ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಪಿಗೆ ರಸ್ತೆ-ಪೀಣ್ಯ ಮೆಟ್ರೋಗೆ 1.33 ಕೋಟಿ ಆದಾಯ

|
Google Oneindia Kannada News

ಬೆಂಗಳೂರು, ಮಾ. 31 : ಸಂಪಿಗೆ ರಸ್ತೆ-ಪೀಣ್ಯ ನಡುವಿನ ನಮ್ಮ ಮೆಟ್ರೋ ಸಂಚಾರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರೈಲು ಸೇವೆ ಆರಂಭವಾದ ಒಂದು ತಿಂಗಳಿನಲ್ಲಿ 6.8 ಲಕ್ಷ ಜನರು ಪ್ರಯಾಣಿಸಿದ್ದು, 1.33 ಕೋಟಿ ಆದಾಯ ಬಂದಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.

ಸಂಪಿಗೆ ರಸ್ತೆ-ಪೀಣ್ಯ (ರೀಚ್ 3 ಮತ್ತು 3ಎ) ನಡುವಿನ 10.5 ಕಿ.ಮೀ ಉದ್ದದ ಮಾರ್ಗದಲ್ಲಿನ ರೈಲು ಸಂಚಾರಕ್ಕೆ ಫೆ.28 ರಂದು ಹಸಿರು ನಿಶಾನೆ ತೋರಿಸಲಾಗಿತ್ತು ಮತ್ತು ಮಾರ್ಚ್ 1ರಿಂದ ಸಾರ್ವಜನಿಕ ಸಂಚಾರ ಆರಂಭವಾಗಿತ್ತು. ಸದ್ಯ ಮಾರ್ಗದಲ್ಲಿ ಒಂದು ತಿಂಗಳ ಸಂಚಾರ ಪೂರ್ಣಗೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. [ಮೆಟ್ರೋ ಪ್ರಯಾಣಿಕರಿಗೆ ಫ್ಲಾಶ್ ಕಾರ್ಡ್]

Namma Metro

ಬಿಎಂಆರ್ ಸಿಎಲ್ ಅಧಿಕಾರಿಗಳು ಹೇಳುವಂತೆ, ಮಾರ್ಗದಲ್ಲಿ ಒಂದು ತಿಂಗಳ ಅವಧಿಯಲ್ಲಿ 6.8 ಲಕ್ಷ ಜನರು ಪ್ರಯಾಣಿಸಿದ್ದಾರೆ. ಇದರಿಂದ 1.33 ಕೋಟಿ ಆದಾಯ ಬಂದಿದೆ. ಮೊದಲು ಮಾರ್ಗದಲ್ಲಿ ನಿತ್ಯ 75 ಸಾವಿರ ಪ್ರಯಾಣಿಕರು ಪ್ರಯಾಣಿಸಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಪೀಣ್ಯ ಕೈಗಾರಿಕಾ ಪ್ರದೇಶದಿಂದ ನಾಗಸಂದ್ರದ­ವರೆಗೆ ಮಾರ್ಗವನ್ನು ವಿಸ್ತರಿಸುವ ರೀಚ್‌ 3ಬಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಲಿದ್ದು, ಮುಂದಿನ ನಾಲ್ಕು ತಿಂಗಳಿನಲ್ಲಿ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ ಎಂದು ನಿಗಮದ ಅಧಿಕಾರಿಗಳು ಹೇಳಿದ್ದಾರೆ.

ಬಿಎಂಆರ್ ಸಿಎಲ್ ಅಧಿಕಾರಿಗಳು ಸದ್ಯ ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿಗಳ ಕಡೆ ಗಮನಹರಿಸಿದ್ದಾರೆ. ಎರಡನೇ ಹಂತದ ಗೊಟ್ಟಿಗೆರೆ-ನಾಗವಾರ ನಡುವಿನ ಮಾರ್ಗದ ತಾಂತ್ರಿಕ ಸಮೀಕ್ಷೆ ಪೂರ್ಣಗೊಂಡಿದೆ. ಈ ಪ್ರದೇಶದಲ್ಲಿ ಸುರಂಗ ಮಾರ್ಗ ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಕುರಿತು ಜಲಮಂಡಳಿ ಮತ್ತು ಬೆಸ್ಕಾಂಗೆ ನೀರು ಪೂರೈಕೆ ಮಾರ್ಗ, ವಿದ್ಯುತ್‌ ಮಾರ್ಗ ಸ್ಥಳಾಂತರಿಸುವಂತೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
A month after it was launched, Namma Metro’s new line has received a good response. The stretch between Sampige Road and Peenya has netted Rs 1.33 core revenue by ferrying a total of 6.8 lakh passengers. The line was inaugurated on February 28 and was thrown open to the public on March 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X