾಗಿಟ್ಟುಕೊಳ್ಳಬಹುದು ಎಂದರು. [ಕಸ ಸಮಸ್ಯೆ ನಿವಾರಿಸಲು ಮನಿಲಾ ಮಂತ್ರ]

ಸಹಭಾಗಿತ್ವ ಅಗತ್ಯ : ಬೆಂಗಳೂರು ಸುರಕ್ಷಿತವಾದ ನಗರ. ಇಲ್ಲಿನ ವಾತಾವರಣವೂ ಉತ್ತಮವಾಗಿದೆ ಎಂಬ ಕಾರಣಕ್ಕೆ ಜನರು ಇಲ್ಲಿ ನೆಲೆಸಲು ಬಯಸುತ್ತಾರೆ. ಆದರೆ, ಪಾಲಿಕೆಯ ತೆರಿಗೆ ಆದಾಯ ಹಾಗೂ ಸರ್ಕಾರದ ಅನುದಾನಗಳಿಂದಲೇ ನಗರವಾಸಿಗಳಿಗೆ ಅಗತ್ಯ ನಾಗರಿಕ ಸೌಲಭ್ಯ ಕಲ್ಪಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ಹೇಳಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ, ಬೆಂಗಳೂರಿನ ಜನರು ನನಗೂ ಆಶೀರ್ವಾದ ನೀಡಿ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ನಾನು ಹಾಗೂ ನನ್ನ ರೈಲ್ವೆ ಇಲಾಖೆ ಮೂಲಕ ಬೆಂಗಳೂರಿಗೆ ಹೆಚ್ಚಿನ ಕೊಡುಗೆ ನೀಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದರು.

ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಸಚಿವ ಅನಂತ್ ಕುಮಾರ್, "ಲೋಕಸಭಾ ಸದಸ್ಯರ ಅನುದಾನದಿಂದ ಒಂದು ಕೋಟಿ ರೂ. ಹಣವನ್ನು ನಮ್ಮ ಬೆಂಗಳೂರು- ನನ್ನ ಕೊಡುಗೆ ಕಾರ್ಯಕ್ರಮದಲ್ಲಿ ಕೆಲ ಸೇವೆಗಳ ನಿರ್ವಹಣೆಗೆ ನೀಡುತ್ತೇನೆ" ಎಂದು ಭರವಸೆ ನೀಡಿದರು.

ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ, ಉಪಮೇಯರ್ ಎನ್.ಇಂದಿರಾ, ಆಯುಕ್ತ ಎಂ.ಲಕ್ಷ್ಮೀನಾರಾಯಣ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಏನಿದು ನಮ್ಮ ಬೆಂಗಳೂರು -ನನ್ನ ಕೊಡುಗೆ : ನಮ್ಮ ಬೆಂಗಳೂರು - ನನ್ನ ಕೊಡುಗೆ ಕಾರ್ಯಕ್ರಮದ ದಡಿ ನಗರದ ವ್ಯಾಪ್ತಿಯ ಕಂಪನಿಗಳು, ಡೆವೆಲಪರ್ ಗಳು, ಖಾಸಗಿ ಉದ್ಯಮಿಗಳು, ವ್ಯಕ್ತಿಗಳು, ಸಂಘ ಸಂಸ್ಥೆಗಳು ಪಾಯೋಜಕತ್ವದ ಮೂಲಕ ಬಿಬಿಎಂಪಿ ವ್ಯಾಪ್ತಿಯ ಶಾಲೆ, ರಸ್ತೆ, ಕೆರೆ, ಆಸ್ಪತ್ರೆ, ಉದ್ಯಾನವನ, ಆಟದ ಮೈದಾನ, ಸಮುದಾಯ ಭವನ ಮುಂತಾವುಗಳನ್ನು ಅಭಿವೃದ್ಧಿ ಪಡಿಸಬಹುದು. [ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ]

English summary
Karnataka Chief Minister Siddaramaiah urged the public to segregate waste before disposing in order to maintain cleanliness in the Bangalore city. He was speaking at ‘Namma Bengaluru, Nanna Koduge’ a public-private partnership initiative of Bruhat Bangalore Mahanagara Palike (BBMP) on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X