ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸೌಧದಲ್ಲಿ ಗೂಬೆ: ಸಿದ್ದು ಸರ್ಕಾರಕ್ಕೆ ಅಪಶಕುನವಾ?

By Srinath
|
Google Oneindia Kannada News

ಬೆಂಗಳೂರು, ಏ.23: ಲೋಕಸಭಾ ಚುನಾವಣೆ ನಿಮಿತ್ತ ವಿಧಾನ ಸೌಧದಲ್ಲಿದ್ದ ಅಷ್ಟೂ ಮಂದಿ ರಾಜ್ಯಾದ್ಯಂತ ಹರಿದುಹೋಗಿದ್ದರು. ಸರಿಯಾಗಿ ಅದೇ ವೇಳೆಗೆ ರಾಜ್ಯದ ಶಕ್ತಿ ಕೇಂದ್ರ ವಿಧಾನ ಸೌಧವು ಪಾಳುಬಿದ್ದ ಬಂಗಲೆಯಂತಾಗಿತ್ತು. ಆದರೆ ಇದೇ ಪ್ರಶಸ್ತ ಸ್ಥಳ/ಸಂದರ್ಭವೆಂದು ಭಾವಿಸಿ ಪ್ರಾಣಿ ಸಂಕುಲ ಇಲ್ಲಿ ವಾಸಿಸತೊಡಗಿತ್ತು.

ಅದೇ ರೂಢಿಯ ಮೇಲೆ ಇಂದು ಬೆಳಗ್ಗೆ ಬಿಳಿ ಗೂಬೆಯೊಂದು ಬ್ಯಾಕ್ವೆಂಟ್ ಹಾಲ್ ಬಳಿ ಕಾಣಿಸಿಕೊಂಡಿದೆ. ಇತ್ತ ಚುನಾವಣೆ ಮುಗಿಸಿಕೊಂಡು ಮತ್ತೆ ವಿಧಾನ ಸೌಧಕ್ಕೆ ಮರಳುತ್ತಿದ್ದ ಮಂತ್ರಿವರ್ಯರು, ನಾಯಕರು, ಜನಸಾಮಾನ್ಯರು ಮತ್ತು ವಿಧಾನ ಸೌಧ ಸಿಬ್ಬಂದಿಗೆ ಗೂಬೆ ಕಾಣಿಸಿಕೊಂಡಿದೆ.

owl-found-at-vidhana-soudha-bangalore-bad-omen-for-siddaramaiah

ಜನ ತಮ್ಮ ಕೈಯಲ್ಲಿರುವ ಮೊಬೈಲುಗಳನ್ನು ಹಿಡಿದು ವಿಧಾನಸೌಧಕ್ಕೆ ಆಗಮಿಸಿದ ವಿಶೇಷ ಅತಿಥಿಯನ್ನು ಒಂದೇ ಸಮನೆ ಶೂಟ್ ಮಾಡಿದ್ದಾರೆ. ಸಾಲದು ಅಂತ ಮಾಧ್ಯಮಗಳಿಗೂ ಸುದ್ದಿ ನೀಡಿದ್ದಾರೆ! (ಉಲೂಕ ಕಾಪಾಡಿದ ಒನ್ಇಂಡಿಯಾ ಪತ್ರಕರ್ತ )

ಆ ಗೂಬೆಯೂ ಯಾವುದೇ ಭೀತಿಗೊಳಗಾಗದೆ ವೈಯಾರದಿಂದ ಪೋಸು ಕೊಟ್ಟಿದೆ. ಈ ಮಧ್ಯೆ ವಿಧಾನಸೌಧದಲ್ಲಿ ಗೂಬೆ ಕಾಣಿಸಿಕೊಂಡಿದ್ದರ ಬಗ್ಗೆ ಜನ ತಲೆಗೊಂದು ಮಾತನಾಡಿದ್ದಾರೆ. ಕೆಲವರು 'ಗೂಬೆ ಕಾಣಿಸಿಕೊಂಡಿದೆ, ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಕ್ಕೆ ಏನಾದರೂ ಅಪಾಯ ಕಾದಿದೆಯಾ? ನಾಡಿನ ಶ್ರೇಯೋಭಿವೃದ್ಧಿಗೆ ಇದು ಅಪಶಕುನವಾ?' ಎಂದು ಆತಂಕದಿಂದ ಮಾತನಾಡಿಕೊಂಡಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳೋಣವೆಂದರೆ ಅವರು ಅಲ್ಲೆಲ್ಲೋ ವೈಟ್ ಫೀಲ್ಡ್ ನಿಸರ್ಗ ಚಿಕಿತ್ಸಾಲಯದಲ್ಲಿ ಆರೈಕೆ ಪಡೆಯುತ್ತಿದ್ದಾರೆ. (ಮೂಢನಂಬಿಕೆ ಪ್ರತಿಬಂಧಕ ಮಸೂದೆ ಮಂಡನೆ ಶತಸಿದ್ಧ )

English summary
Lok Sabha election 2014- An owl was found in Vidhana Soudha- Bangalore today. could it be bad omen for Siddaramaiah Govt?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X