ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಗುರಿ

|
Google Oneindia Kannada News

ಬೆಂಗಳೂರು, ಸೆ. 15 : ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಮತ್ತು ಉತ್ತಮ ತರಬೇತಿ ನೀಡುವ ಉದ್ದೇಶದಿಂದ ಸಿಎಂಆರ್‌ ವಿಶ್ವವಿದ್ಯಾಲಯ ರಾಷ್ಟ್ರೀಯ ಸಾಫ್ಟ್ ವೇರ್ ಮತ್ತು ಸೇವೆಗಳ ಸಮಿತಿ (ನಾಸ್ ಸ್ಕೋಮ್) ಯೊಂದಿಗೆ ಹೊಸ ಹೆಜ್ಜೆ ಇಟ್ಟಿದೆ. ನಾಸ್ ಸ್ಕೋಮ್‌ ನಿರ್ದೇಶನದಲ್ಲಿ ಗುಣಾತ್ಮಕ ಶಿಕ್ಷಣ ಅಳವಡಿಕೆಗೆ ಕ್ರಮ ತೆಗೆದುಕೊಂಡಿದೆ. ಸರ್ಕಾರದೊಂದಿಗೆ ಮೆಮೊರೆಂಡಮ್ ಆಫ್ ಅಂಡರ್ ಸ್ಟಾಂಡಿಂಗ್ (ಎಮ್ ಒಯು) ಮುಖಾಂತರ ಕೆಲಸ ಮಾಡಲು ಮುಂದಾಗಿದೆ.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುವಂತೆ ವಿಶೇಷ ರೀತಿಯ ತರಬೇತಿ ಹಮ್ಮಿಕೊಂಡಿದೆ. ಇತ್ತೀಚೆಗೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಿತು.

cmr

ರಾಷ್ಟ್ರೀಯ ಸಾಫ್ಟ್ ವೇರ್ ಮತ್ತು ಸೇವೆಗಳ ಸಮಿತಿಯ ನಿರ್ದೇಶಕಿ ಡಾ. ಸಂಧ್ಯಾ ಚಿಂತಾಲಾ ಮಾತನಾಡಿ, ಎಮ್ ಒಯು ಅಳವಡಿಕೆ ಕಾರ್ಯಕ್ರಮದ ಒಂದು ಮೈಲಿಗಲ್ಲಾಗಿದೆ. 2022 ರ ವೇಳೆಗೆ ದೇಶಕ್ಕೆ 500 ಮಿಲಿಯನ್ ತರಬೇತಿ ಪಡೆದ ವೃತ್ತಿಪರರ ಅಗತ್ಯವಿದೆ. ಆ ನಿಟ್ಟಿನಲ್ಲಿ ಈಗಿನಿಂದಲೇ ಗಮನ ಹರಿಸಬೇಕು ಎಂದು ತಿಳಿಸಿದರು.(ಸಿಎಂಆರ್ ನಲ್ಲಿ ಹೊಸ ಸಂಶೋಧನಾ ತರಗತಿ ಆರಂಭ)

ಇಂಥ ಗುರಿಯನ್ನು ಮುಟ್ಟಲು ಉತ್ತಮ ಪ್ರಯತ್ನ ಅಗತ್ಯ. ಕೌಶಲ್ಯಾಭಿವೃದ್ಧಿ, ಕಠಿಣ ಪರಿಶ್ರಮ, ಶಿಸ್ತು ಎಲ್ಲವೂ ಲೆಕ್ಕಕ್ಕೆ ಸಿಗುತ್ತವೆ. ನಾಸ್ ಸ್ಕೋಮ್ ಈ ಬಗ್ಗೆಯೂ ಗಮನ ಹರಿಸಿದ್ದು ತರಬೇತಿದಾರನಿಗೂ ಉತ್ತಮ ತರಬೇತಿ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಜಗತ್ತಿನ ಸ್ಪಧರ್ಧಾಲೋಕಕ್ಕೆ ಅಗತ್ಯವಿರುವ ಕೌಶಲ್ಯ ಬೆಳೆಸಲು ಯೋಜನೆ ರೂಪಿಸಲಾಗಿದೆ.ಮ ವಿದ್ಯಾರ್ಥಿಗಳ ಆಯ್ಕೆ, ಮೂಲ ಸೌಕರ್ಯ ಅಭಿವೃದ್ಧಿ, ಮತ್ತು ತರಬೇತಿ ಮುಖ್ಯವಾಗುತ್ತದೆ ಎಂದು ಹೇಳಿದರು. ಯಾವುದೇ ವಿದ್ಯಾರ್ಥಿಗೆ ಸಕಲ ರೀತಿಯ ತರಬೇತಿ ನೀಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಬೆಳೆಸಬೇಕು ಎಂದರು.

English summary
NASSCOM has entered into a collaborative MoU with CMR University (CMRU) where the University will integrate Global Business Foundation Skills (GBFS) Courseware developed by NASSCOM (IT-ITeS Sector Skills Council) in its curriculum. The two will then offer measurable training programs to students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X