ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ

|
Google Oneindia Kannada News

ಬೆಂಗಳೂರು, ಆ, 18 : ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ನಾಲ್ವರನ್ನು ಬಂಧಿಸಿರುವ ಕೆಂಗೇರಿ ಠಾಣೆ ಪೊಲೀಸರು 5 ಲಕ್ಷ ರೂ. ಮೌಲ್ಯದ 120 ಗ್ರಾಂ ಚಿನ್ನಾಭರಣ ಸೇರಿದಂತೆ ಎರಡೂವರೆ ಕೆಜಿ ಬೆಳ್ಳಿ ಮತ್ತು 1 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಬನ್ನೇರುಘಟ್ಟ ಕೋಳಿಫಾರಂ ನಿವಾಸಿ ರಾಮ(35), ತಲಘಟ್ಟಪುರ ಬೈಯಪ್ಪನ ಪಾಳ್ಯದ ಗಣೇಶ್‌(24), ನಾಗರಾಜ(23) ಮತ್ತು ಜೆಪಿನಗರದ ಇಲಿಯಾಜ್‌(24) ಬಂಧಿತರು. ಆರೋಪಿಗಳನ್ನು ಬಂಧಿದನದಿಂದ ಮಹಾನಗರದ ವಿವಿಧೆಡೆ ದಾಖಲಾಗಿದ್ದ 7 ಕಳ್ಳತನ ಪ್ರಕರಣಗಳನ್ನು ಬೇಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

police

ಕಾರ್ಯಾಚರಣೆಯಲ್ಲಿ ಕೆಂಗೇರಿ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಎಚ್‌.ಜಿ.ಶಿವಶಂಕರ್‌, ಪಿಎಸ್‌ಐ ಎಂ.ಮಲ್ಲಿಕಾರ್ಜುನ, ಸೀರಯ್ಯ, ನರಸಿಂಹಮೂರ್ತಿ, ತುಳಸಿದಾಸ್‌, ಸೋಮಣ್ಣ, ಪ್ರದೀಪ್‌ ಕುಮಾರ್‌, ಕುಮಾರಸ್ವಾಮಿ, ರವಿಕುಮಾರ್‌ ಭಾಗವಹಿಸಿದ್ದರು.

ಅಮಲುದಾರ ಚಾಲಕರ ಮೇಲೆ ಕೇಸ್‌: ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಿದ 753 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಮಹಾನಗರ ಪೊಲೀಸರು ಆರೋಪಿತರ ಲೈಸನ್ಸ್‌ ಅಮಾನತು ಮಾಡಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಿದ್ದಾರೆ.

ಶನಿವಾರ ರಾತ್ರಿ 9ರಿಂದ ಬೆಳಗಿನ ಜಾವದವರೆಗೆ ನಗರದ 73 ಸ್ಥಳಗಳಲ್ಲಿ ಕಾಯರ್ಯಾಚರಣೆ ನಡೆಸಿ ಹತ್ತು ಸಾವಿರಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆ 752 ಪುರುಷ ಮತ್ತು ಒಬ್ಬ ಮಹಿಳೆ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಿದ್ದು ಗೊತ್ತಾಗಿದೆ.

English summary
Bangalore police arrested 4 people in the name of robbery. Total 7 cases go through an end, Police officers informed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X