ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂ ದಕ್ಷಿಣ ಕಾಂಗ್ರೆಸ್‌ ಅಭ್ಯರ್ಥಿ ನಿಲೇಕಣಿ ಆಸ್ತಿ ಎಷ್ಟು ಗೊತ್ತಾ?

By Srinath
|
Google Oneindia Kannada News

ಬೆಂಗಳೂರು, ಮಾರ್ಚ್ 21: ಬೆಂಗಳೂರು ದಕ್ಷಿಣ ಕ್ಷೇತ್ರದ high-profile ಕಾಂಗ್ರೆಸ್‌ ಅಭ್ಯರ್ಥಿ ನಂದನ್‌ ನಿಲೇಕಣಿ ಅವರ ಆಸ್ತಿ ತುಂಬಾ ತುಂಬಾ ಇದೆ! ಇಂದು ಶುಕ್ರವಾರ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನವೇ ಅವರು ಸಾರ್ವಜನಿಕವಾಗಿ ತಮ್ಮ ಆಸ್ತಿ ವಿವರವನ್ನು ಬಹಿರಂಗಪಡಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನ ಕಲ್ಪಿಸಿದ ಐಟಿ ದೊರೆ ನಂದನ್‌ ನಿಲೇಕಣಿ ಅವರು ನಾಡಿನ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗುವ ಎಲ್ಲ ಲಕ್ಷಣಗಳೂ ಇವೆ. ಅಂದಹಾಗೆ, ನಿಲೇಕಣಿ ಮತ್ತು ಅವರ ಪತ್ನಿಯ ಹೆಸರಿನಲ್ಲಿ ಬರೋಬ್ಬರಿ 7,700 ಕೋಟಿ ರೂ. ಆಸ್ತಿ ಇದೆ! ಅಷ್ಟೇ ಅಲ್ಲ, ಸಮಾಜ ಸೇವೆಗೆಂದು ವಿವಿಧ ಸಂಘ ಸಂಸ್ಥೆಗಳಿಗೆ 400 ಕೋಟಿ ರೂ. ದಾನ ಮಾಡಿರುವುದಾಗಿಯೂ ನಿಲೇಕಣಿ ಹೇಳಿದ್ದಾರೆ.

ಬೆವರು ಸುರಿಸಿ ಸ್ವಯಂಕೃಷಿಯಿಂದ ಸಂಪಾದಿಸಿದ್ದು:

ನಿಲೇಕಣಿ ಅವರು ತಾವು ಈ ಆಸ್ತಿಯನ್ನು ಸಂಪಾದಿಸಿದ್ದು ಹೇಗೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಐಐಟಿಯಲ್ಲಿ ಪದವೀಧರನಾಗಿ ಹೊರಬಂದಾಗ ಕೈಯಲ್ಲಿ 200 ರೂಪಾಯಿಯಿತ್ತು. ನಂತರ ಸ್ನೇಹಿತರ ಜತೆಗೂಡಿ 10,000 ರೂಪಾಯಿಯಲ್ಲಿ ಇನ್ಫೋಸಿಸ್‌ ಎಂಬ ಕಂಪನಿಯನ್ನು ಸ್ಥಾಪಿಸಿದೆವು. ಆ ಕಂಪನಿ ಅಪಾರ ಯಶಸ್ಸು ಕಂಡಿದ್ದರಿಂದ ಇಂದು ತಮ್ಮ ಆಸ್ತಿಯೂ ವೃದ್ಧಿಯಾಗಿದೆ ಎಂಬ ಸತ್ಯವನ್ನು ಬಿಚ್ಚಿಟ್ಟಿರು. (ಅರ್ಘ್ಯಂ ಫೌಂಡೇಶನ್)
Bangalore South Congress candidate- ex Infosys Nandan Nilekani

ಅಂದಹಾಗೆ, ನಿಲೇಕಣಿ ಅವರ ಆಸ್ತಿಯಲ್ಲಿ ಹೆಚ್ಚಿನ ಪಾಲು ಅಂದರೆ ಶೇ. 80ರಷ್ಟು ಇನ್ಫೋಸಿಸ್‌ ಕಂಪನಿಯ ಷೇರುಗಳ ಮೂಲಕ ಬಂದಿರುವುದಾಗಿದೆ. ನಿಲೇಕಣಿ ಅವರು ಶೇ. 1.45 ರಷ್ಟು ಷೇರು ಹೊಂದಿದ್ದರೆ, ಅವರ ಪತ್ನಿ ರೋಹಿಣಿ ಅವರ ಹೆಸರಲ್ಲಿ ಶೇ. 1.3 ರಷ್ಟು ಷೇರುಗಳಿವೆ (ESOP). 'ತಮ್ಮೀ ಸಂಪಾದನೆ ಅತ್ಯಂತ ಪಾರದರ್ಶಕವಾಗಿದ್ದು, ಕದ್ದುಮುಚ್ಚಿಟ್ಟಿಲ್ಲ. ಯಾವುದೇ ಅಕ್ರಮಗಳಿಂದ ಸಂಪಾದಿಸಿದ್ದೂ ಅಲ್ಲ. ಆದಾಯಕ್ಕೆ ತಕ್ಕ ತೆರಿಗೆಯನ್ನೂ ಪಾವತಿಸುತ್ತಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆ ಇದೆ' ಎಂದು ಅವರು ಹೇಳಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಇನ್ಫೋಸಿಸ್‌ ಕಂಪನಿ ಸ್ಥಾಪನೆಯಿಂದ ಬಂದ ಈ ಹಣದಿಂದ ನನಗೆ ಆರ್ಥಿಕ ಸ್ವಾತಂತ್ರ್ಯ ದಕ್ಕಿದ ತೃಪ್ತಿಯಿದೆ. ಇನ್ಫೋಸಿಸ್‌ ಕಂಪನಿಕಯು ಸಾವಿರಾರು ಮಂದಿಗೆ ಸ್ವಯಂಕೃಷಿ ಕೈಗೊಳ್ಳಲು ಉತ್ತೇಜನಕಾರಿಯಾಗಿದೆ. ನಾನು ಈ ಹಣದಿಂದ ಲಕ್ಷಾಂತರ ಮಂದಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡಬೇಕೆಂದು ಬಯಸಿರುವುದಾಗಿ ಅವರು ಹೇಳಿದರು.

English summary
Lok Sabha Polls 2014- Bangalore South Congress candidate- ex Infosys Nandan Nilekani declares assets. Because of the success of a company (Infosys) built from scratch, Nandan and Rohini have assets worth Rs 7,700 crore. Also since 1999, Rohini and Nandan have donated almost Rs 400 crore of their wealth to various causes and charities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X