ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಜೆಯರ ಡಾಕ್ಟರ್ ಗುರುಮೂರ್ತಿ ಬೆಂಗ್ಳೂರಲ್ಲಿ ಬಂಧನ

|
Google Oneindia Kannada News

ಬೆಂಗಳೂರು, ಜ.22 : ಮಹಿಳೆಯರಲ್ಲಿನ ಬಂಜೆತನ ಶೇ100ರಷ್ಟು ನಿವಾರಿಸುವೆ ಎಂದು ಹೇಳಿ ಹಲವು ಮಹಿಳೆಯರಿಗೆ ವಂಚಿಸಿದ ಆರೋಪದ ಮೇಲೆ ನಗರದ ಸೃಷ್ಟಿ ಗ್ಲೋಬಲ್ ಮೆಡಿಕೇರ್ ಹಾಗೂ ರಿಸರ್ಚ್ ಫೌಂಡೇಶನ್ ನ ವೈದ್ಯ ಕೆ.ಟಿ.ಗುರುಮೂರ್ತಿ ಅವರನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಗುರುಮೂರ್ತಿ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

30ಕ್ಕೂ ಹೆಚ್ಚು ಮಹಿಳೆಯರು ನೀಡಿದ ದೂರಿನ ಅನ್ವಯ ಕಾಮಾಕ್ಷಿಪಾಳ್ಯ ಪೊಲೀಸರು ಸೋಮವಾರ ಸಂಜೆ ಕೆಟಿ ಗುರುಮೂರ್ತಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಬುಧವಾರ ಮಧ್ಯಾಹ್ನ ಗುರುಮೂರ್ತಿ ಅವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. [ಗುರುಮೂರ್ತಿಗೆ ಪೊಲೀಸ್ ವಶಕ್ಕೆ]

KT Gurumurthy

ನ್ಯಾಯಾಲಯವು ಕೆಟಿ ಗುರುಮೂರ್ತಿ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಗುರುಮೂರ್ತಿ ಮೆಡಿಕೆರ್ ಸೆಂಟರ್ ಆರಂಭಿಸಿದ್ದಾರೆ. ನಕಲಿ ದಾಖಲೆಗಳನ್ನು ಇಟ್ಟುಕೊಂಡು ತಾಣು ವೈದ್ಯ ಎಂದು ಜನರಿಗ ವಂಚಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಂಜೆತನ ನಿವಾರಿಸುವ ನೆಪದಲ್ಲಿ 2 ರಿಂದ 12 ಲಕ್ಷ ರೂ.ಗಳ ವರೆಗೆ ವಸೂಲಿ ಮಾಡುತ್ತಿದ್ದರು ಎಂಬ ಆರೋಪಗಳು ಗುರುಮೂರ್ತಿ ಅವರ ಮೇಲಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ, ನಂದಿನಿ ಲೇಔಟ್, ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಅವರನ್ನು ಪೊಲೀಸರು ಬಂಧಿಸಿದ್ದಾರೆ. [ಗುರುಮೂರ್ತಿ ವಿರುದ್ಧದ ಆರೋಪಗಳು]

ಟಿವಿ 9 ಕನ್ನಡ ವಾಹಿನಿಯಲ್ಲಿ ಗುರುಮೂರ್ತಿ ನಕಲಿ ವೈದ್ಯ ಎಂಬುದನ್ನು ನಿರೂಪಿಸಿದ 'ಬೇಟೆ' ಕಾರ್ಯಕ್ರಮ ಪ್ರಸಾರವಾದ ಮೇಲೆ ಈ ಗುರುಮೂರ್ತಿಗೆ ಕಟಂಕ ಆರಂಭವಾಗಿತ್ತು, ಕಾರ್ಯಕ್ರಮ ಪ್ರಸಾರವಾದ ನಂತರ ಗುರುಮೂರ್ತಿ ಅವರಿಂದ ವಂಚನೆಗೆ ಒಳಗಾದ ಮಹಿಳೆಯರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಅನ್ವಯ ಸೋಮವಾರದಿಂದ ಅವರ ವಿಚಾರಣೆ ನಡೆಸಿದ್ದ ಪೊಲೀಸರು ಬುಧವಾರ ಬಂಧಿಸಿದ್ದಾರೆ.

English summary
Kamakshipalya police arrested KT Gurumurthy of Srushti Global Medicare and Research Foundation founder. More than 30 women lodged complaints against him alleged that, KT Gurumurthy cheating them by promising surrogate babies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X