ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಜಯಾ ಸಾಮಾನ್ಯ ಖೈದಿ, ಎಸಿ, ಟಿವಿ ಕೊಟ್ಟಿಲ್ಲ'

By Mahesh
|
Google Oneindia Kannada News

ಬೆಂಗಳೂರು, ಅ.2: ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿಯಾಗಿರುವ ಎಐಎಡಿಎಂಕೆ ನಾಯಕಿ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ವಿಐಪಿ ಖೈದಿ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂಬ ಸುದ್ದಿಯನ್ನು ಜೈಲಿನ ಅಧಿಕಾರಿ ಜಯಸಿಂಹ ಅವರು ತಳ್ಳಿ ಹಾಕಿದ್ದಾರೆ.

66 ವರ್ಷ ವಯಸ್ಸಿನ ಜಯಲಲಿತಾ ಅವರಿಗೆ ಇಲ್ಲಿನ ಊಟ ಸರಿಹೊಂದುತ್ತಿಲ್ಲ ಎಂಬ ಕಾರಣಕ್ಕೆ ಹೊರಗಡೆಯಿಂದ ಊಟ ತರೆಸಿಕೊಳ್ಳಲು ಅನುಮತಿ ನೀಡಲಾಗುತ್ತಿತ್ತು. ಉಳಿದಂತೆ ಅವರು ಸಾಮಾನ್ಯ ಖೈದಿಯಂತೆ ಸರಳ ಆಹಾರವನ್ನೇ ಸೇವಿಸುತ್ತಿದ್ದಾರೆ, ಆರೋಗ್ಯದಿಂದಿದ್ದಾರೆ.

ಜಯಲಲಿತಾ ಅವರಿಗೆ ಎಸಿ ರೂಮ್ ನೀಡಿಲ್ಲ, ಅವರಿರುವ ರೂಮಿಗೆ ಟಿವಿ ಕೇಬಲ್ ಕನೆಕ್ಷನ್ ಕೊಟ್ಟಿಲ್ಲ ಎಂದಿದ್ದಾರೆ. ಮಧುಮೇಹ, ರಕ್ತದೊತ್ತಡ ಎಲ್ಲವೂ ನಿಯಂತ್ರಣದಲ್ಲಿದೆ. ಬೆನ್ನು ನೋವು, ಹೊಟ್ಟೆ ನೋವು ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. [ಜಯಲಲಿತಾ ಆರೋಗ್ಯ ಸ್ಥಿರ]

Jayalalithaa eats simple food, reads newspapers in prison

ಜಯಾ ಏನು ತಿನ್ನುತ್ತಾರೆ: ಬೆಳಗ್ಗೆ ಉಪಹಾರಕ್ಕೆ ಸಾಮಾನ್ಯವಾಗಿ ಇಡ್ಲಿ ಸಾಂಬಾರ್ ಅಥವಾ ದೋಸೆ ತಿನ್ನುತ್ತಿದ್ದಾರೆ. ಊಟಕ್ಕೆ ಒಂದೆರಡು ಚಪಾತಿ, ಅನ್ನ ಸೇವಿಸುತ್ತಾರೆ. ಉಳಿದಂತೆ ಬ್ರೆಡ್, ಹಾಲು ಅಥವಾ ಬಿಸ್ಕೆಟ್ ಪ್ರತಿನಿತ್ಯ ತಿನ್ನುತ್ತಿದ್ದಾರೆ. ಜೈಲಿನಲ್ಲಿ ನೀಡುವ ಊಟವನ್ನೇ ಅವರು ತಿನ್ನುತ್ತಿದ್ದಾರೆ ಮೈಸೂರು ಮೂಲದ ಪೊಲೀಸ್ ಅಧಿಕಾರಿ ಶ್ರೀವಿದ್ಯಾ ಅವರು ಜಯಲಲಿತಾ ಅವರಿರುವ ಸೆಲ್(23) ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಯಾವುದೇ ಕ್ಷಣದಲ್ಲಿ ಬೇಕಾದರೂ ವೈದ್ಯಕೀಯ ತುರ್ತು ಪರಿಸ್ಥಿತಿ ಒದಗಿದರೆ ಸೇವೆ ಒದಗಿಸಲು ಆರಕ್ಕೂ ಅಧಿಕ ನುರಿತ ವೈದ್ಯರಿದ್ದಾರೆ. ಖೈದಿ ನಂಬರ್ 7402 ಜಯಲಲಿತಾ ಅವರು ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ವಾಕಿಂಗ್ ಮಾಡುತ್ತಾರೆ. ದಿನಪತ್ರಿಕೆಗಳನ್ನು ಓದುತ್ತಾರೆ ಎಂದು ಅಧಿಕಾರಿ ಜಯಸಿಂಹ ಹೇಳಿದ್ದಾರೆ. [ಜಯಲಲಿತಾಗೆ ಕಾಡಿದ 9ವಿವಾದಗಳು]

ಯಾರನ್ನೂ ಭೇಟಿ ಆಗಿಲ್ಲ: ತಮಿಳುನಾಡಿನ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರನ್ನೇ ಭೇಟಿ ಮಾಡಲು ಜಯಲಲಿತಾ ಅವರು ನಿರಾಕರಿಸಿದರು. ಇದುವರೆವಿಗೂ ಯಾವುದೇ ಸಂದರ್ಶಕರನ್ನು ಕಾಣಲು ಜಯಲಲಿತಾ ಅವರು ಬಯಸಿಲ್ಲ ಎಂದರು. [ವೆಬ್ ತಾಣದಿಂದ ಜಯಾ ಔಟ್]

ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಇತರೆ ಆರೋಪಿಗಳಾದ ಶಶಿಕಲಾ ನಟರಾಜನ್(7403), ಇಳವರಸಿ(7404), ಸುಧಾಕರನ್(7405) ಅವರ ಆರೋಗ್ಯವೂ ಸ್ಥಿರವಾಗಿದೆ ಎಂದು ಜೈಲಿನ ಅಧಿಕಾರಿ ಜಯಸಿಂಹ ಅವರು ಪಿಟಿಐಗೆ ತಿಳಿಸಿದ್ದಾರೆ. ಸುಧಾಕರನ್ ಅವರ ವಿಐಪಿ ಸೆಲ್ ಪಕ್ಕದಲ್ಲೇ ಕರ್ನಾಟಕದ ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಸೆಲ್ ಇದೆ. ಆದರೆ, ರೆಡ್ಡಿ ಅವರಿಗೂ ಜಯಲಲಿತಾ ಅವರ ಭೇಟಿ ಸಾಧ್ಯವಾಗಿಲ್ಲ ಎಂದು ಸುದ್ದಿಸಂಸ್ಥೆಗೆ ವಿಷಯ ಮುಟ್ಟಿದೆ.

English summary
AIADMK supremo Jayalalithaa is keeping good health and eating simple food besides reading newspapers at the Parapanna Agrahara Central prison where she is lodged after conviction in the disproportionate assets case, according to jail official Jayasimha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X