ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರುಪೀ ಫಾರ್ ಹ್ಯುಮ್ಯಾನಿಟಿಯಿಂದ ಸಾಕ್ಷರತೆಯಾಗಿ ಓಟ

By Prasad
|
Google Oneindia Kannada News

ಬೆಂಗಳೂರು, ಏ. 19 : ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು, ಬಡಮಕ್ಕಳ ಬಾಳಿನಲ್ಲಿ ಬೆಳಕಾಗಬೇಕು, ಬಡವರ ಜೀವನಮಟ್ಟ ಸುಧಾರಿಸಬೇಕು, ಉತ್ತಮ ಆರೋಗ್ಯ ಸೌಲಭ್ಯ ಸಿಗಬೇಕು, ನಾಳೆಯ ಭವಿತವ್ಯಕ್ಕಾಗಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು, ಪುಟ್ಟ ಮಕ್ಕಳ ಮುಖದಲ್ಲಿ ನಗು ಅರಳಬೇಕು ಎಂದು ನಿಮಗೆ ಅನಿಸಿದ್ದರೆ ಈ ಸಾಮಾಜಿಕ ಕಾರ್ಯದಲ್ಲಿ ಕೈಜೋಡಿಸಿ.

ರುಪೀ ಫಾರ್ ಹ್ಯುಮ್ಯಾನಿಟಿ ಎಂಬ ಬೆಂಗಳೂರಿನ ಎನ್‌ಜಿಓ ಸಂಸ್ಥೆ 'ಸಾಕ್ಷರತೆಗಾಗಿ 10K ಓಟ' ಕಾರ್ಯಕ್ರಮವನ್ನು ಆಯೋಜಿಸಿದೆ. ಇದು ಕಬ್ಬನ್ ಪಾರ್ಕ್ ನಲ್ಲಿ ಏಪ್ರಿಲ್ 27, ಭಾನುವಾರದಂದು ಬೆಳಿಗ್ಗೆ 6.30ಕ್ಕೆ ಆರಂಭವಾಗಲಿದೆ. ಉತ್ಸಾಹಿಗಳು, ದಾನಿಗಳು, ಬಡವರಿಗೆ ನೆರವಾಗಬೇಕೆಂದು ಬಯಸುವವರು ಈ ಓಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Rupee for humanity, run for literacy in Bangalore

ಇದರಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಮೂರು ವಿಭಾಗಗಳನ್ನು ಮಾಡಲಾಗಿದೆ. 3 ಕಿ.ಮೀ. ಫನ್ ರನ್, 5 ಕಿ.ಮೀ. ಸೂಪರ್ ರನ್ ಮತ್ತು 10 ಕಿ.ಮೀಟರ್ ಚಾಲೇಂಜ್ ರನ್ ಓಟದ ವಿಭಾಗಗಳಿವೆ. ಮೊದಲಿನೆರಡು ಓಟದಲ್ಲಿ ಮೆಡಲ್ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ. 10ಕೆ ಓಟದಲ್ಲಿ ಟೀಶರ್ಟ್ ಕೂಡ ನೀಡಲಾಗುತ್ತದೆ.

5ಕೆ ಓಟವನ್ನು ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಶಾಲಾಕಾಲೇಜುಗಳಲ್ಲಿ ನೀಡಲಾದ ಗುರುತಿನ ಚೀಟಿಯನ್ನು ತರುವುದು ಕಡ್ಡಾಯ. 3ಕೆ ಮತ್ತು 5ಕೆ ಓಟದಲ್ಲಿ ಭಾಗವಹಿಸುವವರು ಸ್ಥಳದಲ್ಲಿಯೇ 175 ರು. ಕಟ್ಟಿ ಟೀಶರ್ಟ್ ಕೊಳ್ಳಬಹುದು. ಎಲ್ಲ ವಿಭಾಗಗಳಿಗೆ ಏ. 10ರಂದು ನೋಂದಾವಣಿ ಮುಗಿದಿದೆ.

ಆದರೆ, ದೇಣಿಗೆ ನೀಡಲು ಇಚ್ಛೆಯುಳ್ಳವರು ಕೆಳಗಿನ ಖಾತೆಗೆ ದಾನ ನೀಡಬಹುದು.

ದೇಣಿಗೆ ವಿವರಗಳು :

ಖಾತೆ ಹೆಸರು : RUPEE FOR HUMANITY
ಖಾತೆ ಸಂಖ್ಯೆ : 33556366672
ಬ್ಯಾಂಕ್ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಶಾಖೆ : ಹೊಸಕೆರೆಹಳ್ಳಿ
IFSC Code : SBIN0010411 or SBIN0016872
ಸಂಪರ್ಕ : ನವೀನ್ (+91-9743068230)

ಏನಿದು ರುಪೀ ಫಾರ್ ಹ್ಯುಮ್ಯಾನಿಟಿ? : ಭಾರತ ಎಷ್ಟು ವರ್ಷ ಅಭಿವೃದ್ಧಿಯಾಗುತ್ತಿರುವ ದೇಶವಾಗಿರಬೇಕು? ಭಾರತದ ಬಡತನ ನಿವಾರಣೆಯಾಗುವುದು ಯಾವಾಗ? ಮುಂತಾದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ದೇಶದ ಅಭಿವೃದ್ಧಿಗಾಗಿ ವಿಭಿನ್ನವಾಗಿ ಚಿಂತನೆಯಲ್ಲಿ ತೊಡಗಿರುವ ಇಂಜಿನಿಯರ್ ಗಳ ಗುಂಪು ಈ ಸಂಸ್ಥೆ ಕಟ್ಟಿದೆ. ನಿರ್ಗತಿಕ ಮಕ್ಕಳ ಎಲ್ಲ ಖರ್ಚುವೆಚ್ಚಗಳನ್ನು ನೋಡಿಕೊಳ್ಳಲು ಅಸಾಧ್ಯವಾಗಿದ್ದರಿಂದ ದಾನಿಗಳತ್ತ ಸಹಾಯದ ಹಸ್ತ ಚಾಚಿದೆ.

English summary
Rupee for Humanity (RFH) has initiated a program - Shikshakaar - Shiksha Ke Liye Adhikaar, a step to eradicate illiteracy in India. As a part of this initiative, it is hosting 'RFH 10K Run - Run for Literacy!'. The run will be held in Cubbon Park in Bangalore on 27th April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X