ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಬ್ರ್ಯಾಂಡ್ ರಾಹುಲ್ ಗಿಂತ ಮುಂದೆ:ಹರೀಶ್ ಬಿಜ್ಜೂರ್

By Srinath
|
Google Oneindia Kannada News

ಹರೀಶ್ ಬಿಜ್ಜೂರ್ - ದೇಶ, ವಿದೇಶಗಳಲ್ಲಿ ಬ್ರ್ಯಾಂಡ್ ಬಿಲ್ಡಿಂಗ್ ಕ್ಷೇತ್ರದಲ್ಲಿ ಅಗ್ರಗಣ್ಯ ಹೆಸರು. ಕಳೆದ 2 ದಶಕಗಳಿಂದ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಬ್ರ್ಯಾಂಡ್ ಬಿಲ್ಡಿಂಗ್ ಎಂಬುದು ಸರಕು/ ಸೇವೆಗೆ ಮಾತ್ರವೇ ಸೀಮಿತವಾ? ಏಕೆಂದರೆ ಇತ್ತೀಚೆಗಂತೂ showmanship ಎಂಬುದು ಜಗದ ನಿಯಮವಾಗಿದೆ. ಇದಕ್ಕೆ ರಾಜಕೀಯವೂ ಹೊರತಲ್ಲ!

ಅದರಲ್ಲೂ ಪ್ರಸ್ತುತ ಲೋಕಸಭಾ ಚುನಾವಣೆ ಸಮ್ಮುಖದಲ್ಲಿ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ವೈಯಕ್ತಿವಾಗಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದ್ದಾರೆ. ರಾಜಕೀಯ ಎಂಬುದು ಈಗ ಸೇವೆಯಾಗಿ ಉಳಿದಿಲ್ಲ; productization ಆಗಿಬಿಟ್ಟಿದೆ. Excactly ಇಂತಹ ಸಂದರ್ಭದಲ್ಲಿ ಹರೀಶ್ ಬಿಜ್ಜೂರ್ ಅವರಂತಹ Brand Domain specialist ಗಳ ಅನುಭಾವಗಳು ಹೆಚ್ಚು ತೂಕ ಪಡೆಯುತ್ತವೆ. ಹಾಗಾಗಿಯೇ, ರಾಜಕೀಯೇತರ ವ್ಯಕ್ತಿಯಾಗಿ, ಹರೀಶ್ ಬಿಜ್ಜೂರ್ ಕನ್ಸಲ್ಟೆನ್ಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಬಿಜ್ಜೂರ್ ಏನು ಹೇಳುತ್ತಾರೆ, ನೋಡೋಣ:

ಪ್ರಶ್ನೆ: ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳನ್ನು ಸರಕಿನ ರೂಪದಲ್ಲಿ ನೋಡಿದಾಗ ನಿಮಗೇನನ್ನಿಸುತ್ತದೆ?


ಹರೀಶ್ ಬಿಜ್ಜೂರ್ ಉತ್ತರ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಅಥವಾ ಅವರ ಬದ್ಧತೆ ನಿಲುವುಗಳು ಅಂತಿಮವಾಗಿ ಸರಕೀಕರಣವಾಗಿಬಿಟ್ಟಿದೆ! ಈ ಹಿಂದೆ ಸೇವೆಯಾಗಿ ಪರಿಗಣಿತವಾಗಿದ್ದ ರಾಜಕೀಯ ಈಗ ಸರಕು ಎಂದು ಚಲಾವಣೆಗೆ ಬಂದಿದೆ.

ಭವಿಷ್ಯದ ಪ್ರಧಾನಿ ಎಂದೇ ಚಲಾವಣೆಯಲ್ಲಿರುವ ನರೇಂದ್ರ ಮೋದಿ ಅವರನ್ನೇ ತೆಗೆದುಕೊಳ್ಳಿ. ಆಖೈರಾಗಿ ಅವರೊಂದು ಉತ್ಪನ್ನವಾಗಿಬಿಟ್ಟಿದ್ದಾರೆ. ಈ ಸರಕಿನ ಬಗ್ಗೆಯೇ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಚುನಾವಣಾ ಪ್ರಚಾರದಲ್ಲಿ ಬೇರೆ ಯಾವುದೇ ಸರಕು ಮುಖ್ಯವಾಗಿಲ್ಲ. ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್ ಹೀಗೆ ಬಿಜೆಪಿಯ ಬೇರೆಲ್ಲ ನಾಯಕರು distraction ಗಳಾಗಿದ್ದಾರೆ. ಹಾಗಾಗಿ ಮೋದಿ ಪರಿಪೂರ್ಣ brand ಆಗಿ ಮಾರ್ಪಟ್ಟಿದ್ದಾರೆ.

ಇನ್ನು AAP ಪ್ರಚಾರವನ್ನೇ ತೆಗೆದುಕೊಳ್ಳಿ. ಅಲ್ಲೂ ಇದೇ ಪ್ರಯತ್ನ ನಡೆದಿದೆ. ಅರವಿಂದ್ ಕೇಜ್ರಿವಾಲ್ ಮತ್ತು ಕಸ ಪೊರಕೆಯಷ್ಟೇ ಕಾಣಿಸುತ್ತಿದೆ. ಅದಕ್ಕೆ ಕೊಂಬು ಮೂಡಿದಂತೆ ಆಪ್ ಟೋಪಿ ಕಾಣಿಸಿಕೊಳ್ಳುತ್ತದೆ.

ಆದರೆ ಈ ಕಾಂಗ್ರೆಸ್ ಇದೆಯಲ್ಲಾ. ಅದರ ಸ್ವರೂಪವೇ ಬೇರೆ. ಅದಿನ್ನೂ ಬ್ರ್ಯಾಂಡಿಂಗ್ ಗೆ ಇಳಿದಿಲ್ಲ. ಅದಿನ್ನೂ ಸಂಪ್ರದಾಯಬದ್ಧವಾಗಿದೆ. ಪಕ್ಷವಾಗಿ ಮತ್ತು ಅದರ ನಾಯಕರು ಬೇರೆಯದೇ ಹಾದಿಯಲ್ಲಿದ್ದಾರೆ. ಆದರೆ ಇತರೆ ರಾಜಕೀಯ ಪಕ್ಷಗಳು ಸಾಕಷ್ಟು ಹಣ ವ್ಯಯ ಮಾಡುತ್ತಿವೆ. ನಾಯಕರ ಬ್ರ್ಯಾಂಡ್ ಬಿಲ್ಡಿಂಗ್ ಮೇಲೂ ಹಣ ಸುರಿಯಲಾಗುತ್ತಿದೆ

ಹೇಳಬೇಕು ಅಂದರೆ ದೇಶದಲ್ಲಿ ಡಿಜಿಟಲ್ ಪ್ರಾಧಾನ್ಯತೆಯ ಮೊದಲ ಚುನಾವಣೆ ಇದಾಗಿದೆ. ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳು ದೊಡ್ಡ ಪಾತ್ರ ನಿರ್ವಹಿಸುತ್ತಿವೆ. ದೇಶದಲ್ಲಿ 216 ದಶಲಕ್ಷ ಭಾರತೀಯರು Internetನಲ್ಲಿ ಜಾಲಾಡುತ್ತಿದ್ದಾರೆ. ಬಹುತೇಕ ಎಲ್ಲರೂ ಆಕ್ಟೀವ್ ಆಗಿದ್ದಾರೆ. ಅದಕ್ಕೇ ಹೇಳಿದ್ದು ಇದು ದೇಶದ ಮೊದಲ ಬೌದ್ಧಿಕ ಮತ್ತು ಡಿಜಿಟಲ್ ಎಲೆಕ್ಷನ್ ಎಂದು. ಇನ್ನು ಮುಂದಿನ ಚುನಾವಣೆ ವೇಳೆಗೆ ಡಿಜಿಟಲ್ ಚುನಾವಣೆ ಸ್ಥಿತಿಗತಿ ಹೇಗಿರುತ್ತದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.

ಪ್ರ: ಹೊಸ ಪ್ರಾಡಕ್ಟ್ ಆಮ್ ಆದ್ಮಿ ಪಕ್ಷ ಹೇಗೆ ರೂಪ ಪಡೆಯುತ್ತಿದೆ? ಅದರ ರಾಜಕೀಯ ಬ್ರ್ಯಾಂಡ್ ಮೌಲ್ಯ ಹೇಗಿದೆ?

Modi ultimate product: Harish Bijoor

ಹರೀಶ್ ಬಿಜ್ಜೂರ್ ಉತ್ತರ: ರಾಜಕೀಯ ರಂಗದಲ್ಲಿ ಇತ್ತೀಚೆಗೆ ನಾವು ಕಂಡ ಉತ್ತಮ ಹೊಸ ಉತ್ಪನ್ನ. ಸದ್ಯಕ್ಕೆ ಅದು ಮತ ಗಳಿಕೆ ಪ್ರಮಾಣವನ್ನು ವೃದ್ಧಿಸಿಕೊಳ್ಳುತ್ತಿದೆ. ಅದು ಒಳ್ಳೆಯದೇ. ಏಕೆಂದರೆ ಮುಂದಿನ ಚುನಾವಣೆ ವೇಳೆಗೆ ಆ ಮತಗಳು ಸ್ಥಾನಗಳಾಗಿ ಪರಿವರ್ತನೆಗೊಂಡು ಕಾಲಾಂತರದಲ್ಲಿ ಒಂದಷ್ಟು ಸ್ಥಾನಗಳನ್ನು ಗಳಿಸಬಹುದಾಗಿದೆ.

ಮುಂದಿನ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ Brand Quotient ರಾಹುಲ್ ಗಾಂಧಿಗಿಂತ ತುಂಬಾ ತುಂಬಾ ಅಧಿಕವಾಗಿದೆ. ರಾಹುಲ್ ಗಾಂಧಿಗಿಂತ ನರೇಂದ್ರ ಮೋದಿ ತುಂಬಾ ಮುಂದಿದ್ದಾರೆ. ಇನ್ನು, ನಾಲ್ಕು ಪಕ್ಷಗಳ Brand Value ಹೇಳಬೇಕೆಂದರೆ ಅನುಕ್ರಮವಾಗಿ 1. AAP, 2. BJP 3. Congress ಮತ್ತು 4. JDS.

ಇನ್ನು Brand Domainನಲ್ಲಿ ಹೇಳಬೇಕೆಂದರೆ ನಮಗದು ಒಳ್ಳೆಯ ಕೇಸ್ ಸ್ಟಡಿಯಾಗಿದೆ. ಬ್ರ್ಯಾಂಡ್ ಬಿಲ್ಡಿಂಗ್ ನಲ್ಲಿ ನಿಜಕ್ಕೂ ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದಾರೆ. ಸದಾ ಸುದ್ದಿಯಲ್ಲಿರುವುದನ್ನು ಕರಗತ ಮಾಡಿಕೊಂಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಪ್ರಾಮುಖ್ಯತೆ ಪಡೆದಿದ್ದಾರೆ. ಪಕ್ಷವೂ ಸದೃಢ ದನಿಯಾಗಿ ಬೆಳೆದಿದೆ. ಹಾಗೆ ನೋಡಿದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದು ಎಎಪಿ ಪಕ್ಷವೊಂದೇ ಅಲ್ಲ. ಆದರೆ ಅತ್ಯುತ್ತಮವಾಗಿ ಮಾರುಕಟ್ಟೆ ಮಾಡಿಕೊಳ್ಳುವ ಮೂಲಕ ಚೆನ್ನಾಗಿ ಬ್ರ್ಯಾಂಡಿಂಗ್ ಮಾಡಿಕೊಂಡು ಮತದಾರನ ಮನದಲ್ಲಿ ನಿಂತಿದ್ದಾರೆ.

ಆದರೆ AAP ಮಾಡಿರುವ ಒಂದೇ ತಪ್ಪು ಅಂದರೆ ದಿಲ್ಲಿಯಲ್ಲಿ 49ನೇ ದಿನಕ್ಕೇ ಅಧಿಕಾರದಿಂದ ಕೆಳಗಿಳಿದಿದ್ದು. ಲೋಕಸಭಾ ಚುನಾವಣೆ ಮುಗಿಯುವವರೆಗು ಆದರೂ ಅವರು ಅಧಿಕಾರದಲ್ಲಿದ್ದಿದ್ದರೆ ಈ ಚುನಾವಣೆಯಲ್ಲಿ ಅವರ ಪ್ರದರ್ಶನ ಇನ್ನೂ ಚೆನ್ನಾಗಿ ಇರುತ್ತಿತ್ತು. AAP ಪಕ್ಷದಲ್ಲಿ ಅರವಿಂದ್, ಯೋಗೇಂದ್ರ ಯಾದವ್ ಅವರಂಥ ಪ್ರಚಂಡರಿದ್ದಾರೆ.

ಆದರೆ ನಾನು ಕಂಡುಕೊಂಡ ಆತಂಕಕಾರಿ ಅಂಶವೆಂದರೆ ಪ್ರಸಕ್ತ ಚುನಾವಣೆಯಲ್ಲಿ digital spaceನಲ್ಲಿ ಎರಡು ವಿಧದ ಕ್ರಿಯೆ/ ವಿದ್ಯಮಾನಗಳು ನಡೆಯುತ್ತಿವೆ. ಒಂದು ಖರೀದಿಸಿದ ಪ್ರತಿಕ್ರಿಯೆ ಮತ್ತು ತನ್ನಿಂತಾನೇ ಹರಿದುಬರುತ್ತಿರುವ ಸ್ವಯಂ ಪ್ರತಿಕ್ರಿಯೆ. ದುರ್ದೈವವೆಂದರೆ ಪ್ರಸಕ್ತ ಚುನಾವಣೆಯಲ್ಲಿ ಸ್ವಯಂ ಪ್ರತಿಕ್ರಿಯೆಗಿಂತ ಖರೀದಿಸಿದ ಪ್ರತಿಕ್ರಿಯೆಯೇ ಹೆಚ್ಚಾಗಿ ಕಂಡುಬರುತ್ತಿದೆ. ಇದು ಆರೋಗ್ಯಕರ ಲಕ್ಷಣವಲ್ಲ. ಅದಕ್ಕೇ ಹೇಳಿದ್ದು ಈ ಖರೀದಿಸಿದ ಪ್ರತಿಕ್ರಿಯೆಯು ಚುನಾವಣೆ ದಿನ ಮತಗಳಾಗಿ, ಮುಂದೆ ಸೀಟುಗಳಾಗಿ ಮಾರ್ಪಡುವುದಿಲ್ಲ ಎಂದು!

English summary
Lok Sabha Elections 2014 has been an ultimate productization and BJP PM candidate Narendra Modi is an ultimate product opines Harish Bijoor, a brand-expert & CEO, Harish Bijoor Consults Inc., a private-label consulting practice that operates in the realm of brand and business strategy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X