ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಸ್ಕೃತ ವಿವಿ. ಫಲಿತಾಂಶ: ಸಂಗೀತಾ ಪ್ರಥಮ ಶ್ರೇಯಾಂಕ

By Ashwath
|
Google Oneindia Kannada News

ಬೆಂಗಳೂರು, ಜೂ.19: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿ ಫಲಿತಾಂಶ ಪ್ರಕಟಗೊಂಡಿದ್ದು ಬೆಂಗಳೂರಿನ ಸಂಗೀತಾ ರಮೇಶ್‌ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

ಸಂಸ್ಕೃತ- ತರ್ಕಶಾಸ್ತ್ರ(ವಿದ್ವತ್‌ ಉತ್ತಮ) ಪರೀಕ್ಷೆಯಲ್ಲಿ ಪ್ರಥಮ ಶ್ರೇಯಾಂಕ ಪಡೆದಿರುವ ಇವರು ಐದು ವಿಷಯಗಳಲ್ಲಿ 94, 90, 85, 85 ಮತ್ತು 66 ಅಂಕಗಳನ್ನು ಪಡೆಯುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.

ಬೆಂಗಳೂರಿನ ಚಾಮರಾಜ ಸಂಸ್ಕೃತ ಕಾಲೇಜಿನಲ್ಲಿ ಐದು ವರ್ಷ‌ಗಳ ಕಾಲ ವಿದ್ವತ್‌ ಅಧ್ಯಯನ ಮಾಡಿರುವ ಇವರು ಈಗ ವಿದುಷಿ ಪದವಿ ಪಡೆದಿದ್ದಾರೆ. ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪೇಜಾವರ ಶ್ರೀ ವಿದ್ಯಾ ತೀರ್ಥ ಸ್ವಾಮೀಜಿ ಹೆಸರಿನಲ್ಲಿ ಕೊಡಮಾಡುವ ಚಿನ್ನದ ಪದಕ ಇವರಿಗೆ ಲಭಿಸಿದೆ.

Sangeeta Ramesh
ಸಂಗೀತಾ ರಮೇಶ್‌ ಅವರ ತಂದೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತೆ ಸಂಗೀತಾ ಅವರು ಸಾಧನೆ ಮಾಡಿರುವುದು ವಿಶೇಷ. ಚಿತ್ರಕಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕವನ್ನು ಪಡೆದಿರುವ ಇವರು ಇಂಗ್ಲಿಷ್‌, ಕನ್ನಡ ಮತ್ತು ಸಂಸ್ಕೃತದಲ್ಲಿ ಕವನ ಬರೆದಿದ್ದಾರೆ.

ದಾಖಲೆ ಮಾಡುವುದನ್ನೇ ಹವ್ಯಾಸ ವಾಗಿರಿಸಿಕೊಂಡಿರುವ ಸಂಗೀತಾ ಅವರ ತಂದೆ ರಮೇಶ್‌ ಬಾಬು ಭಾರತದಲ್ಲೇ ಅತಿ ಹೆಚ್ಚು ದಾಖಲೆ ಮಾಡಿದ ವ್ಯಕ್ತಿ ಎಂಬ ಪಟ್ಟಕ್ಕೆ ಭಾಜನರಾಗಿದ್ದಾರೆ. ದಾಖಲೆಗಳ ಸಂಖ್ಯೆಯಿಂದಾಗಿಯೇ ಈಗ ''ರೆಕಾರ್ಡ್ ರಮೇಶ್'' ಎಂದು ಪ್ರಸಿದ್ಧಿ ಪಡೆದಿದ್ದಾರೆ. ಬೆಂಗಳೂರಿನ ಟಾಟಾ ನಗರದ ನಿವಾಸಿಯಾಗಿರುವ 57 ವರ್ಷದ ರಮೇಶ್ ಬಾಬು ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ರಾಷ್ಟ್ರ ಮತ್ತು ವಿಶ್ವ ಮಟ್ಟದಲ್ಲಿ ದಾಖಲೆ ನಿರ್ಮಿಸುತ್ತಿದ್ದಾರೆ.[ವಿಶ್ವ ದಾಖಲೆ ವೀರ ರಮೇಶ್‌‌ ಬಾಬು ಸಂದರ್ಶನ]

English summary
Sangeeta Ramesh secured First Rank in the M.A Sanskrit - Tarka Shastra (Vidwat -Uthama) examination of the Karnataka Samskrit University for the year 2013-14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X