ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುಜಿಡಿ ಕಾಮಗಾರಿ: ಮಣ್ಣು ಕುಸಿದು ಕಾರ್ಮಿಕ ಸಾವು

|
Google Oneindia Kannada News

ಬೆಂಗಳೂರು, ಆ. 29 : ಮಹಾನಗರ ಹೊರವಲಯದ ನಲ್ಲೂಗಹಳ್ಳಿ ಬಳಿ ಯುಜಿಡಿ ಕಾಮಗಾರಿ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮಣ್ಣು ಕುಸಿದು ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದಾನೆ.

ಗುಲ್ಬರ್ಗಾ ಮೂಲದ ಕಾರ್ಮಿಕ ಸಲೀಂ ಮೃತಪಟ್ಟಿದ್ದು ಇನ್ನೋರ್ವ ಕೆಲಸಗಾರ ಹುಸೇನ್‌ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 16 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದಾಗ ಮಣ್ಣು ಕುಸಿದಿದೆ. ಆದರೆ ಸಲೀಂ ಮೇಲೆ ಸಂಪೂರ್ಣ ಮಣ್ಣು ಮುಚ್ಚಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಣ್ಣಿನ ಅಡಿ ಸಿಲುಕಿದ್ದ ಹುಸೇನ್‌ ಅವರನ್ನು ತಕ್ಷಣ ರಕ್ಷಣೆ ಮಾಡಲಾಗಿದೆ.

ugd

ಇನ್ನು ಸುಮಾರು 200 ಮೀಟರ್‌ ಅಡಿ ಉದ್ದದ ಯುಜಿಡಿ ಕಾಮಗಾರಿ ನಡೆಯಬೇಕಿತ್ತು. ಯುಜಿಡಿ ಕಾಲುವೆಯನ್ನು 14-18 ಅಡಿ ಆಳದವರೆಗೆ ತೆಗೆಯಲಾಗಿತ್ತು. ಕಾಲುವೆ ಮಧ್ಯದಲ್ಲಿ ಕೆಲಸ ಮಾಡುತ್ತಿದ್ದಾಗ ಮಣ್ಣು ಕುಸಿದು ಅವಘಡ ಸಂಭವಿಸಿದೆ.

English summary
Bangalore: One labour dead and one more person injured who are working for UGD near Nalluganahalli on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X