ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲ್ವೆಯಲ್ಲಿ ನೌಕರಿ: ಇಂಟರ್ನೆಟ್ ನಲ್ಲಿ ಚೆಕ್ ಮಾಡಿ ನೋಡಿ

By Srinath
|
Google Oneindia Kannada News

ಬೆಂಗಳೂರು, ಜ.29: ಕೇಂದ್ರ ರೈಲ್ವೆ ಇಲಾಖೆಯು ಕಾಲ ಕಾಲಕ್ಕೆ ನಾನಾ ಹುದ್ದೆಗಳಿಗಾಗಿ ನೇಮಕಗಳನ್ನು ಮಾಡಿಕೊಳ್ಳುತ್ತಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಆಗಾಗ್ಗೆ ಪತ್ರಿಕಾ ಜಾಹೀರಾತುಗಳನ್ನು ನೀಡುತ್ತಿರುತ್ತದೆ. ಆದರೆ ಪತ್ರಿಕೆಗಳ ಮೇಲೆ ಕಣ್ಣಾಡಿಸುವಾಗ ರೈಲ್ವೆ ನೇಮಕಾತಿ ಜಾಹೀರಾತು ಕಣ್ತಪ್ಪಿ, ಕೆಲಸ ಕೈತಪ್ಪುವ ಸಾಧ್ಯತೆಯಿರುತ್ತದೆ.

ಇದಕ್ಕೆ ಪರಿಹಾರೋಪಾಯವೆಂದರೆ ಇಂಟರ್ನೆಟ್ ಮೂಲಕ ಅರ್ಜಿ ಸಲ್ಲಿಸುವುದು. ರೈಲ್ವೆ ಇಲಾಖೆಯ ವೆಬ್ ಸೈಟ್ ಮೇಲೆ ಕಣ್ಗಾವಲಿಟ್ಟು, ಕಾಲ ಕಾಲಕ್ಕೆ ಅಲ್ಲಿ ಮೂಡಿಬರುವ ಜಾಹೀರಾತುಗಳನ್ನು ಗಮನಿಸಿದರೆ ರೈಲ್ವೆಯಲ್ಲಿ ಕೆಲಸ ಪಡೆಯುವ ಸುವರ್ಣಾವಕಾಶ ನಿಮ್ಮದಾಗಬಹುದು.

Railway recruitment RRB Bangalore jobs through internet

ಈ ನಿಟ್ಟನಿಲ್ಲಿ ಕರ್ನಾಟಕದವರಿಗೆ ನೆರವಾಗಲೆಂದು ಬೆಂಗಳೂರು ವಿಭಾಗಕ್ಕೆ ಸಂಬಂಧಪಟ್ಟಂತೆ ಇಲಾಖೆಯು ವೆಬ್ ಸೈಟ್ ತೆರೆದಿದ್ದು, ಅದರಲ್ಲಿ ಉದ್ಯೋಗಾವಕಾಶಗಳ ಸವಿವರ, ಅರ್ಜಿ ಸಹ ಲಭ್ಯವಿರುತ್ತದೆ. ಮತ್ತು ವೆಬ್ ಸೈಟ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ.
Job Vacancies in Indian Railways ಇಲ್ಲಿಂದಲೂ ಹೆಚ್ಚಿನ ಮಾಹಿತಿ ಪಡೆಯಬಹುದು.

ಇದು ಅತ್ಯಂತ ತ್ವರಿತ ಮತ್ತು ನಿಖರ ವಿಧಾನವಾಗಿದೆ. SBI ಮೂಲಕ ಅರ್ಜಿ ಶುಲ್ಕ ಭರ್ತಿ ಮಾಡುವಂತಿದ್ದರೆ ಅದಕ್ಕೆ ಹೆಚ್ಚುವರಿ ಶುಲ್ಕ ಕಟ್ಟಬೇಕಾಗುವುದಿಲ್ಲ. SMS, email ಮೂಲಕ ಅಲರ್ಟ್ ಮಾಹಿತಿ ರವಾನೆಯಾಗುತ್ತದೆ. Online ಮೂಲಕವೇ Hall Ticket ಗಳನ್ನು ಪಡೆಯಬಹುದಾಗಿದೆ. ತಡವೇಕೆ? ಯಾವುದಾದರೂ ಉದ್ಯೋಗಾವಕಾಶ ಇದೆಯಾ? ಎಂಬುದನ್ನು ಚೆಕ್ ಮಾಡಲು ಒಮ್ಮೆ ಇಲ್ಲಿ ಕ್ಲಿಕ್ಕಿಸಿ: http://www.rrbbnc.gov.in/

English summary
Railway recruitment RRB Bangalore jobs through internet. 'This website(http://www.rrbbnc.gov.in/) is dedicated to our esteemed customers and candidates who are desirous to seek employment in INDIAN RAILWAYS through this Board. It is our effort to make up-to-date information available which a candidate wishes to know' say the RRB-Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X