ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಹಂಕ ಬಳಿ ಚಿರತೆ ಪತ್ತೆ, ಗ್ರಾಮಸ್ಥರಲ್ಲಿ ಆತಂಕ

|
Google Oneindia Kannada News

ಬೆಂಗಳೂರು, ಆ.20 : ಯಲಹಂಕ ಸಮೀಪದ ದಾಸನಪುರ ಹೋಬಳಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಎರಡು ಹಸು, ಒಂದು ನಾಯಿ ಮತ್ತು ಎರಡು ಮೇಕೆಗಳು ಚಿರತೆ ಬಾಯಿಗೆ ಆಹಾರವಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಚಿರತೆ ಹಿಡಿಯಲು ಬೋನು ಅಳವಡಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಚಿರತೆ ದಾಸನಪುರ ಗ್ರಾಮದ ಸುತ್ತ ಸಂಚರಿಸುತ್ತಿದ್ದು, ಮಂಗಳವಾರ ಸಂಜೆ ಹೆಸರಘಟ್ಟ ಕೆರೆಯ ಬಳಿ ಎರಡು ಹಸುಗಳನ್ನು ತಿಂದು ಹಾಕಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ದಾಸನಪುರ ಹೋಬಳಿಯ ಶಿವನಹಳ್ಳಿಯಲ್ಲಿ ಐದು ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಿತ್ತು. ನಂತರ ಮೇಕೆ, ಹಸು ಮತ್ತು ನಾಯಿಯನ್ನು ತಿಂದುಹಾಕಿದೆ.

Leopard

ಹೆಸರಘಟ್ಟ ಕೆರೆ ಬಳಿ ಸೊನ್ನೇನಹಳ್ಳಿಯ ಹನುಮಂತರಾಯಪ್ಪ ಅವರಿಗೆ ಸೇರಿದ ಎರಡು ಹಸುಗಳನ್ನು ಚಿರತೆ ಕೊಂದು ಹಾಕಿದೆ. ಚಿರತೆ ಸಂಚಾರದ ಬಗ್ಗೆ ಗ್ರಾಮಸ್ಥರು ಪ್ರಾಣಿ ದಯಾಸಂಘದವರು ಹಾಗೂ ಬನ್ನೇರುಘಟ್ಟದ ಪ್ರಾಣಿತಜ್ಞರಿಗೆ ಮಾಹಿತಿ ನೀಡಿದ್ದಾರೆ. [ಚಿರತೆ ದಾಳಿ: ಮಗನನ್ನು ರಕ್ಷಿಸಿ ತಾನು ಸತ್ತ ಅಪ್ಪ]

ಬುಧವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಬನ್ನೇರುಘಟ್ಟದ ತಜ್ಞರು ಚಿರತೆಯ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿದ್ದಾರೆ. ಅರಣ್ಯಾಧಿಕಾರಿ ಶಿವರಾಮ್ ಹಾಗೂ ಪಶು ವೈದ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರಿಗೆ ಚಿರತೆಯನ್ನು ಸೆರೆ ಹಿಡಿಯುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಚಿರತೆಯ ಚಲನವಲನ ಸೆರೆ ಹಿಡಿಯಲು ಗೊಲ್ಲರಹಳ್ಳಿ, ಕೇಜಿಲಕ್ಕನಹಳ್ಳಿ ಹಾಗೂ ಹೆಸರಘಟ್ಟ ಕೆರೆಗಳಲ್ಲಿ 12 ಸಿಸಿಟಿವಿಗಳನ್ನು ಹಾಕಲಾಗಿದೆ. ಕೇಜಿಲಕ್ಕನಹಳ್ಳಿಯಲ್ಲಿ ಎರಡು ಬೋನುಗಳನ್ನು ಇಡಲಾಗಿದೆ. ಕಳೆದ ಹತ್ತು ತಿಂಗಳ ಹಿಂದೆ ಹೆಸರುಘಟ್ಟ ಬಳಿ ಆಳವಡಿಸಿದ್ದ ಸಿಸಿಟಿವಿಯಲ್ಲಿ ಚಿರತೆ ಸಂಚರಿಸುವ ದೃಶ್ಯ ಸೆರೆಯಾಗಿತ್ತು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

English summary
Leopard found near Dasanapura Hobli, Yelahanka near Bangalore. Forest Dept officers visited the place and investigating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X