ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಂದ್ರಾಲೇಔಟ್ ಪಾರ್ಕ್ ವಿವಾದ, ನಿಷೇಧಾಜ್ಞೆ ಜಾರಿ

|
Google Oneindia Kannada News

ಬೆಂಗಳೂರು, ಆ.31 : ನಾಗರಬಾವಿ ಬಳಿ ಬಿಬಿಎಂಪಿ ನಿರ್ಮಿಸಿರುವ ಚಂದ್ರಗಿರಿ ಉದ್ಯಾನವನದ ಉದ್ಘಾಟನೆ ಬಗ್ಗೆ ವಿವಾದವೆದ್ದಿದೆ. ಭಾನುವಾರ ಪಾರ್ಕ್ ಉದ್ಘಾಟನೆ ಮಾಡಲು ಮುಂದಾಗಿದ್ದ ಸ್ಥಳೀಯ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದು, ನಂತರ ಬಿಡುಗಡೆ ಮಾಡಿದ್ದಾರೆ. ಪಾರ್ಕ್ ಸುತ್ತ-ಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ನಾಗರಬಾವಿಯಲ್ಲಿರುವ ಚಂದ್ರಗಿರಿ ಪಾರ್ಕ್ ಉದ್ಘಾಟನೆ ಸಮಾರಂಭವನ್ನು ಭಾನುವಾರ ಏರ್ಪಡಿಸಲಾಗಿತ್ತು. ಆದರೆ, ಕಾರ್ಯಕ್ರಮ ಸಂಬಂಧ ಶಾಸಕ ಪ್ರಿಯಾಕೃಷ್ಣಾ ಮತ್ತು ಕಾರ್ಪೋರೇಟರ್ ಉಮೇಶ್ ಶೆಟ್ಟಿ ನಡುವೆ ವಾಗ್ವಾದ ಉಂಟಾಗಿದೆ. ಇದು ವಿಕೋಪಕ್ಕೆ ಹೋದ ಹಿನ್ನಲೆಯಲ್ಲಿ ಕಾರ್ಯಕ್ರಮ ರದ್ದಾಗಿದೆ. [ಹೇಗಿದೆ ಗೊತ್ತಾ ಚಂದ್ರಗಿರಿ ಪಾರ್ಕ್]

Chandragiri Park

ಇಂದು ಪಾರ್ಕ್ ಉದ್ಘಾಟನೆ ಮಾಡಲು ಮುಂದಾಗಿದ್ದ ಬಿಬಿಎಂಪಿ ನಗರ ಯೋಜನಾ ಸ್ಥಾಯಿಸಮಿತಿ ಅಧ್ಯಕ್ಷ ಮತ್ತು ನಾಗರಬಾವಿ ಪಾಲಿಕೆ ಸದಸ್ಯ ಕೆ. ಉಮೇಶ್‌ ಶೆಟ್ಟಿ ಅವರನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದು ನಂತರ ಬಿಡುಗಡೆ ಮಾಡಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭಾನುವಾರ ಪಾರ್ಕ್ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪಾರ್ಕ್ ಸುತ್ತಮುತ್ತ ಭದ್ರತೆಗಾಗಿ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಪ್ರಿಯಕೃಷ್ಣ ಅವರನ್ನು ಆಹ್ವಾನಿಸಿಲ್ಲ ಎಂಬುದು ಗೊಂದಲಕ್ಕೆ ಕಾರಣವಾಗಿದೆ. ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಬಿಜೆಪಿಯವರಾಗಿದ್ದು, ಶಾಸಕ ಪ್ರಿಯ ಕೃಷ್ಣ ಕಾಂಗ್ರೆಸ್ ಪಕ್ಷದವರು ಆದ್ದರಿಂದ ಇಬ್ಬರ ನಡುವೆ ವಾಗ್ವದ ನಡೆದಿದೆ.

ಕಾಂಗ್ರೆಸ್ ಕಾರ್ಯಕ್ರಮ : ಪಾರ್ಕ್ ಉದ್ಘಾಟನಾ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮವಾಗಿ ನಡೆಸಲಾಗುತ್ತಿದೆ. ಬಿಬಿಎಂಪಿಯಿಂದ ಪಾರ್ಕ್ ಉದ್ಘಾಟನೆ ಮಾಡುತ್ತಿರಲಿಲ್ಲ. ಕಾರ್ಯಕ್ರಮದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಯಾರೂ ನನಗೆ ಉದ್ಘಾಟನೆಯ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ಶಾಸಕ ಪ್ರಿಯಾಕೃಷ್ಣಾ ದೂರಿದ್ದಾರೆ.

Nagarbhavi

ಮಾಜಿ ಸಚಿವ ವಿ.ಸೋಮಣ್ಣ ವಿವಾದದ ಬಗ್ಗೆ ಹೇಳಿಕೆ ನೀಡಿದ್ದು, ಸೆಪ್ಟೆಂಬರ್ 4ರಂದು ಪಾರ್ಕ್ ಉದ್ಘಾಟನೆ ಮಾಡುತ್ತೇವೆ. ಮತ್ತೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಶಾಸಕರು ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡುತ್ತೇವೆ ಎಂದು ಹೇಳಿದ್ದಾರೆ. ಆ.24ರಂದು ಪಾರ್ಕ್ ಉದ್ಘಾಟನೆಯಾಗಬೇಕಿತ್ತು. ಆದರೆ, ಅದನ್ನು ಸಹ ಮುಂದೂಡಲಾಗಿತ್ತು.

ಪಾರ್ಕ್ ಉದ್ಘಾಟನೆ ಮುಂದೂಡಿರುವುದಕ್ಕೆ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
The Bruhat Bengaluru Mahanagara Palike (BBMP) Chandragiri Park sparks controversy. By the verbal clash between Nagarbhavi Corporator K. Umesh Shetti and Govindrajnagar MLA Priya Krishna park inauguration function postponed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X