ಒನ್ ಇಂಡಿಯಾಗೆ ಸಿಎಂಎಸ್ಬಿ ಮಾಸ್ ಮೀಡಿಯಾ ಪ್ರಶಸ್ತಿ
ಬೆಂಗಳೂರು, ಆ.31 : ದೆಹಲಿಯ ಕೌನ್ಸಿಲ್ ಫಾರ್ ಮೀಡಿಯಾ ಮತ್ತು ಸ್ಯಾಟಲೈಟ್ ಬ್ರಾಡ್ಕಾಸ್ಟಿಂಗ್ ಸಂಸ್ಥೆ ನೀಡುವ ಪ್ರತಿಷ್ಠಿತ ಸಿಎಂಎಸ್ಬಿ ಮಾಸ್ ಮೀಡಿಯಾ ಆಫ್ ದಿ ಇಯರ್ ಪ್ರಶಸ್ತಿ 2014 ಪ್ರಶಸ್ತಿಯನ್ನು ಒನ್ ಇಂಡಿಯಾ ಡಾಟ್ ಇನ್ ಪಡೆದುಕೊಂಡಿದೆ.
ಜೆ.ಪಿ.ನಗರದ
ಎಂಎಲ್ಆರ್
ಕನ್ವೆಷನ್
ಸೆಂಟರ್ನಲ್ಲಿ
ಶುಕ್ರವಾರ
ನಡೆದ
ಕಾರ್ಯಕ್ರಮದಲ್ಲಿ
ಸಿಎಂಎಸ್ಬಿ
ಮಾಸ್
ಮೀಡಿಯಾ
ಆಫ್
ದಿ
ಇಯರ್
ಪ್ರಶಸ್ತಿ
2013
ಪ್ರಶಸ್ತಿಯನ್ನು
ಪ್ರದಾನ
ಮಾಡಲಾಯಿತು.
ಒನ್
ಇಂಡಿಯಾದ
ಎಚ್ಆರ್
ವಿಭಾಗದ
ಮುಖ್ಯಸ್ಥರಾದ
ಕೆ.
ಮಹೇಶ್
ಅವರು
ಸಂಸ್ಥೆ
ಪರವಾಗಿ
ಪ್ರಶಸ್ತಿಯನ್ನು
ಸ್ವೀಕರಿಸಿದರು.
2013ರಲ್ಲಿ ಸಹ ಸಿಎಂಎಸ್ಬಿಯ ವೆಬ್ ಮೀಡಿಯಾ ಪ್ರಶಸ್ತಿಯನ್ನು ಒನ್ ಇಂಡಿಯಾ ಪಡೆದಿತ್ತು. ಮಾಧ್ಯಮ, ಶೈಕ್ಷಣಿಕ, ಉದ್ಯಮ ಕ್ಷೇತ್ರಗಳು ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಪ್ರತಿಭಾವಂತರಿಗೆ ಸಿಎಂಎಸ್ಬಿ ಪ್ರತಿವರ್ಷ ಪ್ರಶಸ್ತಿ ನೀಡಿ ಗೌರವಿಸುತ್ತದೆ.
ದೆಹಲಿಯ ಸಂಸದ ಉದಿತ್ ರಾಜ್ ಮತ್ತು ಉತ್ತರ ಪ್ರದೇಶದ ಸಂಸದರಾದ ನೀಲಂ ಸೋನ್ಕರ್ ಜೆ.ಪಿ.ನಗರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಏನಿದು ಸಿಎಂಎಸ್ಬಿ : ಕೌನ್ಸಿಲ್ ಫಾರ್ ಮೀಡಿಯಾ ಮತ್ತು ಸ್ಯಾಟಲೈಟ್ ಬ್ರಾಡ್ಕಾಸ್ಟಿಂಗ್ ಸಂಸ್ಥೆ (ಸಿಎಂಎಸ್ಬಿ) 300ಕ್ಕೂ ಹೆಚ್ಚು ಪ್ರಾದೇಶಿಕ ಮತ್ತು ರಾಷ್ಟ್ರೀಯ ಪತ್ರಿಕೆ, ಟಿವಿ ಚಾನೆಲ್, ಮ್ಯಾಗ್ಜಿನ್ಗಳನ್ನು ಒಳಗೊಂಡಿದೆ.