ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿವಿಯ 12 ಕಾಲೇಜುಗಳಿಗೆ ಬೀಗ?

|
Google Oneindia Kannada News

ಬೆಂಗಳೂರು, ಆ. 26 : ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವ ಬೆಂಗಳೂರು ವಿಶ್ವವಿದ್ಯಾಲಯದ ಅಧೀನದ 12 ಕಾಲೇಜುಗಳು ಈ ಶೈಕ್ಷಣಿಕ ವರ್ಷದಲ್ಲಿ ಬಾಗಿಲು ಹಾಕಲಿವೆ.
ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದದಲ್ಲಿ ಅನೇಕ ಸಮಸ್ಯೆ ಎದುರಿಸುತ್ತಿರುವ ಕಾಲೇಜುಗಳು ಬಂದ್‌ ಆಗುವುದು ನಿಶ್ಚಿತ ಎಂದೇ ಹೇಳಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಅಧಿಕಾರಿ ವರ್ಗವೊಂದು ಹೇಳುವಂತೆ, ಒಟ್ಟು 12 ಕಾಲೇಜುಗಳು ಸಂಕಷ್ಟ ಎದುರಿಸುತ್ತಿವೆ. ಪಿಯು ಕಾಲೇಜುಗಳು ಮತ್ತು ಹೊಸದಾಗಿ ತೆರೆದ ಸಂಜೆ ಕಾಲೇಜುಗಳು ಇಕ್ಕಟ್ಟಿಗೆ ಸಿಲುಕಿವೆ. ವಿದ್ಯಾರ್ಥಿಗಳನ್ನು ಆಕರ್ಷಿಸಲು ಇವುಗಳಿಂದ ಸಾಧ್ಯವಾಗದ್ದೇ ಅಸ್ತಿತ್ವಕ್ಕೆ ಆತಂಕ ತಂದಿದೆ ಎಂದಿದ್ದಾರೆ. (ಹೊಳಪು ಕಳೆದುಕೊಳ್ಳುತ್ತಿರುವ ಐಐಎಸ್‌ಸಿ ಬೆಂಗಳೂರು)

Bangalore university

ಕೆಲ ಕಾಲೇಜುಗಳ ಆಡಳಿತ ಮಂಡಳಿ ನಮ್ಮಿಂದ ಸಂಸ್ಥೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಈ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೂ ನೀಡಲಾಗಿದ್ದು, ಸರ್ಕಾರದ ಆದೇಶದಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ವಿಭಾಗದ ರಿಜಿಸ್ಟ್ರಾರ್‌ ಕೆ.ಕೆ.ಸೀತಮ್ಮ ತಿಳಿಸಿದ್ದಾರೆ.

ಒಂದು ವೇಳೆ ಈ ಕಾಲೇಜುಗಳು ಬಾಗಿಲು ಹಾಕಿದ್ದೇ ಆದರೆ ಬಿಎ ಮತ್ತು ಬಿಎಸ್ಸಿ ವಿಭಾಗಗಳು ತಮ್ಮ ಛಾಪು ಕಳೆದುಕೊಳ್ಳುತ್ತವೆ. ಕಾಲೇಜು ಮತ್ತು ಆಡಳಿತ ಮಂಡಳಿಯ ಮೇಲೂ ಇದು ಖಂಡಿತ ಪರಿಣಾಮ ಬೀರಲಿದೆ.

ಕೇವಲ ಬಿಎಸ್ಸಿ ಕೋರ್ಸ್ ಗೆ ಕಂಟಕ ಎದುರಾಗಲಿದೆ ಎಂದು ಮೊದಲು ಹೇಳಲಾಗಿತ್ತು. ವಿದ್ಯಾರ್ಥಿಗಳ ಕೊರತೆಯಿಂದ ನಗರದ ಅನೇಕ ಕಾಲೇಜುಗಳ ವಿಜ್ಞಾನ ವಿಭಾಗ ಬಾಗಿಲು ಹಾಕಲು ಸಿದ್ಧವಾಗಿ ನಿಂತಿವೆ. ಬೆಂಗಳೂರು ವಿವಿಯೇ 507 ಕಾಲೇಜುಗಳಿಗೆ ಸಾಮಾನ್ಯ ಕೋರ್ಸ್ ಆರಂಭಿಸಲು ಕೇಳಿಕೊಂಡಿತ್ತು.

ಈ ಎಲ್ಲ ಬೆಳವಣಿಗೆಗಳು ಸಂಯೋಜಿತ ಕಾಲೇಜುಗಳ ಅಸ್ತಿತ್ವಕ್ಕೆ ಹೊಡೆತ ನೀಡಿದವು. ಒಟ್ಟು 614 ಸಂಯೋಜಿತ ಕಾಲೇಜುಗಳಿದ್ದ ಜಾಗದಲ್ಲಿ ಈಗ 590 ಕಾಲೇಜುಗಳು ಉಳಿದುಕೊಂಡಿದ್ದವು. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಇದಕ್ಕೆ ಮತ್ತೆ 22 ಕಾಲೇಜುಗಳು ಸೇರ್ಪಡೆಯಾಗಿವೆ.

ಬಿ.ಇಡಿ ಕಾಲೇಜುಗಳ ಗೊಂದಲ
ಬಿ.ಇಡಿ ಕಾಲೇಜುಗಳಿಗೆ ಗೊಂದಲಗಳು ಸುತ್ತಿಕೊಂಡಿವೆ ಒಟ್ಟು 121 ಕಾಲೇಜುಗಳಲ್ಲಿ ಕೇವಲ 61 ಕಾಲೇಜುಗಳು ಸರಿಯಾದ ರೀತಿ ಕೋರ್ಸ್ ಗೆ ನ್ಯಾಯಸಲ್ಲಿಸುತ್ತಿವೆ ಎಂದು ಹೇಳಲಾಗಿದೆ. ಒಂದೂ ತರಗತಿಗೆ ಹಾಜರಾಗದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ ಎಂಬ ಆರೋಪವೂ ಇದೆ. ಇದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದ್ದು ಬೆಂಗಳೂರು ವಿಶ್ವವಿದ್ಯಾಲಯ ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಮಾತು ಕೇಳಿಬಂದಿದೆ.

ಬಿ.ಇಡಿ ಒಂದು ವರ್ಷದ ಕೋರ್ಸ್ ಆಗಿದ್ದು ವಿದ್ಯಾರ್ಥಿಳಿಗೆ ತಿಳಿವಳಿಕೆ ನೀಡಲಾಗಿದೆ. ಬಾಕಿ ಗೊಂದಲ ನಿವಾರಣೆಗೆ ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸೀತಮ್ಮ ತಿಳಿಸಿದ್ದಾರೆ.

English summary
The colleges, which offered science, arts and commerce courses, have indicated their inability to function further.Officials in BU’s affiliation section said that among the 12 colleges — all offering undergraduate courses — some were newly-opened evening colleges that failed to attract students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X