ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯಸಭೆ ಚುನಾವಣೆ ಕಣಕ್ಕಿಳಿದ ಪ್ರೊ.ರಾಜೀವ್ ಗೌಡ

|
Google Oneindia Kannada News

ಬೆಂಗಳೂರು, ಜೂ.9 : ಕರ್ನಾಟಕದ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗಾಗಿ ಐಐಎಂಬಿಯಲ್ಲಿ ಪ್ರೊಫೆಸರ್ ಡಾ.ಎಂ.ವಿ.ರಾಜೀವ್ ಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಜೂ.19ರಂದು ಈ ಚುನಾವಣೆ ನಡೆಯಲಿದೆ.

ಸೋಮವಾರ ವಿಧಾನಸಭೆ ಕಾರ್ಯದರ್ಶಿ ಮತ್ತು ರಾಜ್ಯಸಭೆ ಚುನಾವಣಾಧಿಕಾರಿ ಓಂ ಪ್ರಕಾಶ್ ಅವರಿಗೆ ಪ್ರೊ.ರಾಜೀವ್ ಗೌಡ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮುಂತಾದ ನಾಯಕರು ಉಪಸ್ಥಿತರಿದ್ದರು.

MV Rajeev Gowda

ಐಐಎಂಬಿಯಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಜೀವ್ ಗೌಡ (50) ಅವರು ರಾಜಕೀಯ ಹಿನ್ನೆಲೆಯನ್ನೂ ಹೊಂದಿದ್ದಾರೆ. ಮಾಜಿ ಸ್ಪೀಕರ್ ಎಂ.ವಿ. ವೆಂಕಟಪ್ಪ ಪುತ್ರರಾಗಿರುವ ಇವರು ಹಲವಾರು ವರ್ಷಗಳಿಂದ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಕರ್ನಾಟಕದ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. [ಎಸ್.ಎಂ.ಕೃಷ್ಣ ಕೈತಪ್ಪಿದ ರಾಜ್ಯಸಭೆ ಟಿಕೆಟ್]

ಪ್ರೊ.ರಾಜೀವ್ ಗೌಡ ಅವರು ಸಾರ್ವಜನಿಕ ನೀತಿ (Public Policy) ವಿಷಯದಲ್ಲಿ ವಾರ್ಟನ್ ಸ್ಕೂಲ್ ನಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಹಲವಾರು ವರ್ಷಗಳ ಕಾಲ ಅಮೆರಿಕಾದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 2000ನೇ ವರ್ಷದಿಂದ ಬೆಂಗಳೂರಿನ ಐಐಎಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, India - Women in Leadership ಎಂಬ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.

2013ರಿಂದ ರಾಷ್ಟ್ರೀಯ ಮಾಧ್ಯಮಗಳಲ್ಲಿ ಕರ್ನಾಟಕ ಕಾಂಗ್ರೆಸ್ ಪರವಾದ ಸಂವಾದಗಳಲ್ಲಿ ಭಾಗವಹಿಸುವ ಮೂಲಕ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಟ್ವಿಟರ್ ಮತ್ತು ಫೇಸ್ ಬುಕ್ ಗಳಲ್ಲಿ ಸಕ್ರಿಯರಾಗಿರುವ ಕರ್ನಾಟಕದ ರಾಜಕಾರಣಿಗಳಲ್ಲಿ ರಾಜೀವ್ ಗೌಡ ಅವರು ಸಹ ಒಬ್ಬರು. [ರಾಜೀವ್ ಗೌಡ ಅವರ ವೆಬ್ ಸೈಟ್]

English summary
IIM Professor Dr. M.V. Rajeev Gowda (@rajeevgowda) filed his nomination papers for a Rajya Sabha election from Karnataka on Monday, June 9. The occasion was graced by the CM Siddaramiah and KPCC President Dr. G. Parameshwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X