ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಸ್ತುತ ಸಮಸ್ಯೆಗಳು ಪ್ರಾಚೀನ ಪರಿಹಾರ : ಭೈರಪ್ಪ

By Mahesh
|
Google Oneindia Kannada News

ಬೆಂಗಳೂರು, ಅ.18: ಸಂಸ್ಕೃತಿ ಭಾರತಿ ರಾಷ್ಟ್ರೀಯ ಸಮಾವೇಶ ನಗರದ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಜಾರಿಯಲ್ಲಿದೆ. ಉಡುಪಿಯ ಪೇಜಾವರದ ವಿಶ್ವೇಶತೀರ್ಥ ಸ್ವಾಮಿಗಳು ಈ ಸಮಾವೇಶವನ್ನು ಇಂದು ಉದ್ಘಾಟಿಸಿದ್ದಾರೆ.

ಸಂಸ್ಕೃತಿ ಭಾರತಿ ರಾಷ್ಟ್ರೀಯ ಸಮಾವೇಶ ಉದ್ಘಾಟನೆಗೂ ಮುನ್ನ ರವಿಶಂಕರ್ ಗುರೂಜಿ ಅವರ ಉಪಸ್ಥಿತಿಯಲ್ಲಿ ರುದ್ರಪೂಜೆ, ದೇವಿ ಪೂಜೆ ನಡೆಸಲಾಯಿತು. ನಂತರ ಬೆಳಗ್ಗೆ 10.30ರ ಸುಮಾರಿಗೆ ಪೇಜಾವರಶ್ರೀಗಳಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಮಾವೇಶದ ಅಂಗವಾಗಿ ಶನಿವಾರ(ಅ.19) ರಂದು 'ಪ್ರಸ್ತುತ ಸಮಸ್ಯೆಗಳಿಗೆ ಪ್ರಾಚೀನ ಪರಿಹಾರ' ಎಂಬ ವಿಷಯದ ಮೇಲೆ ಮೂವರು ಗಣ್ಯರು ಉಪನ್ಯಾಸ ನೀಡಲಿದ್ದಾರೆ. ಸಂಸ್ಕೃತಿ ಭಾರತಿ ಸಹ ಸ್ಥಾಪಕ ಚಮು ಕೃಷ್ಣಮೂರ್ತಿ, ಜನಪ್ರಿಯ ಸಾಹಿತಿ ಎಸ್ ಎಲ್ ಭೈರಪ್ಪ, ಆರ್ಥಿಕ ತಜ್ಞ, ರಾಜಕಾರಣಿ ಸುಬ್ರಮಣ್ಯ ಸ್ವಾಮಿ ಅವರು ಉಪನ್ಯಾಸ ನೀಡಲಿದ್ದಾರೆ.

Modern Problems and Ancient Solutions - A Special Talk show at AOL Ashram

ಸ್ಥಳ : ಆರ್ಟ್ ಆಫ್ ಲಿವಿಂಗ್ ಆಶ್ರಮ,
ವೇದ ವಿಜ್ಞಾನ ಮಹಾವಿದ್ಯಾಪೀಠ, 21ನೇ ಕಿ.ಮೀ
ಕನಕಪುರ ರಸ್ತೆ, ಉದಯಪುರ
ಬೆಂಗಳೂರು-560 082
ಸಮಯ : ಸಂಜೆ 4 ಗಂಟೆಯಿಂದ 6 ಗಂಟೆಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 94480 57557/ 94835 01353/ 98860 66630

ಉಪನ್ಯಾಸಕರು
ಡಾ. ಎಸ್ ಎಲ್ ಭೈರಪ್ಪ: ಕನ್ನಡದ ಅತ್ಯಂತ ಜನಪ್ರಿಯ ಸಾಹಿತಿಯಾಗಿದ್ದಾರೆ. ಸುಮಾರು 50 ವರ್ಷಗಳಿಂದ ಹಲವು ಉತ್ತಮ ಕಾದಂಬರಿ, ಸಾಹಿತ್ಯ ಕೃತಿಗಳನ್ನು ಓದುಗರಿಗೆ ನೀಡುತ್ತಾ ಬಂದಿದ್ದಾರೆ. ಇವರ ಕೃತಿಗಳು ಮರಾಠಿ, ಸಂಸ್ಕೃತ, ಇಂಗ್ಲೀಷ್ ಸೇರಿದಂತೆ ಅನೇಕ ಭಾಷೆಗೆ ಅನುವಾದಗೊಂಡಿದೆ. 2010ರಲ್ಲಿ ಮಂದ್ರ ಕಾದಂಬರಿಗಾಗಿ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ಚಮು ಕೃಷ್ಣಶಾಸ್ತ್ರಿ : ಸಂಸ್ಕೃತ ಸಂಭಾಷಿಣಿ ಚಳವಳಿ ಹುಟ್ಟು ಹಾಕಿದವರಲ್ಲಿ ಇವರು ಪ್ರಮುಖರು. ಬೆಂಗಳೂರಿನ ಗಿರಿನಗರದಲ್ಲಿರುವ ಸಂಸ್ಕೃತ ಭಾರತಿ ಸಹ ಸ್ಥಾಪಕರು. ನವದೆಹಲಿಯ ಸಂಸ್ಕೃತ ಪ್ರಚಾರ ಸಮಿತಿಯ ಕಾರ್ಯದರ್ಶಿಯಾಗಿದ್ದಾರೆ. ಸಂಸ್ಕೃತ ಸಂಭಾಷಣ ಶಿಬಿರಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದಾರೆ.

ಸುಬ್ರಮಣ್ಯ ಸ್ವಾಮಿ : ಡಾ. ಸುಬ್ರಮಣ್ಯ ಸ್ವಾಮಿ ಅವರು ವಿಶ್ವಮಟ್ಟದ ಆರ್ಥಿಕ ತಜ್ಞರಾಗಿದ್ದು, ಚಿಂತಕ, ರಾಜಕಾರಣಿ, ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರಾಗಿದ್ದಾರೆ. ಹಾರ್ವಡ್ ವಿವಿ ಸೇರಿದಂತೆ ಅನೇಕ ವಿಶ್ವವಿದ್ಯಾಲಯಗಳಿಗೆ ಸಂದರ್ಶನ ಉಪನ್ಯಾಸಕರಾಗಿದ್ದಾರೆ. ಇತ್ತೀಚೆಗೆ ತಮ್ಮ ಜನತಾ ಪಾರ್ಟಿಯನ್ನು ಬಿಜೆಪಿ ಜತೆ ವಿಲೀನಗೊಳಿಸಿದ್ದಾರೆ.

English summary
"Modern Problems and Ancient Solutions" - A Special Talk by Dr. S.L. Bhairappa, Dr. Subramanian Swamy and Cha.Mu. Krishnashastry on 19th Oct, 4PM to 6PM at 'Art of Living' Centre, Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X