ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೋರುಬೆರಳಿಗೆ ಮಸಿ ಅಂಟಿಸಿದ್ದು ಸರೀನಾ ನಿಲೇಕಣಿ?

By Prasad
|
Google Oneindia Kannada News

ಬೆಂಗಳೂರು, ಏ. 17 : ಮತದಾನ ಮಾಡಿದ ಪ್ರಭುವಿನ ಯಾವ ಬೆರಳಿಕೆ ಅಳಿಸಲಾರದ ಇಂಕ್ ಅಂಟಿಸಲಾಗುತ್ತಿದೆ? ಇದು ಕೇಳಬಾರದ ಪ್ರಶ್ನೆಯೆ. ಏಕೆಂದರೆ, ಈ ಬಾರಿಗೆ ಎಡಗೈ ಹೆಬ್ಬೆರಳಿಗೆ ಮಸಿಯನ್ನು ಹಾಕಲಾಗುತ್ತಿದೆ. ಇದು ಮತದಾನ ಮಾಡುತ್ತಿರುವ ಪ್ರತಿಯೊಬ್ಬನಿಗೂ, ಮಸಿ ಹಾಕುತ್ತಿರುವವರಿಗೂ ಗೊತ್ತು. ಹೆಬ್ಬೆರಳನ್ನು ಹೆಮ್ಮೆಯಿಂದ ತೋರಿಸಿಕೊಂಡು ಮತದಾನಿಗಳು ತಮ್ಮ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳುತ್ತಿದ್ದಾರೆ.

ಆದರೆ, ಇಡೀ ಕರ್ನಾಟಕವನ್ನು ಮಾತ್ರವಲ್ಲ ಇಡೀ ದೇಶದ ಗಮನ ಸೆಳೆದಿರುವ ಬೆಂಗಳೂರು ದಕ್ಷಿಣದಲ್ಲಿ ಚುನಾವಣೆಗೆ ನಿಂತಿರುವ ಐಟಿ ದಿಗ್ಗಜರೊಬ್ಬರು ಕೂಡ ತಾವು ಮತ ಚಲಾಯಿಸಿದ ನಂತರ ತಮ್ಮ ಇಡೀ ಕುಟುಂಬದ ಚಿತ್ರವನ್ನು ಮಸಿ ಅಂಟಿಸಿದ ಬೆರಳಿನ ಸಮೇತ ಟ್ವಿಟ್ಟರಲ್ಲಿ ಮತ್ತು ಫೇಸ್ ಬುಕ್ ನಲ್ಲಿ ಹೆಮ್ಮೆಯಿಂದ ಹಾಕಿಕೊಂಡಿದ್ದಾರೆ. ಅವರು ಮತ್ತಾರೂ ಅಲ್ಲ ನಂದನ್ ನಿಲೇಕಣಿ. ಇದರಲ್ಲೇನು ವಿಶೇಷ ಅಂತೀರಾ? ಮಸಿ ಅಂಟಿಸಿದ್ದು ಹೆಬ್ಬೆರಳಿಗೆ ಅಲ್ಲ, ತೋರುಬೆರಳಿಗೆ!

ಮತ ಚಲಾಯಿಸುವ ಮುನ್ನ ಎಡಗೈ ಹೆಬ್ಬೆರಳಿಗೆ ಮಸಿ ಅಂಟಿಸಬೇಕೆಂದು ಬೂತ್ ಕಾರ್ಯಕರ್ತನಿಗೆ ತಿಳಿದಿರಲಿಲ್ಲವೆ? ಮಸಿ ಅಂಟಿಸಿಕೊಳ್ಳುವಾಗ, ಎಡಗೈ ತೋರುಬೆರಳಿಗೆ ಅಲ್ಲ, ಹೆಬ್ಬರಳಿಗೆ ಅಂಟಿಸಬೇಕೆಂದು ನಂದನ್ ನಿಲೇಕಣಿ ಅವರಿಗೆ ಕೂಡ ತಿಳಿದಿರಲಿಲ್ಲವೆ? ಇಷ್ಟು ಸಣ್ಣ ಸಂಗತಿಯನ್ನು, ಸ್ವತಃ ಚುನಾವಣೆಗೆ ಸ್ಪರ್ಧಿಸಿರುವ ನಂದನ್ ನಿಲೇಕಣಿ ಅರಿತಿರಲಿಲ್ಲವೆ? ಈ ಬಗ್ಗೆ ಅವರ ಕುಟುಂಬದ ಸದಸ್ಯರಾದರೂ ಗಮನಕ್ಕೆ ತರಬೇಕಿತ್ತಲ್ಲವೆ? [ಟ್ವೀಟ್ಸ್ ಫೋಟೋಸ್ ರಿಯಾಕ್ಷನ್]

2009ರಲ್ಲಿ ಕೂಡ ಇಂಥದೇ ಪ್ರಮಾದವಾಗಿತ್ತು. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಮಗ ರಾಘವೇಂದ್ರನಿಗಾಗಿ ಮತ ಚಲಾಯಿಸಿದ್ದ ಯಡಿಯೂರಪ್ಪ ಅವರ ಎಡಗೈ ತೋರುಬೆರಳ ಬದಲಾಗಿ ಬಲಗೈ ತೋರು ಬೆರಳಿಗೆ ಮಸಿ ಅಂಟಿಸಲಾಗಿತ್ತು. ಇಂಥ ಪ್ರಮಾದಗಳಿಗೆ ಚುನಾವಣಾ ಆಯೋಗ ಯಾವ ರೀತಿಯ ಸಮರ್ಥನೆಗಳನ್ನು ಕೊಡುತ್ತದೆ. [ಯಾರ್ಯಾರು ಮತದಾನ ಮಾಡಿದರು ಕಣ್ಣಾಡಿಸಿಬಿಡಿ]

ಎಡಗೈ ತೋರುಬೆರಳಿಗೆ ಮಸಿ ಅಂಟಿಸಿರುವ ಅವರ ಚಿತ್ರಗಳು ಟ್ವಿಟ್ಟರಲ್ಲಿ ಮತ್ತು ಫೇಸ್ ಬುಕ್ ನಲ್ಲಿ ರಾರಾಜಿಸುತ್ತಿವೆ. ಆ ಚಿತ್ರಗಳನ್ನು ನೋಡಿದವರು, ನಿಲೇಕಣಿಯವರು ಹಳೆ ಚುನಾವಣೆಯ ಚಿತ್ರ ಅಂಟಿಸಿದ್ದಾರಾ ಎಂದು ಆವಾಕ್ಕಾಗುವುದು ಖಂಡಿತ. ಟ್ವಿಟ್ಟರಲ್ಲಿ ಇಲ್ಲಿಯವರೆಗೆ ಒಬ್ಬರೂ ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಆದರೆ, ಫೇಸ್ ಬುಕ್ ನಲ್ಲಿ ಕೆಲವರು ಪ್ರಸ್ತಾಪ ಮಾಡಿದ್ದಾರೆ.

ನಂದನ್ ರೈಟ್ ಪರ್ಸನ್ ಇನ್ ದಿ ರಾಂಗ್ ಪಾರ್ಟಿ

ನಂದನ್ ರೈಟ್ ಪರ್ಸನ್ ಇನ್ ದಿ ರಾಂಗ್ ಪಾರ್ಟಿ

ಅವರ ಫೇಸ್ ಬುಕ್ ಅಭಿಮಾನಿಯೊಬ್ಬರು, 'ನಿಲೇಕಣಿಯವರು ರೈಟ್ ಪರ್ಸನ್ ಇನ್ ದಿ ರಾಂಗ್ ಪಾರ್ಟಿ, ಹಾಗಾಗಿಯೇ, ರಾಂಗ್ ಬೆರಳಿಗೆ ಮಸಿ ಅಂಟಿಸಲಾಗಿದೆ' ಎಂದು ವ್ಯಂಗ್ಯವಾಡಿದ್ದಾರೆ. ಯಾವುದು ರೈಟ್, ಯಾವುದು ರಾಂಗ್? ನಂದನ್ ನಿಲೇಕಣಿಯವರು ಇದಕ್ಕೆ ಏನು ಹೇಳುತ್ತಾರೆ?

ಅಭ್ಯರ್ಥಿಯ ತೋರು ಬೆರಳಿಗೆ ಇಂಕ್ ಹಾಕ್ತಾರಾ?

ಅಭ್ಯರ್ಥಿಯ ತೋರು ಬೆರಳಿಗೆ ಇಂಕ್ ಹಾಕ್ತಾರಾ?

ನಂದನ್ ನಿಲೇಕಣಿ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ, ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯ ತೋರು ಬೆರಳಿಗೆ ಇಂಕ್ ಹಾಕುತ್ತಾರೆ ಎಂದು ಪ್ರಸ್ತಾಪಿಸಿದ್ದಾರೆ. ಇದು ನಿಜಾನಾ? ಇದು ಸರಿಯೇ ಆಗಿದ್ದರೆ ಮುಂದೆ ಓದಿರಿ...

ಅನಂತ್ ಕುಮಾರ್ ಹೆಬ್ಬೆರಳಿಗ್ಯಾಕೆ ಇಂಕ್?

ಅನಂತ್ ಕುಮಾರ್ ಹೆಬ್ಬೆರಳಿಗ್ಯಾಕೆ ಇಂಕ್?

ನಂದನ್ ಹೇಳುತ್ತಿರುವುದು ನಿಜಾನೇ ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿರುವ ಬಿಜೆಯ ಹಾಲಿ ಸಂಸದ ಅನಂತ್ ಕುಮಾರ್ ಮತ್ತು ಅವರ ಕುಟುಂಬದವರಿಗೆ ಏಕೆ ಹೆಬ್ಬೆರಳಿಗೆ ಇಂಕ್ ಹಾಕಲಾಗಿದೆ?

ರಮ್ಯಾಗೆ ಕೂಡ ಹೆಬ್ಬೆರಳಿಗೆ ಇಂಕ್

ರಮ್ಯಾಗೆ ಕೂಡ ಹೆಬ್ಬೆರಳಿಗೆ ಇಂಕ್

ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧೆಗಿಳಿದಿರುವ ನಟಿ ರಮ್ಯಾಗೆ ಕೂಡ ಹೆಬ್ಬೆರಳಿಗೆ ಇಂಕ್ ಅಂಟಿಸಲಾಗಿದೆ. ಅದನ್ನು ಅವರು ಹೆಮ್ಮೆಯಿಂದ ತೋರಿಸುತ್ತಿದ್ದಾರೆ. ನಂದನ್ ಗೆ ಮಾತ್ರ ಏಕೆ ವಿನಾಯಿತಿ?

ಸದಾನಂದ ಅವರ ಯಾವ ಬೆರಳಿಗೆ ಇಂಕ್?

ಸದಾನಂದ ಅವರ ಯಾವ ಬೆರಳಿಗೆ ಇಂಕ್?

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ನಾಯಕ ಸದಾನಂದ ಗೌಡ ಮತ್ತು ಅವರ ಹೆಂಡತಿ ಡಾಟಿ ಅವರಿಗೆ ಕೂಡ ಹೆಬ್ಬೆರಳಿಗೆ ಇಂಕ್ ಅಂಟಿಸಲಾಗಿದೆ.

ಶಿವಮೊಗ್ಗದ ಮಂಜುನಾಥ ಭಂಡಾರಿಗೂ ಹೆಬ್ಬೆಟ್ಟು

ಶಿವಮೊಗ್ಗದ ಮಂಜುನಾಥ ಭಂಡಾರಿಗೂ ಹೆಬ್ಬೆಟ್ಟು

ಶಿವಮೊಗ್ಗದಲ್ಲಿ ಚುನಾವಣಾ ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ, ಪತ್ನಿ ಮತ್ತು ಮಗಳು ಹೆಮ್ಮೆಯಿಂದ ಇಂಕ್ ಅಂಟಿದ ಹೆಬ್ಬೆರಳು ತೋರಿಸುತ್ತಿರುವುದು.

ಬೆಂಗಳೂರು ಕೇಂದ್ರದ ಅಭ್ಯರ್ಥಿ ಪಿಸಿ ಮೋಹನ್

ಬೆಂಗಳೂರು ಕೇಂದ್ರದ ಅಭ್ಯರ್ಥಿ ಪಿಸಿ ಮೋಹನ್

ಬೆಂಗಳೂರು ಕೇಂದ್ರದ ಅಭ್ಯರ್ಥಿ ಪಿಸಿ ಮೋಹನ್ ಅವರು ಮತ ಚಲಾಯಿಸಿದ ನಂತರ ತಮ್ಮ ಮಗಳೊಂದಿಗೆ ಫೋಟೋಗೆ ಪೋಸ್ ನೀಡಿದ್ದು ಈ ರೀತಿ.

ಧಾರವಾಡದ ಜೋಶಿ ಅವರಿಗೂ ಹೆಬ್ಬೆರಳಿಗೆ ಇಂಕ್

ಧಾರವಾಡದ ಜೋಶಿ ಅವರಿಗೂ ಹೆಬ್ಬೆರಳಿಗೆ ಇಂಕ್

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಪ್ರಹ್ಲಾದ್ ಜೋಶಿ ಅವರು ಕೂಡ ಮತದಾನದ ನಂತರ ಇಂಕ್ ಹಚ್ಚಿದ ಹೆಬ್ಬೆರಳು ತೋರಿಸುತ್ತಿರುವುದು.

English summary
Bangalore South Congress candidate Nandan Nilekani and his entire family were inked on the wrong finger at the time of voting. Indelible ink was applied on forefinger of left hand. The ink should have been applied on thumb.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X