ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂಸೆಯ ನೆಲೆ ಹೆಣ್ಣೇ? ಸುಚಿತ್ರಾದಲ್ಲಿ ವಿಶಿಷ್ಟ ಕಾರ್ಯಕ್ರಮ

By Mahesh
|
Google Oneindia Kannada News

ಬೆಂಗಳೂರು, ಜು.17: ಮಹಿಳೆಯರ ಮೇಲಿನ ಅತ್ಯಾಚಾರ ಕುರಿತಾಗಿ ವಿವಿಧ ಸಮಾಜಗಳ ಮನೋಭಾವ ಕುರಿತು ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ, ಸಮುದಾಯ ಹಾಗೂ ಇನ್ನಿತರ ಸಂಸ್ಥೆಗಳು ಮೂರು ದಿನಗಳ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದೆ.

ಜು.18ರಿಂದ ಮಹಿಳಾ ದೌರ್ಜನ್ಯ, ರಕ್ಷಣೆ ವಿಧಾನಗಳು, ಯುದ್ಧಗಳಲ್ಲಿ ಹೆಣ್ಣಿನ ಬಳಕೆ, ಕಾನೂನು ಕುರಿತಾಗಿ ವಿಚಾರ ಸಂಕಿರಣ, ಬೀದಿ ನಾಟಕ, ಸಂವಾದ ಕಾರ್ಯಕ್ರಮಗಳು ಬನಶಂಕರಿ 2ನೇ ಹಂತದ 9ನೇ ಮುಖ್ಯರಸ್ತೆಯಲ್ಲಿರುವ ಸುಚಿತ್ರಾ ಸಂಸ್ಥೆ ಆವರಣದಲ್ಲಿ ನಡೆಯಲಿದೆ. ಮೊದಲೆರಡು ದಿನ ಸಂಜೆ 5 ಗಂಟೆಯಿಂದ ಸಾಕ್ಷ್ಯಚಿತ್ರ ಪ್ರದರ್ಶನವಿರುತ್ತದೆ. ಭಾನುವಾರ ಬೆಳಗ್ಗೆ 11 ರಿಂದ ವಿವಿಧ ಕಾರ್ಯಕ್ರಮಗಳು ಜರುಗಲಿವೆ.[ಅತ್ಯಾಚಾರ ಪ್ರಕರಣ : ಯಾರು, ಏನು ಹೇಳಿದರು? ]

ವಿವಾದಕ್ಕೆ ಆಸ್ಪದ ಕೊಡದಂಥ ಮಾತೆಂದರೆ, ಯಾವುದೇ ರಾಜಕೀಯ ಅಥವಾ ಸಾಮಾಜಿಕ ದೃಷ್ಟಿಕೋನದಿಂದ ಗಮನಿಸಿದರೂ ಹಿಂಸೆಯ ನೆಲೆ ಹೆಣ್ಣಿನ ದೇಹವೇ ಎಂಬುದು...

Locating Violence on Women Seminar poetry street play Suchitra

ಹೆಣ್ಣಿನ ಮೇಲಿನ ದೌರ್ಜನ್ಯಗಳ ಬಗ್ಗೆ ಇರುವ ತಾತ್ಸಾರ ಮನೋಭಾವ, ಚರಿತ್ರೆಯಲ್ಲಿ ನಡೆದ ಹೆಣ್ಣಿನ ವಿರುದ್ಧ ದೌರ್ಜನ್ಯ ಹಾಗೂ ಮನುಷ್ಯ ಸಂಸ್ಕೃತಿಯಲ್ಲಿ ಅದರ ಬಗ್ಗೆ ಇರುವ ನಂಬಿಕೆಗಳು..ಹೆಣ್ಣಿಗಿರುವ ರಕ್ಷಣೆಯ ವಿಧಾನಗಳು, ಯುದ್ಧ ಮತ್ತು ನರಮೇಧಗಳಲ್ಲಿ ಅತ್ಯಾಚಾರಗಳನ್ನು ಅಸ್ತ್ರದಂತೆ ಉಪಯೋಗಿಸಿರುವುದು, ಸಾಮಾನ್ಯವಾಗಿ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಬಹುದಾದ ದಾರಿಗಳು, ದೌರ್ಜನ್ಯಗಳ ಬಗ್ಗೆ ನಡೆಯುತ್ತಿರುವ ಸಮಕಾಲೀನ ಚರ್ಚೆಗಳು, ಕಾನೂನು, ಮಸೂದೆಗಳು.. ಇವೆಲ್ಲ ವಿಷಯಗಳ ಕುರಿತು ಸುಚಿತ್ರಾ ಫಿಲ್ಮ್ ಸೊಸೈಟಿಯು ಇದೇ ವಾರಾಂತ್ಯದಲ್ಲಿ, ಚಲನಚಿತ್ರ, ಸಾಕ್ಷ್ಯಚಿತ್ರ ಪ್ರದರ್ಶನ, ತಜ್ಞರೊಂದಿಗೆ ವಿಚಾರ ಸಂಕಿರಣ, ಬೀದಿ ನಾಟಕ ಹೀಗೆ 3 ದಿನಗಳ ಕಾರ್ಯಕ್ರಮವನ್ನು ಆಯೋಜಿಸಿದೆ.

ಸುಚಿತ್ರಾದ ಜೊತೆಗೆ ಸಮುದಾಯ ಸಂಘಟನೆ, Concern India Foundation ಹಾಗೂ International Association of Women in Radio and Television (IAWRT) ಸಂಸ್ಥೆಗಳೂ ಕೂಡ ಕೈ ಜೋಡಿಸಿವೆ. ನಾಗರೀಕ ಸಮಾಜದ ನಾವೆಲ್ಲರೂ ಕೈ ಜೋಡಿಸಬೇಕಾದ ಕಾರ್ಯಕ್ರಮವಿದು.ಹೆಚ್ಚಿನ ಮಾಹಿತಿಗೆ ಫೇಸ್ ಬುಕ್ ಇವೆಂಟ್ ಪುಟ ನೋಡಬಹುದು.

English summary
Samudaya, Concern India Foundation, International Association of Women in Radio & Television (IAWRT) have come together with Suchitra Cinema and Cultural Academy to present a three-day consultation on the question with screening of short and documentary cinema, an exhibition of gender-prejudicial advertising, an evening of poetry and a seminar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X