ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐದು ದಿನ ಪೀಣ್ಯಕ್ಕೆ ಹೋಗಲು ಮೆಟ್ರೋ ರೈಲು ಇರೋಲ್ಲ

|
Google Oneindia Kannada News

ಬೆಂಗಳೂರು, ಸೆ. 19 : ಪೀಣ್ಯ ಇಂಡಸ್ಟ್ರಿ ಹಾಗೂ ಜಾಲಹಳ್ಳಿ ನಿಲ್ದಾಣಗಳ ನಡುವೆ ಹೊಸ ವಿದ್ಯುತ್ ಸಂಪರ್ಕ ಜಾಲ ಅವಳಡಿಸುವ ಕಾಮಗಾರಿ ಇರುವುರಿಂದ ಈ ಮಾರ್ಗದಲ್ಲಿ ಸೆ.21ರಿಂದ 25ರವೆರೆಗೆ ಮೆಟ್ರೋ ರೈಲು ಸಂಚರಿಸುವುದಿಲ್ಲ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.

ವಿದ್ಯುತ್ ಸಂಪರ್ಕ ಜಾಲ ಆಳವಡಿಸುವ ಕಾಮಗಾರಿ ಹಿನ್ನಲೆಯಲ್ಲಿ ಯಶವಂತಪುರ ಮತ್ತು ಪೀಣ್ಯ ಇಂಡಸ್ಟ್ರಿ ನಡುವೆ ಸೆ.21ರ ಭಾನುವಾರದಿಂದ ಸೆ.25ರ ಗುರುವಾರದ ತನಕ ರೈಲು ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರು ಸಹಕಾರ ನೀಡಬೇಕು ಎಂದು ಬಿಎಂಆರ್‌ಸಿಎಲ್ ಮನವಿ ಮಾಡಿದೆ.

Namma Metro

ಈ ಅವಧಿಯಲ್ಲಿ ಸಂಪಿಗೆ ರಸ್ತೆಯಿಂದ ಯಶವಂತಪುರದ ತನಕ ಸಂಚರಿಸುವ ಮೆಟ್ರೋ ರೈಲಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬೆಳಗ್ಗೆ 6 ರಿಂದ ರಾತ್ರಿ 10ರ ತನಕ ಮೆಟ್ರೋ ರೈಲುಗಳು ಸಂಚರಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. [2015ರ ಫೆಬ್ರವರಿಗೆ ಪೀಣ್ಯ-ನಾಗಸಂದ್ರ ಮೆಟ್ರೋ ಸಂಚಾರ]

ಸಂಪಿಗೆ ರಸ್ತೆ ಮತ್ತು ಪೀಣ್ಯ ನಡುವಿನ ನಮ್ಮ ಮೆಟ್ರೋ ರೈಲು ಸಂಚಾರ ಮಾರ್ಚ್ 1ರಿಂದ ಆರಂಭಗೊಂಡಿದೆ. 10.5 ಕಿಮೀ ನಡುವಿನ ಈ ಮಾರ್ಗದಲ್ಲಿ ಸಂಪಿಗೆ ರಸ್ತೆ, ಕುವೆಂಪು ರಸ್ತೆ, ಶ್ರೀರಾಂಪುರ, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್, ಸ್ಯಾಂಡಲ್ ಸೋಪ್ ಕಾರ್ಖನೆ, ಯಶವಂತಪುರ, ಯಶವಂತಪುರ ಇಂಡಸ್ಟ್ರಿ, ಯಶವಂತಪುರ, ಪೀಣ್ಯ ಮತ್ತು ಪೀಣ್ಯ ಇಂಡಸ್ಟ್ರಿ ನಿಲ್ದಾಣಗಳಿವೆ. [ಸಂಪಿಗೆ ರಸ್ತೆ-ಪೀಣ್ಯ ಮೆಟ್ರೋಗೆ 1.33 ಕೋಟಿ ಆದಾಯ]

ಈ ಮಾರ್ಗವನ್ನು ಪೀಣ್ಯ ಕೈಗಾರಿಕಾ ನಿಲ್ದಾಣದಿಂದ ನಾಗಸಂದ್ರವರೆಗೆ ವಿಸ್ತರಣೆ ಮಾಡುವ ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್‌ನಲ್ಲಿ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, 2015ರ ಫೆಬ್ರವರಿಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ದಿನಗಳ ಹಿಂದೆ ಹೇಳಿದ್ದಾರೆ.

English summary
In a press release Bangalore Metro Rail Corporation Limited (BMRCL) said, No metro rail service to Yeshwanthpur-peenya from Sep 21 to 25 due to electrical work. Metro train service available from Sampige road to Yeshwanthpur in these days from morning 6 to night 10 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X