ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ ಚಾಲಕರ ಪ್ರತಿಭಟನೆ, ಟ್ರಾಫಿಕ್ ಜಾಮ್

|
Google Oneindia Kannada News

ಬೆಂಗಳೂರು, ಜ.25 : ಆಟೋ ಗ್ಯಾಸ್ ದರ ಇಳಿಕೆ ಮಾಡಲು ಆಗ್ರಹಿಸಿ ಆಟೋ ಚಾಲಕರು ಶನಿವಾರ ರಾಜಭವನ ಚಲೋ ಜಾಥಾ ನಡೆಸುತ್ತಿದ್ದು, ಈ ವೇಳೆ ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಅವನನ್ನು ಕೆ.ಸಿಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರ ಮಧ್ಯಾಹ್ನ ಸಿಟಿ ರೈಲ್ವೆ ನಿಲ್ದಾಣದಿಂದ ಸುಮಾರು 5000 ಆಟೋ ಚಾಲಕರು ರಾಜಭವನ ಚಲೋ ಜಾಥಾ ಆರಂಭಿಸಿದ್ದಾರೆ. ರಸ್ತೆಗಳಲ್ಲಿ ಆಟೋಗಳು ತುಂಬಿ ಹೋಗಿರುವುದರಿಂದ ಆನಂದ್ ರಾವ್ ಸರ್ಕಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

Auto

ಆಟೋ ಜಾಥಾ ಫ್ರೀಡಂ ಪಾರ್ಕ್ ಬಳಿ ಬರುತ್ತಿದ್ದಂತೆ, ಚಾಲಕ ಲಕ್ಷ್ಮಿ ನಾರಾಯಣ್ ಎಂಬಾತ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಆತನನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. [ಗ್ಯಾಸ್ ದರ ಏರಿಕೆ ಚಾಲಕರಿಗೆ ಶಾಕ್]

ಆಟೋ ಗ್ಯಾಸ್ ದರ ಏರಿಕೆ ಖಂಡಿಸಿ ಹಲವು ದಿನಗಳಿಂದ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಚಾಲಕರೊಂದಿಗೆ ಮಾತುಕತೆಗೆ ಮುಂದಾಗಿಲ್ಲ. ಒಂದು ದಿನ ಆಟೋ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರೂ ಸರ್ಕಾರ ಸಮಸ್ಯೆಗೆ ಸ್ಪಂದಿಸಿಲ್ಲ. ಆದ್ದರಿಂದ ಚಾಲಕರು ಶನಿವಾರ ರಾಜಭವನ ಚಲೋ ಜಾಥಾ ಹಮ್ಮಿಕೊಂಡಿದ್ದಾರೆ.[ಆಟೋ ಸಂಚಾರ ಸ್ಥಗಿತ, ಚಾಲಕರ ಪ್ರತಿಭಟನೆ]

ಕೇಂದ್ರ ಸರ್ಕಾರ ಆಟೋ ಚಾಲಕರಿಗೆ ಹೊಸ ವರ್ಷದಂದು ಗ್ಯಾಸ್ ದರ ಹೆಚ್ಚಳಮಾಡಿ ಶಾಕ್ ನೀಡುತ್ತು. ಡಿ.31ರಂದು ಸರ್ಕಾರ ಹೊರಡಿಸಿದ ಆದೇಶದಂತೆ ಗ್ಯಾಸ್ ದರ 11.50 ರೂ ಹೆಚ್ಚಾಗಿದೆ. ಇದರಿಂದ ನಮಗೆ ನಷ್ಟ ಉಂಟಾಗುತ್ತಿದೆ. ಗ್ಯಾಸ್ ದರ ಕಡಿಮೆ ಮಾಡಿ ಎಂದು ಚಾಲಕರು ಪ್ರತಿಭಟನೆ ನಡೆಸುತ್ತಿದ್ದರು. ಪ್ರಯಾಣ ದರ ಹೆಚ್ಚಳಕ್ಕೆ ಅವಕಾಶ ಕೊಡಿ, ಇಲ್ಲವೇ ಗ್ಯಾಸ್ ದರ ಕಡಿಮೆ ಮಾಡಿ ಎಂದು ಚಾಲಕರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಡಿ.25ರಿಂದ ಆಟೋ ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ. ಆದ್ದರಿಂದ ದರ ಹೆಚ್ಚಳಕ್ಕೆ ಅನುಮತಿ ನೀಡಿಲ್ಲ. ಆದರೆ, ಮೈಸೂರಿನಲ್ಲಿ ಕನಿಷ್ಠ ಪ್ರಯಾಣದರವನ್ನು 25ರೂ.ಗಳಿಗೆ ಹೆಚ್ಚಿಸಲಾಗಿದೆ. ಗ್ಯಾಸ್ ದರ ಕಡಿತಗೊಳಿಸದ ಸರ್ಕಾರದ ನಿರ್ಧಾರವನ್ನು ಖಂಡಿಸಿ ಚಾಲಕರು ರಾಜಭವನ ಚಲೋ ಜಾಥಾ ಹಮ್ಮಿಕೊಂಡಿದ್ದಾರೆ. [ಮೈಸೂರಿನಲ್ಲಿ ಆಟೋ ದರ ಹೆಚ್ಚಳ]

English summary
More than 5000 auto drivers rally in Bangalore protest against the sudden hike in auto LPG prices. Auto drivers rally will ends in Raj Bhavan and they submit memorandum for governor. By the rally traffic jam near traffic Majestic and Anand Rao Circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X