ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ: ಆಸ್ತಿ ತೆರಿಗೆ ಪಾವತಿ ಅವಧಿ ವಿಸ್ತರಣೆ

By Mahesh
|
Google Oneindia Kannada News

ಬೆಂಗಳೂರು, ಏ.25: ಬಿಬಿಎಂಪಿ ವ್ಯಾಪ್ತಿಯಲ್ಲಿ 2014-15ನೇ ಸಾಲಿನ ಆಸ್ತಿ ತೆರಿಗೆ ಪಾವತಿದಾರರು ಗಮನಿಸಬೇಕಾದ ಸುದ್ದಿ ಇಲ್ಲಿದೆ. ವಿನಾಯತಿಯಲ್ಲಿ ಆಸ್ತಿ ತೆರಿಗೆ ಪಾವತಿಸಲು ವಿಧಿಸಿದ್ದ ಅವಧಿ ಇನ್ನೊಂದು ತಿಂಗಳಿಗೆ ವಿಸ್ತರಣೆ ಮಾಡಲಾಗಿದೆ. ಜತೆಗೆ ಚೆಕ್ ಮೂಲಕವೂ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮೇಯರ್ ಕಟ್ಟೆ ಸತ್ಯನಾರಾಯಣ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಕರ್ತವ್ಯದಲ್ಲಿ ಬಿಬಿಎಂಪಿ ಸಿಬ್ಬಂದಿಗಳು ನಿರತರಾಗಿದ್ದ ಕಾರಣ ಆಸ್ತಿ ತೆರಿಗೆ ಸಂಗ್ರಹಣೆ ವಿಳಂಬವಾಗಿದೆ. ಹೀಗಾಗಿ ಶೇ 5 ರಷ್ಟು ವಿನಾಯಿತಿಯಲ್ಲಿ ಆಸ್ತಿ ತೆರಿಗೆ ಪಾವತಿಸಲು ವಿಧಿಸಿದ್ದ ಏ.30ರ ಗಡುವನ್ನು 1 ತಿಂಗಳವರೆಗೆ ವಿಸ್ತರಿಸಲಾಗಿದ್ದು, ಮೇ.31ರವರೆಗೂ ತೆರಿಗೆ ಪಾವತಿಸಬಹುದು ಎಂದು ಸತ್ಯನಾರಾಯಣ ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 2014-15ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹಣೆ ಏ.1 ರಿಂದ ಆರಂಭಗೊಂಡು ಏ.30ಕ್ಕೆ ಮುಕ್ತಾಯವಾಗಲಿದೆ. ಆಸ್ತಿ ತೆರಿಗೆ ಸಂಗ್ರಹ ಗುರಿ ತಲುಪಲು ಚೆಕ್ ಸಲ್ಲಿಕೆಯನ್ನು ರದ್ದುಪಡಿಸಲಾಗಿತ್ತು. ಈ ಸಾಲಿನ ಆಸ್ತಿ ತೆರಿಗೆಯನ್ನು ನಗದು ಇಲ್ಲವೇ ಡಿ.ಡಿ ರೂಪದಲ್ಲಿ ಅಥವಾ ಆನ್ ಲೈನ್ ಮೂಲಕವಷ್ಟೇ ಪಾವತಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು. [ಆನ್ ಲೈನ್ ನಲ್ಲಿ ಆಸ್ತಿ ತೆರಿಗೆ ಪಾವತಿ ಸುಲಭ]

Mayor Katte Satyanarayana

ಆದರೆ, ಡಿಡಿ ಪಡೆಯಲು ಕಮಿಷನ್ ನೀಡಬೇಕಾಗುತ್ತದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಚೆಕ್ ಮೂಲಕವೂ ತೆರಿಗೆ ಪಾವತಿಸಲು ಅವಕಾಶ ನೀಡಲಾಗಿದೆ. ಚೆಕ್ ನಗದೀಕರಣಗೊಂಡ ನಂತರ ಅಧಿಕೃತ ರಸೀದಿ ಪಡೆದುಕೊಳ್ಳಬಹುದು ಎಂದು ಸತ್ಯ ನಾರಾಯಣ ಹೇಳಿದರು.

ಪಾಲಿಕೆ ಕಚೇರಿಗಳಲ್ಲಿ 1000 ರೂ.ವರೆಗೆ ಮಾತ್ರ ನಗದು ಪಾವತಿಸಬಹುದಾಗಿದ್ದು, ಅದಕ್ಕಿಂತ ಹೆಚ್ಚು ಮೊತ್ತವಿದ್ದರೆ ಡಿ.ಡಿ ಮೂಲಕ ಸಲ್ಲಿಸಬೇಕು. ಆಯ್ದ ಬ್ಯಾಂಕ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಗದು ಪಾವತಿಗೆ ಮಿತಿ ನಿರ್ಬಂಧವಿಲ್ಲ. ಒಂಬತ್ತು ಬ್ಯಾಂಕ್ ‌ಗಳು, 91 ಬೆಂಗಳೂರು ಒನ್ ಕೇಂದ್ರಗಳು ಹಾಗೂ ಸಹಾಯಕ ಕಂದಾಯಾಧಿಕಾರಿ ಕಚೇರಿಗಳಲ್ಲಿ ತೆರಿಗೆ ಪಾವತಿಸಬಹುದಾಗಿದೆ.

ಎಷ್ಟು ಪಾವತಿ ಮಾಡಬೇಕು, ರಿಯಾಯತಿ ಇದ್ಯಾ? ಆಸ್ತಿ ತೆರಿಗೆ ಪರಿಷ್ಕರಣೆಯಾಗದ ಕಾರಣ ಹೆಚ್ಚಿನ ಬದಲಾವಣೆಯಿಲ್ಲದಿದ್ದರೆ ಹಿಂದಿನ ವರ್ಷ ಪಾವತಿಸಿದ ಮೊತ್ತದಷ್ಟು ತೆರಿಗೆ ಪಾವತಿಸಬೇಕಾಗಬಹುದು. ಪೂರ್ಣ ತೆರಿಗೆ ಪಾವತಿಗೆ ಒಟ್ಟು ತೆರಿಗೆ ಮೊತ್ತದ ಶೇ.5ರಷ್ಟು ರಿಯಾಯ್ತಿ ಸಿಗಲಿದೆ. ಆನ್ ಲೈನ್ ನಲ್ಲಿ ಆಸ್ತಿ ತೆರಿಗೆ ಹೇಗೆ? ಯಾವ ಬ್ಯಾಂಕ್ ಮೂಲಕ ಪಾವತಿ ಮಾಡಬಹುದು ಇನ್ನಿತರ ವಿವರಗಳನ್ನು [ತಪ್ಪದೇ ಓದಿ]

ಹೆಚ್ಚಿನ ಮಾಹಿತಿಗೆ ಪಾಲಿಕೆಯ ಎಲ್ಲ ಸಹಾಯ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಹಾಗೂ ಸಂಜೆ 7 ಗಂಟೆ ತನಕ ತೆರೆದಿರುತ್ತದೆ. ಸಹಾಯವಾಣಿ : 6568 3804/5, 2336 5007/8

English summary
BBMP extends the rebate period on property tax for another one month. BBMP gives five per cent rebate on property tax filed in April every year, there is an option of paying property tax online under Self Assessment Scheme (SAS). Now payment will also be received through cheques only said BBMP Revenue officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X