ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಣದ ವಿಚಾರಕ್ಕೆ ಗಲಾಟೆ, ಮಾವನನ್ನು ಕೊಂದ ಅಳಿಯ

|
Google Oneindia Kannada News

ಬೆಂಗಳೂರು, ಜು.20 : ಮಾವನನ್ನು ಕೊಲೆ ಮಾಡಿ, ಪತ್ನಿಯ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಬೆಂಗಳೂರಿನ ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಮಾವನನ್ನು ಕೊಲೆ ಮಾಡಿದ ಆರೋಪಿಯನ್ನು ನಂಜನಗೂಡು ತಾಲೂಕಿನ ಕಿನ್ನಾರ ಗ್ರಾಮದ ಕೈಲಾಸಮೂರ್ತಿ ಎಂದು ಗುರುತಿಸಲಾಗಿದೆ. ಮೃತಪಟ್ಟವರನ್ನು ಮೂರ್ತಪ್ಪ (80) ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವವರು ಕಲ್ಪನಾ (42) ಎಂದು ತಿಳಿದುಬಂದಿದೆ.

arrest

ಹೊಸಕೋಟೆ ತಾಲೂಕು ಸುತ್ತೂರು ಗ್ರಾಮದ ಮೂರ್ತಪ್ಪನ ಮಗಳು ಕಲ್ಪನಾಳನ್ನು ಕೈಲಾಸ ಮೂರ್ತಿ 25 ವರ್ಷಗಳ ಹಿಂದೆ ವಿವಾಹವಾಗಿದ್ದ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಹಣಕಾಸಿನ ವಿಚಾರದಲ್ಲಿ ನಡೆದ ಕಲಹ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ : ಕೈಲಾಸಮೂರ್ತಿ ಹಲವು ವರ್ಷಗಳಿಂದ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರು. ಆದ್ದರಿಂದ ಪತ್ನಿ ಕಲ್ಪನಾ ಬೇರೆ ಮನೆ ಮಾಡುವಂತೆ ಗಂಡನೊಂದಿಗೆ ಜಗಳವಾಡುತ್ತಿದ್ದಳು. ಕೆಲವು ದಿನಗಳ ಹಿಂದೆ ಕೈಲಾಸಮೂರ್ತಿ ಆಸ್ತಿ ಮಾರಿ 40 ಲಕ್ಷ ರೂ.ಗಳನ್ನು ಪತ್ನಿಗೆ ನೀಡಿದ್ದ.

ಹಣದೊಂದಿಗೆ ತವರು ಮನೆ ಸೇರಿದ್ದ ಕಲ್ಪನಾ ಹಣವನ್ನು ಯುಟಿಸಿ ಗ್ರೂಪ್‌ ನಲ್ಲಿ ಹೂಡಿಕೆ ಮಾಡಿದ್ದಳು. ಹಣದ ಬಗ್ಗೆ ಗಂಡ ಕೈಲಾಸಮೂರ್ತಿ ವಿಚಾರಿಸಿದಾಗ ಕಲ್ಪನಾ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ. ಅಲ್ಲದೆ ಮನೆಗೆ ಬರುವಂತೆ ಕರೆದರೂ ನಿರಾಕರಿಸುತ್ತಿದ್ದಳು.

ಮೂರು ದಿನಗಳ ಹಿಂದೆ ತಂದೆ ಮೂರ್ತಪ್ಪ ಅವರೊಂದಿಗೆ ಬೆಂಗಳೂರಿಗೆ ಬಂದಿದ್ದ ಕಲ್ಪನಾ ಸುಂಕದಕಟ್ಟೆಯಲ್ಲಿನ ಶೋಭಾ ಲಾಡ್ಜ್‌ ನಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ಅಪ್ಪ ಮತ್ತು ಮಗಳು ಬಡ್ಡಿ ಹಣವನ್ನು ಪಡೆದುಕೊಂಡಿದ್ದರು. ಆದರೆ, ಆ ಬಗ್ಗೆ ಕಲ್ಪನಾ ಗಂಡನಿಗೆ ಮಾಹಿತಿ ನೀಡಿರಲಿಲ್ಲ.

ಪತ್ನಿ, ಮಾವ ಬೆಂಗಳೂರಿಗೆ ಬಂದ ವಿಚಾರ ತಿಳಿದು ಕೈಲಾಸಮೂರ್ತಿ ಶನಿವಾರ ರಾತ್ರಿ ಲಾಡ್ಜ್ ಗೆ ಬಂದು ಗಲಾಟೆ ಮಾಡಿದ್ದ. ಹಣವನ್ನು ವಾಪಸ್ ನೀಡುವಂತೆ ಕೇಳಿದ್ದ. ಆದರೆ, ಮಾವ ಮತ್ತು ಪತ್ನಿ ಆತನಿಗೆ ಬೈದು ಕಳಿಸಿದ್ದರು. ಇದರಿಂದ ಕೋಪಗೊಂಡ ಕೈಲಾಮೂರ್ತಿ ಇಂದು ಬೆಳಗ್ಗೆ ಬಸ್ ನಿಲ್ದಾಣದಲ್ಲಿ ಊರಿಗೆ ಹೋಗಲು ನಿಂತಿದ್ದ ಮಾವ ಮತ್ತು ಹೆಂಡತಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಹಲ್ಲೆಯಿಂದಾಗಿ ಕಲ್ಪನಾ ಮತ್ತು ಮೂರ್ತಪ್ಪ ಅವರಿಗೆ ಗಾಯಗಳಾಗಿವೆ. ಇಬ್ಬರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆತನನ್ನು ನಿಲ್ದಾಣದಲ್ಲಿ ನಿಂತಿದ್ದ ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಾಕುವಿನಿಂದ ಹಲ್ಲೆಗೊಳಗಾದ ಮೂರ್ತಪ್ಪ ಸಾವನ್ನಪ್ಪಿದ್ದರೆ, ಕಲ್ಪನಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

English summary
Nanjanagudu resident Kailash Murthy allegedly stabbed his wife Kalpana (42) and father-in-law Murthappa (80) to death in Bangalore on Sunday morning. Murthappa died in private hospital. Kamakshipalya Police arrested Kailash Murthy and investigating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X