ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಘವೇಶ್ವರ ಸ್ವಾಮೀಜಿಗಳ ವಿರುದ್ಧದ ದೂರಿನಲ್ಲೇನಿದೆ?

|
Google Oneindia Kannada News

ಬೆಂಗಳೂರು, ಆ.27 : ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ವಿರುದ್ಧ ಬನಶಂಕರಿ ಪೊಲೀಸ ಠಾಣೆಯಲ್ಲಿ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿದೆ. ಗಾಯಕಿ ಪ್ರೇಮಲತಾ ದಿವಾಕರ್ ಪರವಾಗಿ ಪುತ್ರಿ ಅಂಶುಮತಿ ಶಾಸ್ತ್ರಿ ಈ ದೂರು ದಾಖಲಿಸಿದ್ದಾರೆ.

ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ನಡೆಸುವ ರಾಮಕಥಾ ಕಾರ್ಯಕ್ರಮಕ್ಕೆ ತೆರಳಬಾರದು ಎಂದು ಕಲಾವಿದರಿಗೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಲತಾ ಮತ್ತು ದಿವಾಕರ್ ದಂಪತಿಯನ್ನು ಹೊನ್ನಾವರ ಪೊಲೀಸರು ಮಂಗಳವಾರ ಬಂಧಿಸಿದ್ದರು. [ರಾಘವೇಶ್ವರ ಸ್ವಾಮೀಜಿಗೆ ಬೆದರಿಕೆ]

Premalatha Divakar

ಆದರೆ, ಬುಧವಾರ ರಾಘವೇಶ್ವರ ಸ್ವಾಮೀಜಿಗಳು ಪ್ರೇಮಲತಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ದೂರು ನೀಡಲು ಪ್ರೇಮಲತಾ ನಿರ್ಧರಿಸಿದ್ದರು ಇದರಿಂದ ಸಿಟ್ಟಿಗೆದ್ದ ಸ್ವಾಮೀಜಿಗಳು ಸೇಡಿನ ಉದ್ದೇಶದಿಂದಾಗಿ ನಮ್ಮ ವಿರುದ್ಧ ದೂರು ನೀಡಿದ್ದಾರೆ ಎಂದು ಪ್ರೇಮಲತಾ ಪುತ್ರಿ ಬೆಂಗಳೂರಿನ ಬನಶಂಕರಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ : ಅಂಶುಮತಿ ಶಾಸ್ತ್ರಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ "ನಾವು ಶ್ರೀ ಮಠದ ಭಕ್ತರಾಗಿದ್ದೇವೆ. ಶ್ರೀ ಮಠದ ಸ್ವಾಮೀಜಿ ಮತ್ತು ಸ್ವಾಮೀಜಿಯ ಸಹಚರರು ನನ್ನ ತಾಯಿಗೆ ಲೈಂಗಿಕ ಕಿರುಕುಳ ನೀಡಿದ್ದು ಈ ಬಗ್ಗೆ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕೆಂದು ನಿರ್ಧರಿಸಿದ್ದರು. ಈ ವಿಚಾರ ಬಗ್ಗೆ ಸ್ವಾಮೀಜಿ ಮತ್ತು ಸಹಚರರಿಗೆ ತಿಳಿದು ದೂರು ನೀಡದಂತೆ ಬೆದರಿಕೆ ಹಾಕಿದ್ದರು" ಎಂದು ಆರೋಪಿಸಿದ್ದಾರೆ.

"ಮಂಗಳವಾರ ಬೆಳಗ್ಗೆ ಕೆಲವು ಪೊಲೀಸರು ನಮ್ಮ ಮನೆಗೆ ಬಂದು ತಂದೆ ಮತ್ತು ತಾಯಿಯನ್ನು ಬಂಧಿಸಿದ್ದಾರೆ. ಅವರನ್ನು ಹೊನ್ನಾವರ ಕೋರ್ಟ್‍ಗೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಆದ್ದರಿಂದ ಮಾಹಿತಿ ನೀಡಬೇಕೆಂದು" ಮನವಿ ಮಾಡಿದ್ದಾರೆ.

"ಸ್ವಾಮೀಜಿಯವರ ಬೆಂಬಲಿಗರು ನಮಗೆ ಕರೆ ಮಾಡಿ ನಮ್ಮ ಮೇಲೆ ದೈಹಿಕ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ನಮಗೆ ಮತ್ತು ನಮ್ಮ ಮನೆಗೆ ಸೂಕ್ತ ರಕ್ಷಣೆ ನೀಡಬೇಕಾಗಿ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ" ಎಂದು ದೂರು ನೀಡಿದ್ದಾರೆ.

English summary
Singer Premalatha Divakar daughter field police complaint in Banashankari Police Station against Raghaveshwara Bharathi Swamiji of Ramachandrapura Math.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X