ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೇಪಾಳ ದಂಪತಿ ಕೊಲೆ, ನಾಲ್ವರಿಗೆ ಜೀವಾವಧಿ ಶಿಕ್ಷೆ

|
Google Oneindia Kannada News

ಬೆಂಗಳೂರು, ಸೆ. 18 : ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನೇಪಾಳ ದಂಪತಿಯನ್ನು ಕೊಲೆ ಮಾಡಿದ್ದ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ 14ನೇ ತ್ವರಿಗ ನ್ಯಾಯಾಲಯ ಆದೇಶ ನೀಡಿದೆ.ಹಣದ ಆಸೆಗಾಗಿ ಸ್ನೇಹಿತ ಮತ್ತು ಅವನ ಪತ್ನಿಯನ್ನು ನಾಲ್ವರು ಸೇರಿ 2010ರಲ್ಲಿ ಕೊಲೆ ಮಾಡಿದ್ದರು.

ಡಾರ್ಜಿಲಿಂಗ್ ಮೂಲದ ಸಂತೋಷ್ ಚೆಟ್ರಿ (30), ಪ್ರದೀಪ್ ಚೆಟ್ರಿ (21), ಪ್ರೀತಂ ತಮಂಗ್ (24) ಹಾಗೂ ಅಸ್ಸಾಂನ ವಿವೇಕ್ ಅಲಿ-ಯಾಸ್ ವಿಕಾಸ್ (22) ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗಳು. 2010ರ ಫೆ.8ರಂದು ಎಚ್‌ಎಸ್ಆರ್ ಲೇಜೌಟ್‌ನಲ್ಲಿ ಅಮ್ರಿತ್ ರಾಯ್ (34) ಹಾಗೂ ಅವರ ಪತ್ನಿ ಜಾನಕಿ (28) ಅವರನ್ನು ನಾಲ್ವರು ಸೇರಿ ಕೊಲೆ ಮಾಡಿ, ಚಿನ್ನಾಭರಣ ಮತ್ತು ಹಣ ದೋಚಿದ್ದರು.

fast track court

ಘಟನೆ ವಿವರ : ಅಪರಾಧಿ ಸಂತೋಷ್ ಮತ್ತು ಕೊಲೆಯಾದ ಅಮ್ರಿತ್ ಹಿಂದೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಕೆಲಸ ಬಿಟ್ಟ ಅಮ್ರಿತ್ ಬೇರೆ ಕಂಪನಿ ಸೇರಿದ್ದು, ಹೆಚ್ಚಿನ ವೇತನ ಪಡೆಯುತ್ತಿದ್ದರು. ಆದ್ದರಿಂದ ಅಮ್ರಿತ್ ಬಳಿ ಇರುವ ಹಣ ದೋಚುವ ಉದ್ದೇಶದಿಂದ ಸಂತೋಷ್ ತನ್ನ ಮೂವರು ಸ್ನೇಹಿತರ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದ. [ನೇಪಾಳಿ ದಂಪತಿ ಭೀಕರ ಕೊಲೆ]

2010ರ ಫೆ.8ರಂದು ನಾಲ್ವರು ಅಪರಾಧಿಗಳು ಅಮ್ರಿತ್‌ ಮನೆಗೆ ಊಟಕ್ಕೆ ಬಂದಿದ್ದರು. ಊಟದ ಬಳಿಕ ಅಮ್ರಿತ್ ಕಾರಿನಲ್ಲಿ ಮನೆಗೆ ಡ್ರಾಪ್ ಕೇಳಿದ್ದರು. ಕಾರಿನಲ್ಲಿ ಹೋಗುವಾಗ ಅಗರ ಸಮೀಪ ಅಮ್ರಿತ್ ಅವರನ್ನು ಕೊಲೆ ಮಾಡಿದ್ದ ಆರೋಪಿಗಳು ಶವವನ್ನು ಸರ್ಜಾಪುರ ಕೆರೆಗೆ ಎಸೆದು ಅಮ್ರಿತ್ ಮನೆಗೆ ತೆರಳಿದ್ದರು.

ಅಮ್ರಿತ್ ಪತ್ನಿ ಜಾನಕಿ ಬಳಿ ತೆರಳಿ ಅಮ್ರಿತ್ ಡಿಎಲ್‌ ಬಿಟ್ಟು ಹೋಗಿದ್ದಾರೆ. ಪೊಲೀಸರು ಕಾರನ್ನುಹಿಡಿದಿದ್ದು, ಡಿಎಲ್ ಕೊಡುವಂತೆ ತಿಳಿಸಿದ್ದಾರೆ. ಡಿಎಲ್ ಹುಡುಕುತ್ತಿದ್ದ ಜಾನಕಿ ಅವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿಗಳು ಮನೆಯಲ್ಲಿದ್ದ ಹಣ ಮತ್ತು ಚಿನ್ನವನ್ನು ದೋಚಿ ಪರಾರಿಯಾಗಿದ್ದರು.

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಎಚ್‌ಎಸ್‌ಆರ್‌ ಲೇಔಟ್ ಪೊಲೀಸರು, 2010ರ ಫೆ.25ರಂದು ಆರೋಪಿಗಳನ್ನು ಬಂಧಿಸಿದ್ದರು. ನಾಲ್ವರ ವಿರುದ್ಧದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ 8 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.

English summary
14th fast track court of Bangalore has sentenced four people to life imprisonment in connection with the shocking murder of a Nepalese couple in 2010. The four, identified as Santhosh (29), Vivek (30), Pradeep (27) and Preetham (29) from Nepal. Four were booked for murdering Amrit Rai (35) and his wife Janaki (30) in February 2010 at HSR Layout police station limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X