ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕದಿಯಲು ಬಂದವರ ಮೇಲೆ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ

|
Google Oneindia Kannada News

ಬೆಂಗಳೂರು, ಸೆ. 19 : ನಿರ್ಮಾಣ ಹಂತದ ಬಡಾವಣೆಗೆ ನುಗ್ಗಿ ಕಟ್ಟಡ ಸಾಮಾಗ್ರಿಗಳನ್ನು ಕಳ್ಳತನ ಮಾಡುತ್ತಿದ್ದ ದುಷ್ಕರ್ಮಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಭದ್ರತಾ ಸಿಬ್ಬಂದಿ, ಕಳ್ಳರನ್ನು ಹಿಡಿದು ಪೊಲೀಸರಿಗೆ ಹಿಡಿದು ಒಪ್ಪಿಸಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ನಡೆದ ಮೂರನೇ ಪ್ರಕರಣವಿದಾಗಿದೆ.

ಹೆಬ್ಬಗೋಡಿ ಬಳಿಯ ಚೊಕ್ಕಸಂದ್ರದ ನಿರ್ಮಾಣ ಹಂತದ ಬಡಾವಣೆಯ ಕಟ್ಟಡ ಸಾಮಾಗ್ರಿ­ಗ­ಳನ್ನು ಬಂದಿದ್ದ ಇಬ್ಬರು ಆರೋಪಿ­ಗಳನ್ನು ಗುರುವಾರ ಮುಂಜಾನೆ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಉತ್ತಪ್ಪ ದೊರೈ ಮತ್ತು ಸಂತೋಷ್ ಎಂಬ ಭದ್ರತಾ ಸಿಬ್ಬಂದಿ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 15 ದಿನಗಳಲ್ಲಿ ಮೂರು ಬಾರಿ ಇವರು ಕಳ್ಳರನ್ನು ಹಿಡಿದು ಕೊಟ್ಟಿದ್ದಾರೆ.

security guard

ಗುರುವಾರ ಮುಂಜಾನೆ 3.30ರ ಸುಮಾರಿಗೆ ಎಂಟು ಮಂದಿ ದುಷ್ಕರ್ಮಿಗಳು ಕಾರ್ಮಿಕರನ್ನು ಬೆದರಿಸಿ ಹಣ ಹಣ, ಮೊಬೈಲ್‌ಗಳನ್ನು ಕಿತ್ತು­ ಕೊಂಡಿ­ದ್ದಾರೆ. ನಂತರ ಕಬ್ಬಿಣ ಹಾಗೂ ಸಿಮೆಂಟ್ ಶೀಟ್‌ಗಳನ್ನು ಲಾರಿಗಳಲ್ಲಿ ತುಂಬಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಸಂತೋಷ್‌ ಮತ್ತು ಉತ್ತಪ್ಪ ಕಳ್ಳರನ್ನು ಬೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು.

ಕಳ್ಳರು ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಉತ್ತಪ್ಪ ನೇರವಾಗಿ ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ಇದರಿಂದ ಆತಂಕಗೊಂಡ ಕಳ್ಳರು, ಸ್ಥಳದಲ್ಲೇ ವಾಹನ ಬಿಟ್ಟು ಓಡಲಾರಂಭಿಸಿದರು. ಈ ಹಂತದಲ್ಲಿ ಅವರನ್ನು ಬೆನ್ನಟ್ಟಿದ ಉತ್ತಪ್ಪ ಮತ್ತು ಸಂತೋಷ್ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ನಂತರ ಅವರನ್ನು ಹೆಬ್ಬಗೋಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತರನ್ನು ಚಿನ್ನಸ್ವಾಮಿ (20) ಮತ್ತು ನರಸಿಂಹ (21) ಎಂದು ಗುರುತಿಸಲಾಗಿದೆ.

ಮೂರನೇ ಪ್ರಕರಣ : ಈ ಬಡಾವಣೆಯಲ್ಲಿ ಕಳ್ಳರನ್ನು ಹಿಡಿದಿರುವ ಮೂರನೇ ಪ್ರಕರಣವಿದಾಗಿದೆ. ಸೆ.2ರಂದು ದುಷ್ಕರ್ಮಿಗಳ ತಂಡ ಕಬ್ಬಿಣದ ಸರಕುಗಳನ್ನು ಕಳವು ಮಾಡಲು ಬಂದಿದ್ದರು. ಆಗ ಉತ್ತಪ್ಪ ಅವರು ಗುಂಡು ಹಾರಿಸಿ ಕಿಶೋರ್ ಎಂಬಾತನನ್ನು ಪೊಲೀಸರಿಗೆ ಹಿಡಿದು­ಕೊಟ್ಟಿದ್ದರು. ಸೆ.14ರ ಸರಕು ಸಾಗಣೆ ವಾಹನ­ದೊಂದಿಗೆ ಕಳ್ಳರು ಬಡಾವಣೆಗೆ ನುಗ್ಗಿ­ದ್ದರು. ಆಗ ಉತ್ತಪ್ಪ ಹಾರಿಸಿದ ಗುಂಡು ವಾಹನದ ಚಕ್ರಕ್ಕೆ ತಗುಲಿ ಪಂಕ್ಚರ್‌ ಆಗಿತ್ತು. ಆಗ ಶಿವರೆಡ್ಡಿ ಮತ್ತು ಮಂಜುನಾಥ ಎಂಬುವರನ್ನು ಹಿಡಿಯಲಾಗಿತ್ತು.

English summary
Private security guard at Narayana Guru Samithi Layout in Hebbagodi, Bangalore fired from his licensed gun to chase away thieves, who had come to steal construction material from a gated community early morning on Thursday. The Hebbagodi police have picked up two suspects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X