ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅದೇ ಗತ್ತಿನಲ್ಲಿ ವಿಧಾನಸೌಧಕ್ಕೆ ಬಂದ ಅಂಬರೀಶ್

|
Google Oneindia Kannada News

ಬೆಂಗಳೂರು, ಏ. 23 : ಕರ್ನಾಟಕವನ್ನು ಗುಡಿನಸಲು ಮುಕ್ತ ರಾಜ್ಯವಾಗಿ ಮಾಡುವುದೇ ನನ್ನ ಗುರಿ ಎಂದು ವಸತಿ ಸಚಿವ ಅಂಬರೀಶ್ ಹೇಳಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಬುಧವಾರ ಮೊದಲ ಬಾರಿ ವಿಧಾನಸೌಧಕ್ಕೆ ಆಗಮಿಸಿದ ಅಂಬರೀಶ್ ಇಲಾಖಾ ಅಧಿಕಾರಿಗಳ ಸಭೆ ನಡೆಸಿದರು.

ಅನಾರೋಗ್ಯದಿಂದ ಚೇತರಿಸಿಕೊಂಡಿರುವ ವಸತಿ ಸಚಿವ ಅಂಬರೀಶ್ ಬುಧವಾರ ವಿಧಾನಸೌಧಕ್ಕೆ ಅದೇ ಗತ್ತಿನಲ್ಲಿ ಆಗಮಿಸಿದ್ದರು. ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ಅವರು, ಹಲವಾರು ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. [ವಿಧಾನಸೌಧಕ್ಕೆ ಗೂಬೆ ಬಂತು : ಯಾರಿಗೆ ಲಾಭ]

Ambareesh

ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅಂಬರೀಶ್ ರಾಜ್ಯದಲ್ಲಿ ಮೂರು ವರ್ಷಗಳಲ್ಲಿ 12 ಲಕ್ಷ ಮನೆಗಳನ್ನು ನಿರ್ಮಾಣ ಇಲಾಖೆ ವತಿಯಿಂದ ಯೋಜನೆ ರೂಪಿಸಲಾಗಿದೆ. ಪ್ರತಿಯೊಬ್ಬರ ಬಡವರಿಗೂ ಉತ್ತಮ ಗುಣಮಟ್ಟದ ಮನೆ ನಿರ್ಮಾಣ ಮಾಡಿಕೊಡುವುದು ನಮ್ಮ ಉದ್ದೇಶ ಎಂದು ತಿಳಿಸಿದರು. [ರಮ್ಯಾ ಸೋತರೆ ಅಂಬಿ ಮನೆಗೆ]

ಸರ್ಕಾರ ಅಧಿಕಾರಕ್ಕೆ ಬಂದಾಗಲೇ ನಾನು ಸ್ಪಷ್ಟವಾಗಿ ಹೇಳಿದ್ದೇನೆ ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯ ಮಾಡುವುದು ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ವಸತಿ ಇಲಾಖೆಯಿಂದ ಅಗತ್ಯ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಸ್ಲಂಗಳಿರುವ ಸ್ಥಳಗಳಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು. [ಪೊಲೀಸರಿಗೆ 11,500 ವಸತಿ ಗೃಹ]

ರಮ್ಯಾ ಗೆಲುವು ಖಚಿತ : ಮಂಡ್ಯ ಕ್ಷೇತ್ರದಲ್ಲಿ ರಮ್ಯಾ ಜಯಗಳಿಸುವರೇ ಎಂದು ಕೇಳಿದ ಮಾಧ್ಯಮದವರಿಗೆ ಉತ್ತರಿಸಿದ ಅಂಬರೀಶ್ ಮಂಡ್ಯದಲ್ಲಿ ರಮ್ಯಾ ಗೆಲುವು ಖಚಿತ. ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚು ಮತದಾನ ಮಾಡಿದ್ದಾರೆ. ರಮ್ಯ ಅವರು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳನ್ನು ಮೆಚ್ಚಿ ಅವರಿಗೆ ಬೆಂಬಲ ನೀಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
The State government has proposed plan for made Karnataka to be a slum free said, Minister for Housing M.H. Ambareesh. Addressing press meet after a review meet with officials at Vidhana Soudha Ambareesh said, his ministry will soon introduce schemes to build 12 lacks house in states for poor people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X