ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಷ್ಣು ಪ್ರೀತಿ, ಸ್ನೇಹ ನನ್ನ ಜೀವಮಾನದ ಸಾಧನೆ

|
Google Oneindia Kannada News

ಬೆಂಗಳೂರು, ಆ.14 : ವಸತಿ ಸಚಿವ ಮತ್ತು ಹಿರಿಯ ನಟ ಅಂಬರೀಶ್ ಅವರಿಗೆ ಡಾ.ವಿಷ್ಣುವರ್ಧನ್ ಜೀವಿತಾವಧಿ ಕೊಡುಗೆ ಪ್ರಶಸ್ತಿಯನ್ನು ಬುಧವಾರ ಪ್ರಧಾನ ಮಾಡಲಾಯಿತು. ಫೆಬ್ರವರಿಯಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಂಬರೀಷ್ ಅವರಿಗೆ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.

ಬುಧವಾರ ಜೆ.ಪಿನಗರದಲ್ಲಿರುವ ಸಚಿವ ಅಂಬರೀಶ್ ಅವರ ನಿವಾಸದಲ್ಲಿ ವಾರ್ತಾ ಸಚಿವ ರೋಷನ್ ಬೇಗ್ ಅವರು, ಸರ್ಕಾರದ ಪರವಾಗಿ ಅಂಬರೀಶ್ ಅವರಿಗೆ 2010-11ನೇ ಸಾಲಿನ ಡಾ.ವಿಷ್ಣುವರ್ಧನ್ ಜೀವಿತಾವಧಿ ಕೊಡುಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಚಿವ ಅಂಬರೀಶ್, ಪ್ರಶಸ್ತಿ ಪಡೆದಿರುವುದಕ್ಕೆ ಸಂತಸವಾಗಿದೆ. ನನ್ನ ಮನೆ, ಗೆಳೆಯ ವಿಷ್ಣು ಮನೆ ಎರಡೂ ಒಂದೇ. ಸರ್ಕಾರದ ವತಿಯಿಂದ ಮನೆಯಲ್ಲೇ ಪ್ರಶಸ್ತಿ ನೀಡಿ ಗೌರವಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಶಸ್ತಿ ಪಡೆದ ಸಂಸತವಿದ್ದರೂ, ಅವನಿಲ್ಲದಾಗ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ನೋವಿದೆ ಎಂದು ಅಂಬರೀಶ್ ಹೇಳಿದರು.

"ನಾನು ಮತ್ತು ವಿಷ್ಟು ಒಟ್ಟಿಗೆ ಚಿತ್ರರಂಗಕ್ಕೆ ಬಂದೆವು. ವಿಷ್ಣು ನಾಯಕನಾಗಿ, ನಾನು ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿದೆವು. ಇಬ್ಬರು ಒಂದೇ ನಾಣ್ಯದ ಎರಡು ಮುಖದಂತೆ ಇದ್ದೆವು. ವಿಷ್ಣುವಿನೊಡನೆ ಪ್ರೀತಿ, ವಿಶ್ವಾಸದಿಂದ ಇದ್ದುದೇ ಜೀವಮಾನದ ಸಾಧನೆ ಎಂದು ಭಾವಿಸಿದ್ದೇನೆ,'' ಎಂದರು.

ಎರಡು ಲಕ್ಷ ದೇಣಿಗೆ : ಪ್ರಶಸ್ತಿ ಜೊತೆ ಸರ್ಕಾರ ನೀಡಿದ ಎರಡು ಲಕ್ಷ ರೂ. ನಗದು ಪುರಸ್ಕಾರವನ್ನು ಅಂಬರೀಶ್ ಅವರು ವಿಷ್ಣುವರ್ಧನ್ ಸ್ಮಾರಕ ಟ್ರಸ್ಟ್‌ಗೆ ದೇಣಿಗೆಯಾಗಿ ನೀಡಿದರು. ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ಚೆಕ್ ಹಸ್ತಾಂತರಿಸಿದರು.

Vishnuvardhan

ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ, ವಿಷ್ಣುವರ್ಧನ್ ಅವರ ಪುತ್ರಿ ಕೀರ್ತಿ, ಅಳಿಯ ಅನಿರುದ್ಧ್, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
Actor and Housing Minister Ambareesh honored with Vishnuvardhan Award ON Wednesday, August 13. Minister for Information, Infrastructure and Haj, R. Roshan Baig distributed award at Ambareesh house at JP Nagar Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X