ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ, ಹೊಸಪೇಟೆ ಬಸ್ ಹತ್ತಲು ಪೀಣ್ಯಕ್ಕೆ ಹೋಗಿ

|
Google Oneindia Kannada News

ಬೆಂಗಳೂರು, ಸೆ. 19 : ಹಂತ-ಹಂತವಾಗಿ ಮೆಜೆಸ್ಟಿಕ್‌ ಬಸ್ ನಿಲ್ದಾಣದಿಂದ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಕೆಎಸ್ಆರ್‌ಟಿಸಿ ಬಸ್ಸುಗಳನ್ನು ಸ್ಥಳಾಂತರ ಮಾಡುತ್ತಿದೆ. ಬಳ್ಳಾರಿ, ಹೊಸಪೇಟೆ ವಲಯದ ವೇಗದೂತ ಬಸ್ಸುಗಳು ಸೆ.21ರಿಂದ ಪೀಣ್ಯ ನಿಲ್ದಾಣದಿಂದ ಸಂಚರಿಸಲಿವೆ.

ಕೆಎಸ್ಆರ್‌ಟಿಸಿ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕೆಂಪೇಗೌಡ ಬಸ್‌ ನಿಲ್ದಾಣದಿಂದ ಕಾರ್ಯಾ­ಚರಣೆ ಮಾಡುತ್ತಿರುವ ಬಳ್ಳಾರಿ, ಹೊಸಪೇಟೆ ವಲಯದ ವೇಗ­ದೂತ ಸಾರಿಗೆಗಳು ಸೆ. 21ರ ಭಾನುವಾರದಿಂದ ಪೀಣ್ಯದ ಬಸವೇಶ್ವರ ಸ್ಯಾಟಲೈಟ್‌ ಬಸ್‌ ನಿಲ್ದಾಣದಿಂದ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ.

Basaveshwara bus stand

ಮಾರ್ಗಗಳು : ಬಸವೇಶ್ವರ ಬಸ್ ನಿಲ್ದಾಣದಿಂದ ಬಾದಾಮಿ, ಇಳಕಲ್‌, ಮುಂಡರಗಿ, ಗಂಗಾವತಿ, ಹೊಳೆ ಆಲೂರು, ಜಮ­ಖಂಡಿ, ಗಜೇಂದ್ರಗಡ, ಬೀಳಗಿ, ಮಂತ್ರಾ­ಲಯ, ರಾಯದುರ್ಗ, ಹೊಸಪೇಟೆ, ಲಿಂಗಸಗೂರು, ಸಿಂಧ­ನೂರು, ಬಳ್ಳಾರಿ, ಶಹಪುರ, ಚಳ್ಳಕೆರೆ, ಮೊಳಕಾಲ್ಮೂರು, ನಾಯಕನಹಟ್ಟಿ, ಜಗಳೂರು, ಸಿರಗುಪ್ಪ, ವಿದ್ಯಾನಗರ, ಜಾಲಹಳ್ಳಿ, ದೋಣಿಮಲೈ, ದೇವ­ದುರ್ಗ, ಕುಷ್ಠಗಿ, ರಾಯಚೂರು. [ಪೀಣ್ಯ ನಿಲ್ದಾಣದ ವಿರುದ್ಧ ಪ್ರಯಾಣಿಕರ ಅಸಮಾಧಾನ]

ಕುಕ್ಕನೂರು, ಮಾನ್ವಿ, ಕೊಪ್ಪಳ, ಔರಾದ್‌, ಚಿಂಚೋಳಿ, ಗುರುಮಿಠ್ಕಲ್‌, ಗುಲ್ಬರ್ಗ, ಬೀದರ್‌, ಸೇಡಂ, ಹಟ್ಟಿ, ಜೇವರ್ಗಿ, ಯಾದ­ಗಿರಿ, ಚಿತ್ತಾಪುರ, ಸುರಪುರ, ಮಸ್ಕಿ, ಆಳಂದ, ನಾರಾಯಣಪುರ, ಕಂಪ್ಲಿ, ಯಲಬುರ್ಗ, ಕೂಡ್ಲಗಿ, ಬಸವ­ಕಲ್ಯಾಣ, ಇಂಡಿ, ಮುದ್ದೇಬಿಹಾಳ, ತಾಳಿಕೋಟೆ, ಬಸವನ­ಬಾಗೇವಾಡಿ, ಕನಕಗಿರಿ, ವಿಜಾಪುರ, ನರಸಾಪುರ ಮುಂತಾದ ಪ್ರದೇಶಗಳಿಗೆ ಸಾಗುವ 158 ಬಸ್ಸುಗಳು ಭಾನುವಾರದಿಂದ ಸಂಚರಿಸಲಿವೆ.[ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಹೇಗಿದೆ?]

ಈಗಾಗಲೇ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಸೆ.10ರಿಂದ ಹುಬ್ಬಳ್ಳಿ, ದಾವಣಗೆರೆ ವಲ­ಯದ 146 ಸಾಮಾನ್ಯ ಬಸ್ಸುಗಳು ಕಾರ್ಯಾ­ಚರಣೆ ಆರಂಭಿಸಿವೆ. ಪೀಣ್ಯಕ್ಕೆ ತೆರಳಲು ಮೆಜೆಸ್ಟಿಕ್‌ನಿಂದ 10 ಸಂಪರ್ಕ ಸಾರಿಗೆ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಭಾನುವಾರದಿಂದ ಇದನ್ನು 14ಕ್ಕೆ ಏರಿಕೆ ಮಾಡಲಾಗುತ್ತದೆ ಎಂದು ಕೆಎಸ್ಆರ್‌ಟಿಸಿ ತಿಳಿಸಿದೆ.

English summary
From September 21 Sunday, commuters from Bangalore traveling to Bellary and Hospet destinations will have to board Karnataka State Road Transport Corporation (KSRTC) buses from the Basaveshwara bus stand in Peenya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X